ಜಾತಿ ಸಂವಾದ - ಅಭಿಪ್ರಾಯ 8

ಜಾತಿ ಮಂಥನ
ಜಿ.ಎಸ್.ಐಯ್ಯರ್, ಮೈಸೂರು.

ಇಂದು ಬಹಳ ಚರ್ಚಿತವಾಗುತ್ತಿರುವ ದಲಿತ-ಬ್ರಾಹ್ಮಣ ಎಂಬ ಜಾತಿ ವಿಷಯದಲ್ಲಿ, ನಾನು ಬ್ರಾಹ್ಮಣ ಸಮುದಾಯದವನಾಗಿರುವುದರಿಂದ ಬ್ರಾಹ್ಮಣರ ಮೇಲೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ನಿವಾರಿಸಲಿಚ್ಚಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರೆಲ್ಲೆರು ದಲಿತವಿರೋದಿಗಳೆಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಕಾರಣಗಳು ಅನೇಕ... 

ನನ್ನ ತಾತ ಮುತ್ತಾತನ ಕಾಲದಲ್ಲಿ ಯಾಕೆ ನನ್ನ ಅಪ್ಪನ ಕಾಲದಲ್ಲಿ ದಲಿತರನ್ನು ಫೋರವಾಗಿ ನಡೆಸಿಕೊಂಡು ಬಂದಿರುವುದೇ ಆಗಿರುತ್ತದೆ. ದಲಿತರನ್ನು ಕೇವಲ ಬ್ರಾಹ್ಮರೇ ಅಷ್ಟೇ ಅಲ್ಲ ಇತರೆ ಜಾತಿಯವರು ಸಹ ಫೋರವಾಗಿ ನಡೆಸಿಕೊಂಡು ಬಂದಿದ್ದರ ಬಗ್ಗೆ ನಾನು ಸ್ವತಃ ಕಂಡಿದ್ದೇನೆ.  ಅದು ಅಕ್ಷಮ್ಯ ಕೂಡ ಹೌದು.  ನಗರೀಕರಣದಿಂದಾಗಿ ಇಂದು ಜಾತಿ ಪದ್ದತಿ ಹಿಂದಿನಂತೆ ಇಲ್ಲ.  ಅದಕ್ಕೆ ದಲಿತರಿಗೆ ಕಾನೂನಿನ ರಕ್ಷಣೆ ಸಹ ದೊರಕಿದೆ. ನನ್ನ ಒಟ್ಟು ಆರು ಸ್ನೇಹಿತರಲ್ಲಿ ನಾಲ್ವರು ದಲಿತ ಕುಟುಂಬದಿಂದ ಬಂದವಾಗಿರುತ್ತಾರೆ.  ನಾನು ಎಲ್ಲರ ಮನೆಗೂ ಹೋಗುತ್ತೇನೆ, ನಮ್ಮ ಮನೆಗೂ ಅವರು ಬರುತ್ತಾರೆ, ನೋವು ನಲಿವುಗಳಲ್ಲಿ ಭಾಗಿಯಾಗುತ್ತೇವೆ, ಒಟ್ಟಿಗೆ ಕುಳಿತು ಊಟೋಪಚಾರ ಮಾಡುತ್ತೇವೆ.  ನಮ್ಮಲ್ಲಿ ಜಾತಿ ಎಂಬ ಬೇಲಿ ಎಂದಿಗೂ ಮೂಡಿಲ್ಲ. 
 
