ಜಾತಿ ಸಂವಾದ - ಅಭಿಪ್ರಾಯ 3

ಎಲ್ಲ ರೋಗಗಳ ಮೂಲ

ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದರು ಕಾಶಿಯಲ್ಲಿ ಬ್ರಾಹ್ಮಣರ ಕಾಲುಗಳನ್ನು ತೊಳೆದ ವಿಕಾರವನ್ನು ವಿರೋಧಿಸಿ `ಬ್ರಾಹ್ಮಣರ ಕಾಲುಗಳನ್ನು ಸಾರ್ವಜನಿಕವಾಗಿ ತೊಳೆಯುವ ಕೈಗಳು ಶೂದ್ರರನ್ನೂ ದಲಿತರನ್ನೂ ಒದೆಯಬಲ್ಲ ಕಾಲುಗಳ ಜೊತೆಗೇ ಇರುತ್ತವೆ' ಎಂದು ರಾಮ ಮನೋಹರ ಲೋಹಿಯಾ ಹೇಳಿದ್ದರು. ಜಾತಿಯನ್ನು ಒಂದು ವ್ಯವಸ್ಥೆಯಾಗಿ,ಮನಸ್ಥಿತಿಯಾಗಿ ಗ್ರಹಿಸಿದ ಅವರ ಮುಖ್ಯ ಗ್ರಹಿಕೆಗಳು ಇವು:

ಜಾತಿ ಪದಟಛಿತಿಯಿಂದಾಗಿ ದೀರ್ಘಕಾಲ ಭಾರತ ಮೂರ್ಛಾವಸ್ಥೆಯಲ್ಲಿದೆ. ಕಾರಣ, ಜಾತಿ ಪದಟಛಿತಿ ಯಥಾಸ್ಥಿತಿವಾದವನ್ನು, ಸಾಮಾಜಿಕ ಜಡತೆಯನ್ನು ಪೋಷಿಸುತ್ತದೆ. ಬದಲಾವಣೆಯನ್ನು ವಿರೋಧಿಸುತ್ತದೆ. ಕೆಲವರಿಗೆ ಜಾತಿ ಪದಟಛಿತಿ ಯಾವುದೇ ನಿಯಮಿತ ಕಂತುಗಳಿಲ್ಲದ ಇನ್‌ಷೂರೆನ್ಸ್ ಆಗಿಬಿಟ್ಟಿದೆ. ಜಾತಿ ವ್ಯವಸ್ಥೆ ಎಂದರೆ ಕೆಲವೇ ಮೇಲುಜಾತಿಗಳು ಹಾಗೂ ಕೋಟಿಗಟ್ಟಲೆ ಕೆಳಜಾತಿಗಳ ನಡುವಣ ಅಂತರ. ಮೇಲುಜಾತಿಗಳು ಭಾಷೆ, ವೇಷ, ನಡವಳಿಕೆಗಳ ಮೂಲಕ ಕೆಳಜಾತಿಗಳಲ್ಲಿ ಕೀಳರಿಮೆ ಬಿತ್ತಿ ಅವರ ಮೇಲೆ ಧಾರ್ಮಿಕ, ರಾಜಕೀಯ, ಆರ್ಥಿಕ ಆಳ್ವಿಕೆ ನಡೆಸುತ್ತಿವೆ. ಜೊತೆಗೆ ಕೆಳಜಾತಿಗಳ ಹೀನ ಸ್ಥಿತಿಯನ್ನು ಸಮರ್ಥಿಸುವ ಪುರಾಣಗಳು ಹಾಗೂ ಕಟ್ಟು ಕತೆಗಳನ್ನೂ ಹರಡಲಾಗಿದೆ.

ಭಾರತ ವಿದೇಶಿ ಸೈನ್ಯಗಳ ಕೈಯಲ್ಲಿ ಸೋಲನ್ನು ಅನುಭವಿಸಿದ್ದಕ್ಕೆ ಜಾತಿಯೇ ಮುಖ್ಯ ಕಾರಣ. ಸಾಮಾನ್ಯರು ನಿರ್ಜೀವವಾಗಿರುವುದು, ಉಳ್ಳವರು ವಂಚಕರಾಗಿರುವುದು ಕೂಡ ಜಾತಿಯಿಂದ. ಬಹುಕಾಲದ ಸೈದಾಟಛಿಂತಿಕ ಗುಲಾಮಗಿರಿಯಿಂದಾಗಿ ಕೆಳ ಜಾತಿಗಳು ರಾಜಕೀಯವಾಗಿ ಜಡವಾಗಿವೆ. ಜಾತಿಯ ಚಕ್ರ ಯಾವ ವಿಷಾದವೂ ಇಲ್ಲದೆ ಸುತ್ತುತ್ತಿರುತ್ತದೆ; ಕೋಟಿಗಟ್ಟಲೆ ಕೆಳಜಾತಿಗಳನ್ನು ಅರೆಯುತ್ತಿರುತ್ತದೆ. ಜಾತಿಯು ದೇಶವನ್ನು ನಿತ್ರಾಣಗೊಳಿಸಿದೆ ಹಾಗೂ ಅದರಿಂದ ಸಮಾಜದ ಒಟ್ಟು ಮೌಲ್ಯಮಾಪನವೇ ಕೆಟ್ಟು ಹೋಗಿದೆ. ಹೀಗಾಗಿ ಭಾರತದ ಪ್ರತಿ ಹತ್ತರಲ್ಲಿ ಒಂಬತ್ತು ಜನ ಮೌನವಾಗಿದ್ದಾರೆ. ಭಾರತದಲ್ಲಿ ನಡೆ-ನುಡಿಗಳ ಅಂತರ ಸೃಷ್ಟಿಯಾಗಲು ಜಾತಿ ಪದಟಛಿತಿ ಮೂಲ ಕಾರಣ. ಜಾತಿ ಪದಟಛಿತಿಯನ್ನು ಪೋಷಿಸುವ ಭಾರತದ ಹಳ್ಳಿ ಭೂಮಿಯ ಮೇಲಿನ ಅತಿ ಕೊಳಕು ಪ್ರದೇಶವಾಗಿ ಉಳಿದಿದೆ. ಚಮ್ಮೋರರ
ಹಟ್ಟಿಗಳು ಭಯಾನಕವಾದ ಕಾನ್ಸೆಂಟ್ರೇಶನ್ ಕ್ಯಾಂಪುಗಳಂತಿವೆ.ಇತ್ತ ನಗರದಲ್ಲಿ ಸಾರ್ವಜನಿಕ ಹಾಗೂ ಖಾಸಗಿವಲಯಗಳು ಹಳೆಯ ಜಾತಿ ಪದಟಛಿತಿಯ ಎರಕದಲ್ಲೆೀ ಇವೆ.

