ಜಾತಿ ಸಂವಾದ - ಅಭಿಪ್ರಾಯ 9

ದಲಿತರ ವಿಶೇಷ ಆಹಾರ ಪದ್ದತಿ
ರಾಜೇಶ್ ಮೌರ್ಯ, ಹುಣಸೂರು

‘ದನದ ಮಾಂಸ’ ಅಂದ ತಕ್ಷಣ ನಾವು ಜಾತಿಯನ್ನು ಹೇಳಿಕೊಳ್ಳಬೇಕಾದ  ಅವಶ್ಯಕತೆಯೇ  ಇಲ್ಲ.
ಹೌದು ನಾವು ದಲಿತರು. ನಮ್ಮ ಜಾತಿಯ ವಿಶೇಷ ಆಹಾರ ‘ದನದ ಬಾಡು’.

 ಗೋಹತ್ಯೆ ನಿಷೇಧ ಜಾರಿ ಹಿನ್ನಲೆಯಲ್ಲಿ ನಮ್ಮ ವಿಶೇಷ ಆಹಾರದ ಬಗ್ಗೆ ಬರೆಯಲು ಹೆಮ್ಮೆ ಎನಿಸುತ್ತದೆ.
ನಾವು ಚಿಕ್ಕಂದಿನಿಂದ ಈವರೆಗೂ ಈ ಆಹಾರದ ಒಡನಾಟ ಬಿಟ್ಟುಹೋಗಿಲ್ಲ.ಆದರೆ ಹೊರಗಡೆ ಧೈರ್ಯವಾಗಿ
ಯಾರೊಂದಿಗೂ(ಬೇರೆ ಜಾತಿಯವರೊಂದಿಗೆ) ದನದ ಮಾಂಸ ತಿನ್ನುವುದನ್ನ ಹೇಳಿಕೊಳ್ಳಲಾಗುತ್ತಿಲ್ಲ. ಈ
ಅಸಹಾಯಕತೆಗೆ ನನ್ನ ಸಣ್ಣ ಪ್ರತಿಭಟನೆ ಈ ಪತ್ರದ ಮೂಲಕ.
 
   ನಮ್ಮ ತಾಯಿ ಈ ಅಡುಗೆ ಮಾಡುವುದರಲ್ಲಿ ಸಿದ್ದಹಸ್ತಳು. ನನಗಿನ್ನು ಚೆನ್ನಾಗಿ ನೆನಪಿದೆ.ನಾವು ಅಣ್ಣತಮ್ಮಂದಿರು
ಬೆಂದ ಕಾಲಿನ ಮೂಳೆಯ ಒಳಗೆ ಇರುವ ತುಪ್ಪಕ್ಕಾಗಿ ಕಚ್ಚಾಡುತ್ತಿದ್ದುದ್ದು,ನಮ್ಮ ತಾಯಿ ಎಲ್ಲರಿಗೂ ಸಮಾನವಾಗಿ
ಹಂಚಲು ಹರಸಾಹಸ ಪಡುತ್ತಿದ್ದುದ್ದು ಮರೆಯಲು  ಸಾಧ್ಯವಿಲ್ಲ.ಜಾತ್ಯಾತೀತ ಮನೋಭಾವನೆಯ ಮೇಲ್ಜಾತಿಯ
ಸ್ನೇಹಿತರು ಸಹ ನಮ್ಮ ಮನೆಯಲ್ಲಿ ದನದ ಬಾಡಿನ ರುಚಿಗೆ ನಾಲಗೆ ಚಪ್ಪರಿಸಿದ್ದಾರೆ.
 
    ಸಸ್ಯಾಹಾರ ಮಾತ್ರ ಶ್ರೇಷ್ಠ ಎನ್ನುವ ಮೇಲಿರಿಮೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ಪೂರ್ವಜ 
ಆದಿಮಾನವ ತಿನ್ನುತ್ತಿದ್ದ ಆಹಾರ ಬಹುಶಃ ಎಲ್ಲರಿಗೂ ಗೊತ್ತಿರುವಂತದ್ದೆ.ಜಗತ್ತಿನಲ್ಲಿ ಶೇಕಡ ೯೦ ಕ್ಕಿಂತ ಹೆಚ್ಚು 
ಜನರು ಮಾಂಸಹಾರಿಗಳು. ಆದರೂ ಸಹ ದಲಿತರೆಂಬ ಏಕೈಕ ಕಾರಣಕ್ಕಾಗಿ ನಾವು ತಿನ್ನುವ ಆಹಾರವನ್ನು 
ಬಹಿರಂಗವಾಗಿ ಹೇಳಿಕೊಳ್ಳಲಾಗದ ಅಸಹಾಯಕತೆ ಬಹುಶಃ ಜಗತ್ತಿನ ಯಾವ ದೇಶದಲ್ಲೂ ಇರದ ವಿಶೇಷ 
ಸ್ಥಿತಿಯಾಗಿದೆ.ಮತ್ತೊಬ್ಬನ ಆಹಾರವನ್ನ ಗೌರವಿಸದ ಮನುಷ್ಯ ಅನಾಗರಿಕನೆ ಸರಿ.
ಶೋಷಿತರ ಈ ವಿಶೇಷ ಆಹಾರವನ್ನ ಕಿತ್ತುಕೊಳ್ಳಹೊರಟಿರುವ ಸರ್ಕಾರದ ನಿರ್ಧಾರ ಖಂಡನಾರ್ಹ.
comments powered by Disqus
Top