ನಾನು ಕಂಡಂತೆ ಅನೇಕ ಬ್ರಾಹ್ಮಣ ದಲಿತರ ಮಧ್ಯೆ ಮದುವೆಗಳಾಗಿರುವ ಬಗ್ಗೆ ಅನೇಕ ಉದಾಹರಣೆಗಳಿವೆ.  ಹಿಂದೆ ಬ್ರಾಹ್ಮಣ ಹಾಗೂ ಅನೇಕ ಮುಂದುವರಿದ ಸಮುದಾಯದ ಅನೇಕರು ಜಾತಿ ಪದ್ದತಿಯಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ಖಂಡಿಸಿದವರಿದ್ದಾರೆ. ಬಸವೇಶ್ವರ, ರಾಜರಾಮಮೋಹನ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ದಲಿತರ ಪಾಲಿಗೆ ಆರಾಧ್ಯ ದೈವವಾಗಿರುವ ಭೀಮ್ ರಾವ್ ರವರ ಗುರು ಅಂಬೇವಾಡೇಕರ್ ರವರು ಹೀಗೆ ಅನೇಕರು ನಮಗೆ ಉದಾಹರಣೆಯಾಗಿ ಸಿಗುತ್ತಾರೆ.  ನಾನು ನನ್ನ  ಸ್ನೇಹಿತರಿಗೆ ಯಾವಾಗಲೂ ಭೀಮ್ ರಾವ್ ತರಹ ಮೇದಾವಿಯಾಗಿ ಎಂದು ಹೇಳುತ್ತಿದ್ದೆ. ನನಗೂ ಸಹ ಅವರು ಮಾದರಿ ಎನಿಸಿಕೊಂಡಿದ್ದಾರೆ.

ಅಂದು ಜಾತಿ ಹೆಸರಿನಲ್ಲಿ ನಡೆಯುತ್ತಿದ್ದ ಅನೇಕ ಅನ್ಯಾಯಗಳನ್ನು ಭೀಮ್ ರಾವ್ ರವರು ಸ್ವತಃ ಎದುರಿಸಿದ್ದರು.  ಅಂತಹ ಸಮಯದಲ್ಲಿ ಅವರ ಗುರುಗಳಾದ ಅಂಬೇಡ್ಕರ್ ರವರು ನೀಡಿದ ಪ್ರೋತ್ಸಾಹದಿಂದ ಎಲ್ಲಾ ಕಷ್ಟಗಳನ್ನು ಎದುರಿಸಿದರು.  ಉನ್ನತ ಹುದ್ದೆಗೆ ಏರಿದರು.  ನಮ್ಮ ಸ್ವತಂತ್ರ ಭಾರತದ ಸಂವಿಧಾನದ ಶಿಲ್ಪಿಯಾದರು.  ಎಲ್ಲಾ ಹಿಂದುಳಿದವರಿಗೆ ಮಾದರಿಯಾದರು, ದಲಿತರು ದುಷ್ಚಟಗಳಾದ ಮದ್ಯ-ಮಾಂಸ ಸೇವನೆ ಬಿಟ್ಟು ಮುಂದುವರೆದ ಜಾತಿಯವರ ಸಮನಾಗಿ ಬಾಳ ಬೇಕೆಂದು ಕನಸು ಕಟ್ಟಿಕೊಂಡಿದ್ದರು, ಆದರೆ, ಅವರ ಕನಸು ಇಂದಿಗೂ ನನಸಾಗಿಲ್ಲ.  ಆದಕಾರಣ ಈಗಲೂ ಅನೇಕ ಹಿಂದಿಳಿದವರು ಮದ್ಯ-ಮಾಂಸ ಸೇವನೆ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಬಾವಿಸುತ್ತಿದ್ದಾರೆ, ಅದಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.


