ಜಾತಿ ಸಂವಾದ - ಅಭಿಪ್ರಾಯ 1

ಬಹು ದೇವರಿಂದ ಬಹು ಜಾತಿ
-ವಿದ್ವಾನ್ ವೀರೇಂದ್ರ ಭಟ್ಟ ಉಂಚಳ್ಳಿ ಸಿದ್ದಾಪುರ

ವೇದ ಕಾಲದಲ್ಲಿನ ವರ್ಣ ವ್ಯವಸ್ಥೆಯನ್ನು ಗಮನಿಸಿದರೆ ಮಾಡುವ ಕೆಲಸದಿಂದ ವರ್ಣ ವ್ಯವಸ್ಥೆ ರೂಪಗೊಂಡಿದನ್ನು ಕಾಣಬಹುದು. ಹಾಗಾಗಿ ಜಾತಿ ಎನ್ನುವುದು ವೃತ್ತಿ ಸೂಚಕವಾಗಿತ್ತು. ಭಾರತದಲ್ಲಿ ಪ್ರತಿಯೊಂದು ವೃತ್ತಿಯು ವಂಶಪಾರಂಪರ್ಯವಾಗಿ ನಡೆದು ಬರುತ್ತಿದ್ದುದರಿಂದ ಕಾಲಾನುಕ್ರಮದಲ್ಲಿ ನಿರ್ದಿಷ್ಟ ವೃತ್ತಿನಿರತರ ಗುಂಪು ಒಂದು ಜಾತಿಯಾಗಿ ಮಾರ್ಪಟ್ಟಿದೆ. ಮನುಷ್ಯ ದೇವರನ್ನು ನಂಬುತ್ತಾನೆ. ಅವನು ತನ್ನ ಜಾತಿಗೂ ಅದರೊಂದಿಗೆ ಸಂಬಂಧ ಕಲ್ಪಿಸಿಕೊಂಡ. ಜನರು ಬೇರೆ ಬೇರೆ ದೇವರುಗಳನ್ನು ನಂಬುವುದರಿಂದ ಜಾತಿಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಿದೆ. ಈ ನಂಬಿಕೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಭಿನ್ನಭಿನ್ನವಾಗಿರುವುದರಿಂದ ಎಲ್ಲರು ಒಂದೇ ಜಾತಿಯೊಳಗೆ ಜೀವಿಸಬಹುದು ಎನ್ನುವುದು ಕೂಡ ಅಸಾಧ್ಯದ ಮಾತಾಗಿ ತೋರುತ್ತದೆ.

comments powered by Disqus
Top