ಜಾತಿ ಸಂವಾದ - ಅಭಿಪ್ರಾಯ 2

ಜಾತಿ ನಿರ್ಮೂಲನೆ ಸಾಧ್ಯವಿಲ್ಲ
ಭಾಗ್ಯ ದೋಟಿಹಾಳ/ ಬೆಂಗಳೂರು

ಜಾತಿ ಎಂಬ ಸಮಸ್ಯೆ ಕೇವಲ ಭಾರತವನ್ನಷ್ಟೇ ವ್ಯಾಪಿಸಿಲ್ಲ. ಇದು ವಿಶ್ವದ ಎಲ್ಲ ದೇಶಗಳಲ್ಲೂ ಜಾತಿ ಪದ್ಧತಿಯ ವಿವಿಧ ರೂಪಗಳನ್ನು ನೋಡಬಹುದು. ಈ ಜಾತಿ ವ್ಯವಸ್ಥೆಯನ್ನು ವಿಶ್ವದ ಯಾವ ದೇವರು ಸೃಷ್ಟಿಸಲಿಲ್ಲ. ಜಾತಿ ವ್ಯವಸ್ಥೆಯನ್ನು ನಮ್ಮ ಹಿರಿಯರು ತಮ್ಮ ಕಿರಿಯರ ಅನುಕೂಲಕ್ಕಾಗಿ ಮಾಡಿದ್ದು.  ಕಾಡಿನಲ್ಲಿದ್ದ ಮಾನವನು ನಾಗರಿಕ ಜಗತ್ತಿನಲ್ಲಿ ತನ್ನ ಆಸ್ತಿತ್ವವನ್ನು ಕಂಡುಕೊಳ್ಳುತ್ತಿದ್ದಾಗ ತನ್ನ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ವ್ಯವಸ್ಥೆ ಇದು.

ಆದರೆ ಇಂದು ಜಾತಿವ್ಯವಸ್ಥೆಯು ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡು ನಿಂತಿದೆ. ಈ ಕಾಲದಲ್ಲಿ ಮನುಷ್ಯನ ಹುಟ್ಟಿನಿಂದ ಜಾತಿ ನಿರ್ಧರಿಸಲ್ಪಡುತ್ತದೆ. ಆದರೆ ಪೂರ್ವಕಾಲದಲ್ಲಿ ಅವನ ಜಾತಿಯು ಅವನು ಆಯ್ಕೆ ಮಾಡುವ ಕೆಲಸದ ಮೇಲೆ ಅವಲಂಬಿತವಾಗಿತ್ತು. ಒಬ್ಬ ವ್ಯಕ್ತಿ ವೇದ ವಿದ್ಯ ಪಾರಂಗತನಾದರೆ ಅವನನ್ನು ಬ್ರಾಹ್ಮಣನೆಂದು, ಸಾಹಸಮಯ ವಿದ್ಯೆಗಳಲ್ಲಿ ಪರಿಣಿತಿ ಹೊಂದಿದರೆ ಅವನನ್ನು ಕ್ಷತ್ರಿಯನೆಂದೂ, ಅವನು ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ತೋರಿಸಿದರೆ ಅವನನ್ನು ವೈಶ್ಯನೆಂದು, ಆದರೆ ಇದು ಯಾವುದನ್ನು ಮಾಡದೇ ಈ ಜನಗಳ ಸೇವೆ ಮಾಡಿಕೊಂಡಿರಲು ಬಯಸಿರುವನನ್ನು ಶೂದ್ರನೆಂದು ಕರೆಯಲಾಗುತ್ತಿತ್ತು.

ಇದು ಅಂದಿನ ಸಾಮಾಜಿಕ ವ್ಯವಹಾರಗಳು ಸರಿಯಾಗಿ ನಡೆದುಕೊಂಡು ಬರಲು ಕಾರಣವಾಗಿತ್ತು. ಯಾರು ಬೇಕಾದರೂ ಯಾವ ಜಾತಿಯನ್ನು ಅನುಸರಿಸಬಹುದಾಗಿತ್ತು. ಅಂದು ಅಂತರ್ಜಾತಿಯ ವಿವಾಹಗಳಿಗೆ ಮನ್ನಣೆ ಇತ್ತು. ಮುಂದೆ ಈ ವರ್ಣ ವ್ಯವಸ್ಥೆ ಬಲಿಷ್ಟಗೊಂಡು ಜಾತಿ,ಉಪಜಾತಿಯಾಗಿ ಟಿಸಿಲು ಒಡೆಯಿತು. ಆದರೆ ಈಗ ಜಾತಿ ತನ್ನ ಮೂಲ ಸ್ವರೂಪವನ್ನೇ  ಕಳೆದುಕೊಂಡಿದೆ.

 ಈಗ ಜಾತಿ ಒಂದು ಸಾಮಾಜಿಕ ವ್ಯವಸ್ಥೆಯಾಗಿರದೇ ಒಂದು ರಾಜಕೀಯ ಅಸ್ತ್ರವಾಗಿದೆ.ಒಂದು ಪ್ರಬಲ ವೋಟ ಬ್ಯಾಂಕಆಗಿ ಪರಿವರ್ತನೆ ಆಗಿದೆ.ಇಂದು ಜಾತಿಯು ಕೆಲವರಿಗೆ ಅವಕಾಶಗಳನ್ನು ತೆರೆದಿಟ್ಟರೆ ಕೆಲವರಿಗೆ ಶೋಷಣೆಯಾಗಿದೆ.ಅಸ್ಪೃಶ್ಯತೆಯಂತಹ ಸಮಸ್ಯೆಯನ್ನು ಹುಟ್ಟು ಹಾಕಿದೆ. ಭಾರತ ಜ್ಯಾತಾತೀತ ರಾಷ್ಟ್ರವಾದರೂ ಇಲ್ಲಿ ಜಾತಿಯದೇ ಮೇಲುಗೈ. ತಮ್ಮ ಜಾತಿಯನ್ನೇ ತಮ್ಮ ಗೆಲುವಿಗಾಗಿ ನಂಬಿಕೊಂಡ ಅನೇಕ ರಾಜಕೀಯ ಪಕ್ಷಗಳಿವೆ. ಸರ್ಕಾರಿ ನೌಕರಿ ಸೇರಲು ನಾವು ಯಾವ ಜಾತಿಯವರೆಂದು ಹೇಳುವುದು ಜಾತ್ಯಾತೀತ ಭಾರತ ರಾಷ್ಟ್ರದಲ್ಲಿ ಅನಿವಾರ್ಯ.ಆದರೆ ಇಂದು ಜಾತಿಯು ಅಂತಸ್ತನ್ನು ನಿರ್ಧರಿಸುವ ಅಂಶವಾಗಿಲ್ಲ.

ಇಂದು ಎಲ್ಲ ಜಾತಿಗಳಲ್ಲಿಯೂ ಶ್ರೀಮಂತರನ್ನು,ಮತ್ತು ಬಡವರನ್ನು ಕಾಣಬಹುದಾಗಿದೆ. ಎಲ್ಲರೂ ಅಂತಸ್ತು ಮತ್ತು ಸೌಲಭ್ಯಗಳನ್ನು ಹೊಂದಲು ಸಮಾನವಾದ ಅವಕಾಶ ಪಡೆದಿದ್ದಾರೆ.  ತಲೆತಲಾಂತರದಿಂದ ಬಂದಿರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬದಲಿಗೆ ಅದರ ಉದ್ದೇಶವನ್ನು ತಿಳಿದುಕೊಂಡು ಅದನ್ನು ಸುಧಾರಿಸಬೇಕು.
comments powered by Disqus
Top