 ಮೀಸಲಾತಿ ವಿಷಯದಲ್ಲಿ ಮಾತ್ರ ಭೀಮ್ ರಾವ್ ರವರನ್ನು ನೆನೆದಂತೆ ಅವರ ತತ್ವ ಆದರ್ಶಗಳನ್ನು ಮಾತ್ರ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ.  ಜನ್ಮತಾ ಜಾಯತೇ ಶೂದ್ರಃ ಕರ್ಮಣ್ಯೇ ಬ್ರಾಹ್ಮಣಃ ಎಂಬಂತೆ ಒಬ್ಬ ಬ್ರಾಹ್ಮಣನಾಗಿ ಹುಟ್ಟಿದ್ದರು ಅವನು ಅನಾಚಾರವೆಸಗುತ್ತಿದ್ದರೆ, ಅವನು ಬ್ರಾಹ್ಮಣನೆನಿಸಿಕೊಳ್ಳುವುದಿಲ್ಲ. ಶೂದ್ರನಾಗಿ ಹುಟ್ಟಿದ್ದರು ಅವನು ಸತ್ಕರ್ಮಗಳನ್ನು ಮಾಡುತ್ತಿದ್ದರೆ, ಅವನೇ ನಿಜವಾದ ಬ್ರಾಹ್ಮಣನಾಗುತ್ತಾನೆ.  ಉದಾ: ಭೀಮ್ ರಾವ್ ರವರು.  ಒಂದು ವೇಳೆ ಭೀಮ್ ರಾವ್ ರವರು ಇಂದು ಬದುಕಿದ್ದರೆ, ನಾನು ನಮ್ಮ ಸಮುದಾಯದವರಿಗೋಸ್ಕರ ಇಷ್ಟು ಕಷ್ಟ ಪಟ್ಟಿದ್ದು ಯಾವ ಸಾಧನೆಗಾಗಿ ಎಂದು ವ್ಯಥೆ ಪಡುತ್ತಿದ್ದರು.  
 
ಭೀಮ್ ರಾವ್ ರವರು ಎಂದು ಮದ್ಯ-ಮಾಂಸ ಸೇವಿಸಲಿಲ್ಲ. ಎಷ್ಟೇ ಕಾನೂನು ಮಾಡಿದರು ಹಿಂದು ಧರ್ಮದಲ್ಲಿ ಸುಧಾರಣೆ ಆಗುವುದಿಲ್ಲವೆಂದು, ಹಿಂದು ಧರ್ಮಗಳಲ್ಲಿರುವ ಎಲ್ಲಾ ಜಾತಿಗಳವರು ಸಮಾನತೆಯಿಂದ ಬಾಳಲು ಸಾಧ್ಯವಿಲ್ಲವೆಂದು ನೊಂದುಕೊಂಡು ಅವರು ಭೌದ ಧರ್ಮಕ್ಕೆ ಮತಾಂತರಗೊಂಡರು. ಭೀಮ್ ರಾವ್ ರವರ ಗುರುಗಳು ಎಲ್ಲ ಬ್ರಾಹ್ಮಣರಂತೆ ಇದ್ದಿದ್ದರೆ? ಅನ್ಯಾಯದ ವಿರುದ್ದ ಹೋರಾಡಲು ಭೀಮ್ ರಾವ್ ರವರಿಗೆ ಪ್ರೇರಣೆಯಾಗುತ್ತಿರಲ್ಲ. ಆದಕಾರಣ, ಯಾವುದೇ ಸಮಾರಂಭಗಳಲ್ಲಿ ಭಾಷಣ ಮಾಡುವಾಗ ದಲಿತ_ಬ್ರಾಹ್ಮಣವೆಂದು ಜಾತಿ ಆಧಾರದಲ್ಲಿ ಭಾಷಣ ಮಾಡದೇ, ಎಲ್ಲಾ ಜಾತಿಗಳ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರದ ಬಗ್ಗೆ ಪ್ರತಿಭಟಿಸುವ ಕಾರ್ಯವನ್ನು ನಾವೆಲ್ಲ ಅನುಸರಿಸೋದು ನಮ್ಮ ಮುಂದಿನ ಪೀಳಿಗೆಯ ಯೋಗ ಕ್ಷೇಮದ ವಿಚಾರವಾಗಿ ಉತ್ತಮವೆಂದು ಭಾವಿಸುತ್ತೇನೆ.
comments powered by Disqus
Top