`ವರ್ಗ ಎಂದರೆ ಚಲನೆಯ ಸಾಧ್ಯತೆಯುಳ್ಳ ಜಾತಿ; ಜಾತಿ ಎಂದರೆ ಚಲನೆಯಿಲ್ಲದ ವರ್ಗ' ಎಂದ ಲೋಹಿಯಾ, ಭಾರತದಲ್ಲಿ ವರ್ಗವು ಜಾತಿಯಾಗಿ ಹೆಪ್ಪುಗಟ್ಟುವುದನ್ನು ಗುರುತಿಸಿದರು. ಜಾತಿಗೂ ವರ್ಗಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ, ಅಂತಸ್ತಿನಲ್ಲಾಗಲೀ ಆದಾಯದಲ್ಲಾಗಲೀ ಮೇಲಕ್ಕೇರಲು ಇಡೀ ಜಾತಿಯೊಂದಕ್ಕೆ ಚಲನೆ ಅಸಾಧ್ಯವಾದ ಸ್ಥಿತಿ. ಈ ಹಿನ್ನೆಲೆಯಲ್ಲಿ ಲೋಹಿಯಾ ಗುರುತಿಸುವ ಭಾರತದ ಆಳುವ ವರ್ಗಗಳ ಮೂರು ವಿಶಿಷ್ಟ ಲಕ್ಷಣಗಳು ಇವು: 1. ಮೇಲು ಜಾತಿ 2. ಇಂಗ್ಲಿಷ್ 3. ಹಣ. ಈ ಮೂರರಲ್ಲಿ ಎರಡು ಇದ್ದವನು ಕೂಡ ಆಳುವ ವರ್ಗದ ಸದಸ್ಯನಾಗಿರುತ್ತಾನೆ. ಆದರೆ ಈ ಮೂರರಲ್ಲಿ ಒಂದು ಅಂಶವಾಗಿರುವ ಮೇಲು ಜಾತಿ ಇಡೀ ಪರಿಸ್ಥಿತಿಯನ್ನು ಚಲಿಸಲು ಅಸಾಧ್ಯವಾಗುವಂತೆ ಮಾಡಿ ಮರಗಟ್ಟಿಸುತ್ತದೆ. ಯಾಕೆಂದರೆ, ಈ ದೇಶದ ಆಳುವ ವರ್ಗಗಳ ಶೇಕಡ ತೊಂಬತ್ತರಷ್ಟು ಜನ ಮೇಲುಜಾತಿಯವರು. ಅವರಲ್ಲಿ ಬಹುತೇಕರು ಇಂಗ್ಲಿಷ್ ಹಾಗೂ ಹಣ ಎರಡನ್ನೂ ಪಡೆದವರು.

ಶೂದ್ರರ, ದಲಿತರ ಹಾಗೂ ಸ್ತ್ರೀಯರ ಚೈತನ್ಯವನ್ನು ಹುರುಪುಗೊಳಿಸದಿದ್ದರೆ ಈ ದೇಶಕ್ಕೆ ಹೊಸ ಜೀವ ತುಂಬಲಾಗದು. ಜಾತಿಯ ಸಂಕೇತಗಳನ್ನು ನಾಶ ಮಾಡಬೇಕು. ಜಾತಿಮೂಲ ನೈತಿಕತೆ ಹಾಗೂ ಜಾತಿವರ್ತನೆಗಳ ವಿರೋಧ, ಜಾತಿವಿನಾಶ, ಕೆಳಜಾತಿಗಳಿಗೆ ಹಾಗೂ ಮಹಿಳೆಯರಿಗೆ ವಿಶೇಷ ಅವಕಾಶಗಳು, ದುರ್ಬಲ ಜಾತಿಗಳು ಆರ್ಥಿಕವಾಗಿ ಬಲಗೊಳ್ಳಲು ಮೀಸಲಾತಿಯಿಂದ ಹಿಡಿದು ಹಲಬಗೆಯ ಕಾರ‌್ಯಕ್ರಮಗಳು ಲೋಹಿಯಾರ ಸಮಾಜವಾದಿ ಪಕ್ಷದ ಭಾಗವಾಗಿದ್ದವು.

comments powered by Disqus
Top