ಜಾತಿ ಸಂವಾದ - ಅಭಿಪ್ರಾಯ 4

ಇದು ಒಂದು ಶಾಪ

ಇದು ಒಂದು ಶಾಪಭಾರತದ ಜಾತಿ ವ್ಯವಸ್ಥೆಯ ಕಠೋರ ಸತ್ಯಗಳನ್ನು ಅತ್ಯಂತ ನಿಷ್ಠುರವಾಗಿ ಜಗತ್ತಿನ ಮುಂದೆ ಬಿಡಿಸಿಟ್ಟವರು ಡಾ.ಬಿ.ಆರ್ .ಅಂಬೇಡ್ಕರ್. ಜಾತಿ ವ್ಯವಸ್ಥೆ ಬಗ್ಗೆ ಅವರ ಆಯ್ದ ಅಭಿಪ್ರಾಯಗಳು ಇಲ್ಲಿವೆ:

ಜಾತಿಯಿಂದ ಹಿಂದೂಗಳ ನೀತಿ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿದೆ; ಹೃದಯ ವೈಶಾಲ್ಯ  ಹಾಳು ಮಾಡಿದೆ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. ಹಿಂದೂವಿನ ಸಮಾಜ ಹಾಗೂ ಹೊಣೆಗಾರಿಕೆ  ಅವರ ಜಾತಿಗೆ ಸೀಮಿತ. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ. ಸದ್ಗುಣ ಹಾಗೂ ನೀತಿ ಎರಡೂ ಜಾತೀಯತೆಯ ಮುಷ್ಟಿಯಲ್ಲಿ ಸಿಕ್ಕಿಕೊಂಡಿವೆ. ಸಹಾನುಭೂತಿ ಯಾರಿಗೆ ಅವಶ್ಯಕವೊ ಅವನಿಗೆ ಅದು ಸಿಕ್ಕುತ್ತಿಲ್ಲ.

ಸಹಾನುಭೂತಿ ತಮ್ಮ ಜಾತಿಯವರಿಗೆ ಮಾತ್ರ ಉಂಟು; ಇತರರಿಗೆ ಇಲ್ಲ. ಮುಂದಾಳೆಂದು ಒಪ್ಪಿಕೊಳ್ಳಬೇಕಾದರೆ ಅವನು ತಮ್ಮ ಜಾತಿಯವನೇ ಆಗಿರತಕ್ಕದ್ದು. ಮುಂದಾಳು ಬ್ರಾಹ್ಮಣನಾಗಿದ್ದರೆ ಮಾತ್ರ ಬ್ಯಾಹ್ಮಣರು ಅವನ ಅನುಯಾಯಿಯಾಗುತ್ತಾರೆ.
ಕ್ಷತ್ರಿಯನು ಮುಂದಾಳಾದರೆ ಮಾತ್ರ ಕ್ಷತ್ರಿಯರು ಅವನ ಅನುಯಾಯಿಯಾಗುತ್ತಾರೆ. ಇತರ ಜಾತಿಗಳಿಗೂ ಈ ಮಾತು ಹೀಗೆಯೆ ಅನ್ವಯಿಸುತ್ತದೆ. ಒಬ್ಬ ಮನುಷ್ಯನ ಜಾತಿ ಯಾವುದೆ ಇರಲಿ, ಅವನ ಯೋಗ್ಯತೆಯನ್ನು ಮನ್ನಿಸಬೇಕೆಂಬ ಬುದಿಟಛಿ ಅಥವಾ ಹಾಗೆ ಮಾಡುವ ಧೈರ್ಯ ಹಿಂದೂವಿಗೆ ಇಲ್ಲ. ತಮ್ಮ ಜಾತಿಯವನಾದರೆ ಮಾತ್ರ ಅವನನ್ನು ಮನ್ನಿಸುತ್ತಾರೆ. ಅನಾಗರಿಕ ಜನರ ಗುಂಪಿನ ನೀತಿ ಎಷ್ಟು ಸಂಕುಚಿತವೋ ಅಷ್ಟು ಸಂಕುಚಿತವಾಗಿದೆ ಜಾತಿಯ ನೀತಿ. ಹೀಗೆ ತಂತಮ್ಮ ಜಾತಿಯ ಹಿತವನ್ನೇ ನೋಡಿಕೊಳ್ಳುತ್ತ ಹಿಂದೂಗಳು ದೇಶಕ್ಕೆ ದ್ರೋಹ ಬಗೆದಿಲ್ಲವೆ?

ಶ್ರಮ ವಿಭಾಗವು ಪ್ರತಿಯೊಂದು ಸುಧಾರಿತ ಸಮಾಜದ ಅವಶ್ಯ ಲಕ್ಷಣವಾಗಿರುವಾಗ ಜಾತಿ ಪದಟಛಿತಿಯಿದ್ದರೇನೂ ದೋಷವಿರುವುದಿಲ್ಲವೆಂದೂ ಕೆಲವರು ವಾದಿಸುತ್ತಾರೆ. ಆದರೆ ಜಾತಿ ಪದಟಛಿತಿ ಕೇವಲ ಶ್ರಮ ವಿಭಾಗವಾಗಿರದೆ, ಶ್ರಮಜೀವಿಗಳ ವಿಭಾಗವೂ ಆಗಿದೆ. ಸುಧಾರಿತ ಸಮಾಜಕ್ಕೆ ಶ್ರಮ ವಿಭಾಗ ಅವಶ್ಯವೆಂಬುದು ನಿರ್ವಿವಾದ. ಆದರೆ ಶ್ರಮವಿಭಾಗದಿಂದ ಶ್ರಮಿಕವರ್ಗಗಳೂ ಒಂದಕ್ಕೊಂದು ಸೇರದಂತೆ ಪ್ರತ್ಯೇಕವಾಗಿ ವಿಭಾಗವಾಗುವುದು ಯಾವ ಸುಧಾರಿತ ಸಮಾಜದಲ್ಲಿಯೂ ಕಾಣದು. ಜಾತಿಪದಟಛಿತಿ ಶ್ರಮಿಕರ ವಿಭಾಗ
ಮಾತ್ರವಲ್ಲ; ಅದರಲ್ಲಿ ವಿಭಾಗಗೊಂಡ ವರ್ಗಗಳು ಮೇಲುವರ್ಗ, ಕೆಳವರ್ಗ, ಅದಕ್ಕೂ ಕೆಳಗಿನ ವರ್ಗ ಹೀಗೆ ಒಂದು ನೀಚೋಚ್ಚಶ್ರೇಣಿಯನ್ನು ಹೊಂದಿದೆ. ಈ ಶ್ರಮ ವಿಭಾಗ ಸಹಜವಾದುದಲ್ಲ; ವ್ಯಕ್ತಿಗಳ ಸಾಮರ್ಥ್ಯ ಅಥವಾ ಯೋಗ್ಯತೆಯನ್ನು ಅದು ಆಧರಿಸಿಲ್ಲ.

comments powered by Disqus
Top