ಜಾತಿ ಸಂವಾದ - ಅಭಿಪ್ರಾಯ 3

ಮನುಷ್ಯ ಜಾತಿಯಷ್ಟೇ ಸತ್ಯ
- ಪ್ರಕಾಶ ಎಸ್. ದೊಡಮನಿ,ಹುಬ್ಬಳ್ಳಿ

ಇಂದಿನ ಭಾರತೀಯ ಸಮಾಜದಲ್ಲಿ ಜಾತಿಯು ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಇಂದಿನ ರಾಜಕಾರಣಿಗಳು, ಮನುವಾದಿಗಳು ಮತ್ತು ಸಂಪ್ರದಾಯವಾದಿಗಳಿಗೆ ಜಾತಿ ಅನಿವಾರ್ಯವಾಗಿದೆ. ಆದರೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಾತಿ ಅನಿವಾರ್ಯವಲ್ಲ. ಈ ಜಾತಿ ಪದ್ಧತಿಯಿಂದ ಭಾರತದಲ್ಲಿ ಅಸ್ಪೃಶ್ಯತೆ ಇಂದಿಗೂ ತಾಂಡವವಾಡುತ್ತಿದೆ. ಆದ್ದರಿಂದ ಜಾತಿ ಪದ್ಧತಿಯು ಹೋಗಬೇಕು.
ನಾವು ಮನುಷ್ಯ ಜಾತಿಯವರು ಮತ್ತು ಮನುಷ್ಯ ಜಾತಿಯನ್ನು ಬಿಟ್ಟು ಇರಲು ಬಯಸುವುದಿಲ್ಲ. ಮನುಷ್ಯ ಮನುಷ್ಯರನ್ನು ಗೌರವದಿಂದ, ಪ್ರೀತಿಯಿಂದ ಕಾಣುವರು ಮಾತ್ರ ನಿಜವಾದ ಮನುಷ್ಯರು. ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯವನ್ನು ಕೀಳಾಗಿ ಕಂಡು  ಶೋಷಣೆ ಮಾಡುವವರು ಮನುಷ್ಯ ಜಾತಿಯವರಲ್ಲ. ನಮ್ಮ ಜಾತಿ ನಿಮ್ಮ ಜಾತಿ ಎಂಬುದು ಸುಳ್ಳು, ಮನುಷ್ಯ ಜಾತಿ ಮಾತ್ರ ಸತ್ಯ. ಮನುಷ್ಯ ಮನುಷ್ಯರನ್ನು ಗೌರವದಿಂದ ಪ್ರೀತಿಯಿಂದ ಕಂಡರೆ ಮೇಲು ಅಥವಾ ಕೀಳು ಎಂಬ ಭಾವನೆ ಬರುವುದಿಲ್ಲ.

comments powered by Disqus
Top