ಜಾತಿ ಸಂವಾದ - ಅಭಿಪ್ರಾಯ 6

ನ್ಯಾಯ ಒದಗಿಸಲು ಜಾತಿ ಬೇಕು
- ಎಂ. ತಿಮ್ಮಯ್ಯ,ಬೆಂಗಳೂರು ಗ್ರಾಮಾಂತರ

ಹೌದು ಜಾತಿ ಬೇಕು, ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಆಗುವ ಅನ್ಯಾಯವನ್ನು ತಡೆದು ಕಾನೂನಿನ ಪ್ರಕಾರ ನ್ಯಾಯ ಒದಗಿಸಲು ಮತ್ತು ಅವರಿಗೆ ಸೌಕರ್ಯಗಳನ್ನು ಒದಗಿಸಲು ಜಾತಿ ಬೇಕು. ಜಾತಿ ಆಧಾರದ ಮೇಲೆ ಸಿಗುವ ಮೀಸಲಾತಿಯ ಸೌಕರ್ಯದಿಂದ ಈ ಕೆಳ ಜನಾಂಗವನ್ನು ಬಡತನ ಅನಕ್ಷರತೆ ಮೂಢನಂಬಿಕೆ ಗುಲಾಮಗಿರಿ ಮೊದಲಾದ ಅನಿಷ್ಠಗಳಿಂದ ಪಾರುಮಾಡಬಹುದು.
ನಾವು ದಲಿತರು ಈ ಜನಾಂಗದಲ್ಲಿಯೇ ಇರಲು ಇಷ್ಟಪಡುತ್ತೇವೆ. ಒಗ್ಗಟ್ಟಿನಿಂದ ಇರಲು ಇದು ಅನಿವಾರ್ಯ, ಒಗ್ಗಟ್ಟು ಮುರಿದರೆ ನಮಗೆ ಅಪಾಯ. ಇದಕ್ಕಾಗಿ ಜಾತಿ ಅನಿವಾರ್ಯ.

comments powered by Disqus
Top