ಜಾತಿ ಸಂವಾದ - ಅಭಿಪ್ರಾಯ 1

ವಿಶ್ವಕರ್ಮ ಜಾತಿಯಲ್ಲ ಅದು ಸಂಸ್ಕೃತಿ
ಮೋನಪ್ಪ ಪೋದ್ಧಾರ, ಸೇಡಂ

ಯಜುರ್ವೇದದ ೩೪ನೇ ಶ್ಲೊಕಿನಲ್ಲಿ ಹೇಳಿರುವಂತೆ ವಿಶ್ವನಿಯಮದ ನಿಯಂತ್ರಣ ನಡೆಯುತ್ತಿರುವದನ್ನೇ ಋತು ಎಂದು ಕರೆಯುತ್ತಾರೆ. ವಿಶ್ವದ ಐಕ್ಯತೆಗೆ ಋತುವೆ ಆಧಾರ ಪೃಥ್ವಿ ಸ್ವರ್ಗಗಳು ಇರುವದೆ ಋತುದ ಮೇಲೆ ಈ ಜಗತ್ತನ್ನು ಬೆಳಗುವದಕ್ಕೆ ಕಾರಣ ಋತು ಋತು ಅಂದರೆ ಉಚಿತ ಕರ್ಮ ಈ ಕರ್ಮಪಾಲಕರೆ ದೇವತೆಗಳು ದೇವತೆಗಳ ದೇವನೆ ವಿಶ್ವಕರ್ಮ. ಅದರಂತೆ ೪ನೇ ಶ್ಲೋಕಿನಲ್ಲಿ ಹೇಳಿರುವಂತೆ ವಿಶ್ವಕರ್ಮನು ಇಲ್ಲದಿದ್ದರೆ ಈ ಜಗತ್ತಿಗೆ ಅಸ್ತಿತ್ವವೇ ಇಲ್ಲ. 

ನಿರ್ಗುಣನಾದ ವಿಶ್ವಕರ್ಮನು ಇಲ್ಲ ಅಂದರೆ ಈ ಜಗತ್ತೇ ಹಾಳು. ವಿಶ್ವಕರ್ಮನಲ್ಲಿ ಎರಡು ಪದಗಳು ಒಂದು ವಿಶ್ವ ಇನ್ನೊಂದು ಕರ್ಮ ನಿರ್ಗುಣನಾದ ವಿಶ್ವವೂ ಯಾವಾಗ ಜಗತ್ತನ್ನು ಸೃಷ್ಟಿಸಬೇಕೆಂದು ಸಂಕಲ್ಪ ಮಾಡಿರುವದೋ ಆವಾಗ ಕರ್ಮ ಪ್ರಾಪ್ತವಾಗುವದು ತಕ್ಷಣ ಅವನು ಸಗುಣನಾಗುವನು ಸಗುಣಪುರುಷ ಪ್ರಕೃತಿ ಕ್ರಿಯೆ ಸಹಿತ ವಾಗಿರುವ ವಿಶ್ವಕರ್ಮ ಆದೂದ್ದರಿಂದ ವಿಶ್ವಕರ್ಮನು ಸಗುಣನು ಹೌದು ನಿರ್ಗುಣನು ಹೌದು.
 
ವೇಧಾಗಮನಗಳಲ್ಲಿ ಉಲ್ಲೇಖವಾದ ಮೆಲಿನ ಎಲ್ಲಾ ವಿಷಗಳನ್ನು ಗಮಿಸಿದ ಪ್ರತಿಷ್ಠಿತ ಪೂಜ್ಯನಿಯರುಗಳು ಪ್ರತಿಷ್ಠಿತರ ಮಾತಿನಂತೆ ೧) ಪೇಜಾವರ ಶ್ರೀಗಳ ಮಾತಿನಂತೆ ಭಾರತೀಯ ಸಂಸ್ಕೃತಿಗೆ ಕೊಡುಗೆಕೊಟ್ಟ ವಿಶ್ವಕರ್ಮರೆಂತಲು ೨) ಸ್ವರ್ಗಿಯ ಬಾಲಗಂಗಾಧರನಾಥ ಸ್ವಾಮಿಗಳ ಮಾತಿನಂತೆ ರೈತನ ಬೆನ್ನೆಲುಬು ವಿಶ್ವಕರ್ಮರೆಂತಲು ೩) ಡಾ|| ಶಿವರಾತ್ರಿ ದೇಶಿಕಕೇಂದ್ರ ಸನ್ನಿಧಿಯವರ ಮಾತಿನಂತೆ ಭಾರತೀಯ ಸಂಸಕೃತಿಯನ ಅವಿಭಾಜ್ಯ ಅಂಗವಾಗಿರುವ ವಿಶ್ವಕರ್ಮರೆಂತಲು ೪) ಸ್ವರ್ಗಿಯ ಡಾ|| ಮತ್ತೂರು ಕೃಷ್ಣಮೂರ್ತಿಯವರ ಮಾತಿನಂತೆ ಹಿಂದೂ ಧರ್ಮ ಹುಟ್ಟೊದಕ್ಕಿನ ಮುಂಚೆ ವಿಶ್ವಕರ್ಮ ಸಮಾಜ(ಜಾತಿ) ಇದೆ. ಎಂದು ಸತ್ಯಯುಗಾ, ತ್ರೇತಾಯುಗಾ, ದ್ವಾಪಾರಯುಗಾ, ಕಲಿಯುಗಾ ಯಾವ ಕಲವೇ ಅಗಲಿ ಯಾವ ಯುಗವೇ ಅಗಲಿ ಅಲ್ಲಿ ವಿಶ್ವಕರ್ಮನಿದ್ದರೆ ಕಾಲ ಆಗುತ್ತೆ ವಿಶ್ವಕರ್ಮನು ಇದ್ದರೆ ಯುಗ ಆಗುತ್ತೆ ಅನ್ನುವದಾದರೆ ವಿಶ್ವಕರ್ಮಜಾತಿಯಲ್ಲ ಈ ದೇಶದ ಸಂಸ್ಕೃತಿ ಅಲ್ಲವೆ.

SMTP -> FROM SERVER:221 2.0.0 closing connection hv3sm21579118obb.7 - gsmtp

comments powered by Disqus
Top