ಜಾತಿ ಸಂವಾದ - ಅಭಿಪ್ರಾಯ 3

ಜಾತಿ ವ್ಯವಸ್ಥೆ ನಗರದಲ್ಲೂ ಇದೆ
ಯು. ಶ್ರಿನಿವಾಸ ಮೂರ್ತಿ/ ಸಿರುಗುಪ್ಪ

ಜಾತಿ ವ್ಯವಸ್ಥೆ ಕೇವಲ ಹಳ್ಳಿಗಳಲ್ಲಷ್ಟೇ ಎಂಬ ನಂಬಿಕೆ ಹಳೆಕಾಲದಲ್ಲಿತ್ತು ಅದಕ್ಕಾಗಿ ಡಾ|| ಬಿ.ಆರ್. ಅಂಬೇಡ್ಕರ್ ಗ್ರಾಮಗಳು ಜಾತಿಗಳ ಬಿಲಗಳೆಂದು ಕರೆದರು. ಆದರೆ ಈಗ ನಗರಗಳಲ್ಲಿ ಸಹಿತ ಜಾತಿಗೊಂದು ಸಂಘಟನೆ, ಪತ್ರಿಕೆ ಭವನ, ಜಯಂತಿ ಆಚರಣೆ ಹಾಗೂ ಒಂದು ಪಕ್ಷದೊಡನೆ ಗುರುತಿಸಿಕೊಳ್ಳುವುದು ಕಂಡುಬರುತ್ತದೆ. ಮಾತ್ರವಲ್ಲ ರಾಜಕಾರಣಕ್ಕೆ ಜಾತಿ ಅನಿವಾರ್ಯವಾಗಿದೆ ಎಂಬ ಬೆಳವಣಿಗೆ ಪ್ರಾರಂಭವಾಗಿದೆ.

ಈ ಅಂಶಗಳ ಪ್ರತಿಫಲವೋ, ಸಂವಿಧಾನದಬೆಂಬಲವೋ, ಸಾಮಾಜಿಕ ನ್ಯಾಯದ ಪ್ರತಿಫಲವೋ ಹಾಗೂ ಶಿಕ್ಷಣದ ಪ್ರಭಾವದಿಂದಾಗಿ ಅನೇಕ ಪ.ಜಾ. ಪ.ಪಂ. ಹಾಗೂ ಇತರೆ ಹಿಂದುಳಿದ ವರ್ಗಗಳ ಅನೇಕ ಜಾತಿಗಳಲ್ಲಿನ ಸಾಕಷ್ಟು ಜನ ಮುಂದುವರೆದಿದ್ದಾರೆ ಮುಂದುವರೆಯಬೇಕಾದವರು ಇದ್ದಾರೆ. ಈ ಮುಂದುವರೆದ ಜನ ತನ್ನದೆ ಜಾತಿಯ ತಗಿಂತ ಕೆಳಗಿರುವ ಜನರನ್ನು ಅಭಿಮಾನಿಸದ, ಅಕ್ಕರೆಯಿಂದ ನೋಡದೆ, ಮೇಲಕ್ಕೆತ್ತದೆ ಮತ್ತೋಂದು ರೀತಿಯ ಸ್ತರ ವ್ಯವಸ್ಥೆಗೆ ನಾಂದಿ ಹಾಡುತ್ತಿದ್ದಾರೆ.

