ಜಾತಿ ಸಂವಾದ - ಅಭಿಪ್ರಾಯ 1

ಮುಕ್ತ ಚರ್ಚೆ ಆಗಲಿ
ಕೆ.ಎನ್ ಶಾಂತಕುಮಾರ್ ಸಂಪಾದಕ

ಇತ್ತೀಚೆಗೆ ನಡೆದ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪ್ರೊ . ಗೋಪಾಲ್ ಗುರು ಮತ್ತು ಪ್ರೊ . ಸುಂದರ್ ಸರುಕ್ಕೈ ಅವರು ನನ್ನ ಜೊತೆ ಜಾತಿ ಸಂವಾದ ಎಂಬ ನೂತನ ಯೋಜನೆ ಬಗ್ಗೆ ಚರ್ಚಿಸಿದ್ದರು. ನನಗೂ ಇದು ಒಳ್ಳೆಯ ಪ್ರಯೋಗ ಎಂದು ಅನಿಸಿತು. ಸಾಮಾಜಿಕ ಕಳಕಳಿಯ ಹೊಸ ಪ್ರಯೋಗಗಳಿಗೆ ಸದಾ ತೆರೆದುಕೊಳ್ಳುವ ನಮ್ಮ ಉದ್ದೇಶಕ್ಕೂ ಇದು ಅನುಗುಣವಾಗಿದೆ. ಜಾತಿ ಪ್ರಜ್ಞೆಯ ಸೂಕ್ಷ್ಮ ಮತ್ತು ಸಂಕೀರ್ಣ ವಿಚಾರಗಳನ್ನು ಅರ್ಥೈಸಿಕೊಳ್ಳಲು ಹಲವು ವಿಚಾರಧಾರೆಗಳು ಒಗ್ಗೂಡಿ ಉಂಟುಮಾಡುವ ಸಾಮೂಹಿಕ ತಿಳಿವಳಿಕೆಯ ಅಗತ್ಯ ಇದೆ.

ಜಾತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಜಾತಿಯ ಬಗ್ಗೆ ನಮ್ಮ ಮನೆಯೊಳಗೆ, ಖಾಸಗಿ ವಲಯಗಳಲ್ಲಿ ಮಾತ್ರ ಸಾಧ್ಯವೆನಿಸುವ ಚರ್ಚೆಯನ್ನು ಸಾರ್ವಜನಿಕವಾಗಿ ನಡೆಸಲು ಈ ರೀತಿಯ ಅನುಭವ ಸಂಚಯ ಸಹಕಾರಿಯಾಗಬಲ್ಲದು. ಈ ಸಂವಾದ ಸಂಪೂರ್ಣವಾಗಿ  ಮುಕ್ತವಾಗಿರುತ್ತದೆ. ನಮ್ಮದೂ ಸೇರಿದಂತೆ ಯಾರ ಅಭಿಪ್ರಾಯವನ್ನೂ ಅಂತಿಮ ತೀರ್ಪು ಎಂದು ಘೋಷಿಸುವ ಉದ್ದೇಶ ಖಂಡಿತ ಇಲ್ಲ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ಚರ್ಚಿಸಬೇಕಾಗುತ್ತದೆ, ಇತರರ ಅಭಿಪ್ರಾಯಗಳ ಜತೆ ಅನುಸಂಧಾನ ನಡೆಸಬೇಕಾಗುತ್ತದೆ. ಇದು ಪತ್ರಿಕಾ ಧರ್ಮ ಕೂಡಾ ಹೌದು.ಇದಕ್ಕಾಗಿ ನಮ್ಮ ಓದುಗರ ಅನುಭವಗಳು ಬಹುಮುಖ್ಯ ಮತ್ತು ಮೌಲಿಕವಾದುದು. ಮುಂದಿನ ಕೆಲವು ವಾರಗಳ ಕಾಲ ಪ್ರತಿ ಸೋಮವಾರ ಜಾತಿ ಸಂವಾದದ ಮಾಲಿಕೆ ಪ್ರಕಟವಾಗಲಿದೆ. ದೇಶದ ಇಬ್ಬರು ಪ್ರಸಿದಟಛಿ ಚಿಂತಕರಾದ ಪ್ರೊ . ಗೋಪಾಲಗುರು ಮತ್ತು ಪ್ರೊ . ಸುಂದರ್ ಸರುಕ್ಕೈ ಅವರು ಮಾರ್ಗದರ್ಶಕರಾಗಿ ನಮ್ಮ ಜತೆ ಇರುತ್ತಾರೆ. ನಮ್ಮ ಓದುಗರಿಗೆ ಈ ಮಾಲಿಕೆ ಇಷ್ಟವಾಗಬಹುದು ಎಂದು ನಮ್ಮ ವಿಶ್ವಾಸ.

comments powered by Disqus
Top