 ಹೀಗೆ ಮೇಲೆ ಬಂದ ಪ.ಜಾ, ಪ.ಪಂ ಹಾಗೂ ಇತರೆ ಹಿಂದುಳಿದ ವರ್ಗಗಳ ಜನರು ಮೇಲ್ವರ್ಗದವರಂತೆ ಆಡುತ್ತಾ, ಅವರೊಡನೆ ಸೇರಿ ವ್ಯವಹರಿಸುತ್ತಾ, ತಮ್ಮವರನ್ನು ದೂರವಿಡುವ ಸಂಗತಿ ನಮಗೆ ನೆನಪಿಸುವುದೇನೆಂದರೆ, ಪ್ರತಿಯೊಂದು ಜಾತಿಯಲ್ಲೂ ಈಗ ೪ ವರ್ಣಗಳು ಸೃಷ್ಟಿಯಾಗಿವೆ ಎಂಬುದು.  ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು ೪೦೦೦ ಜಾತಿಗಳಿವೆ ಅದರಲ್ಲಿ ಪ್ರತಿಜಾತಿಯಲ್ಲಿ ೪ ವರ್ಣಗಳು ಪ್ರಾರಂಭವಾಗಿವೆ.

ಪ್ರತಿಯೊಂದು  ಜಾತಿಯು ಬ್ರಾಹ್ಮಣರ ಆಚರಣೆ ಬೈಯುತ್ತ, ಬ್ರಾಹ್ಮಣರಂತೆ ವರ್ತಿಸಲು ಯತ್ನಿಸುತ್ತಾರೆ. ನಾವು ಬ್ರಾಹ್ಮಣರಂತೆ ಮೇಲ್ವರ್ಗದವರು ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಪ್ರತಿಯೊಂದು ಜಾತಿಯಲ್ಲಿನ ಸ್ಥಿತಿವಂತರು, ಸುಶಿಕ್ಷಿತರು, ತಮ್ಮವರನ್ನೇ ಶೂದ್ರರಂತೆ ಕಾಣುವ ವ್ಯವಸ್ಥೆ ಹೆಚ್ಚಾಗುತ್ತಿದೆ. ಈ ಬಗ್ಗೆ ಚರ್ಚಿಸುವ ಅಗತ್ಯವಿದೆ.

ವೀರಶೈವ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಮಠಗಳಲ್ಲಿ ಜಾತ್ಯತಿತೆ ಕಂಡುಬರುತ್ತದೆ. ಆದರೆ ಲಿಂಗಾಯತರು ಸ್ವತಃ ಮನೆಯಲ್ಲಿ, ವಠಾರದಲ್ಲಿ ವೈಧಿಕ ಧರ್ಮದ ಆಚರಣೆಗೆ ಒಲವು ತೋರುತ್ತಾರೆ. ಬಸವಣ್ಣನವರ ಅಣತಿಯಂತೆ ಲಿಂಗಾಯತ ಧರ್ಮ ಮನ-ಮನೆಗಳಲ್ಲಿ ಮುನ್ನಡೆದರೆ ಬಹುಶಃ ಪ್ರಪಂಚದ ಅತ್ಯುತ್ತಮ ಧರ್ಮ ಲಿಂಗಾಯತ ಧರ್ಮ ಆಗುವುದರಲ್ಲಿ ಅನುಮಾನವಿಲ್ಲ್ಲ, ಯಾಕೆಂದರೆ ಬಸವಣ್ಣನವರ ವೀರಶೈವ ಧರ್ಮದಲ್ಲಿ ಎಲ್ಲ ಜಾತಿಗಳಿವೆ, ಅವು ಅಲ್ಲಿ ಜಾತಿಗಳಲ್ಲ್ಲ ಬದಲಾಗಿ ಜಾತಿ ಎಂದರೆ ಕಾಯಕ, ಆ ಕಾಯಕದಲ್ಲಿ ಪ್ರತಿಭಾವಂತ, ಅನ್ನಕ್ಕಾಗಿ ಕಾಯಕ, ಮೋಕ್ಷಕ್ಕಾಗಿ ಕಾಯಕ ಎಂಬ ಅರಿವು ಕಾಯಕ ಮಾಡುವಾತನಿಗೆ, ಮಾಡಿಸುವಾತನಿಗೆ ಬಂದರೆ, ಸ್ತರ ರಹಿತ ಸಮಾಜ ಸೃಷ್ಟಿಯಾಗಲು ಸಾಧ್ಯ.
comments powered by Disqus
Top