ಜಾತಿ ಸಂವಾದ - ಅಭಿಪ್ರಾಯ 5

ಜಾತಿ ಧರ್ಮವನ್ನು ಉಳಿಸಿದೆ

ಜಾತಿ ಧರ್ಮವನ್ನು ಉಳಿಸಿದೆ ಜಾತಿ ವ್ಯವಸ್ಥೆಯನ್ನು ಒಪ್ಪಿದ್ದ ಮತ್ತು ನಂಬಿದ್ದ ಮಹಾತ್ಮ ಗಾಂಧೀಜಿ, ಅದರ ಜತೆಯಲ್ಲಿಯೇ ಅಸ್ಪೃಶ್ಯತೆಯ ನಿರ್ಮೂಲನೆ  ಆಗಬೇಕೆಂದೂ ಬಯಸಿದ್ದರು. ಜಾತಿ ಎನ್ನುವುದು ದೊಡ್ಡ ಶಕ್ತಿ ಮತ್ತು ಹಿಂದೂ ಧರ್ಮದ ರಹಸ್ಯ' ಎಂದು ಅವರು
ಬೆಂಗಳೂರಿನಲ್ಲಿ ( ಮೇ 8, 1915) ಮಾಡಿದ್ದ ಭಾಷಣದಲ್ಲಿ ಹೇಳಿದ್ದರು. ಜಾತಿ ಬಗ್ಗೆ ಅಲ್ಲಲ್ಲಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಹೀಗಿವೆ:

`ಜಾತಿ ಪದ್ದತಿಯನ್ನು ಉಳಿಸಿಕೊಳ್ಳುವುದರಿಂದ ಭಾರತ ನಾಶವಾಗಲಿದೆ, ಜಾತಿಯಿಂದಾಗಿಯೇ ಭಾರತ ಗುಲಾಮಿ ದೇಶವಾಗಿದೆ ಎನ್ನುತ್ತಾರೆ. ನನ್ನ ಅಭಿಪ್ರಾಯದ ಪ್ರಕಾರ ನಮ್ಮ ಇಂದಿನ ಸ್ಥಿತಿಗೆ ಜಾತಿ ಕಾರಣ ಅಲ್ಲ, ಅದಕ್ಕೆ ಕಾರಣ ನಮ್ಮ ಆಸೆಬುರುಕತನ ಅಗೌರವ ಕಾರಣ. ಜಾತಿ ಪದ್ದತಿ ಹಿಂದೂ ಧರ್ಮವನ್ನು ಉಳಿಸಿದೆ'

`ನಾಲ್ಕು ವರ್ಣಗಳ ವರ್ಗೀಕರಣ ಸ್ವಾಭಾವಿಕ, ಅವಶ್ಯಕ ಮತ್ತು ಮೂಲಭೂತವಾದುದು. ನೂರಾರು ಜಾತಿಗಳು ಬಹಳಷ್ಟು ಸಂದರ್ಭಗಳಲ್ಲಿ ಅನುಕೂಲಕರ, ಅದು ಅಡ್ಡಿ ಅಲ್ಲ. ಮೂಲಭೂತವಾದ ಈ ವರ್ಗೀಕರಣವನ್ನು ನಾಶ ಮಾಡುವುದಕ್ಕೆ ನನ್ನ ವಿರೋಧ ಇದೆ. ಜಾತಿ ಅಸಮಾನತೆಯ ಆಧಾರದಲ್ಲಿ ನಿಂತಿರುವುದಲ್ಲ,ಆದುದರಿಂದ ಕೀಳರಿಮೆಗೆ ಅವಕಾಶವೇ ಇಲ್ಲ.'

'ಜಾತಿ ಎನ್ನುವುದು ಹಾನಿಕಾರಕ ಸಂಸ್ಥೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಮೂಲದಲ್ಲಿ ಜಾತಿ ಎನ್ನುವುದು ಹಲವಾರು ನಂಬಿಕೆಗಳನ್ನು ಒಳಗೊಂಡಿದೆ. ಇದು ರಾಷ್ಟ್ರೀಯ ಕಲ್ಯಾಣಕ್ಕೆ ಸಹಕಾರಿಯಾಗಿದೆ. ರಾಷ್ಟ್ರದ ಅಭಿವೃದಿಟಛಿಗಾಗಿ ಅಂತರಜಾತಿ ಮದುವೆ ಮತ್ತು ಸಹಪಂಕ್ತಿ
ಭೋಜನದ ಕಲ್ಪನೆ ಪಶ್ಚಿಮದಿಂದ ಆಮದು ಮಾಡಿಕೊಂಡ ಮೂಢ ನಂಬಿಕೆ.

ವರ್ಣಾಶ್ರಮ ಎನ್ನುವುದು ಸ್ವಾಭಾವಿಕವಾದ ಮನುಷ್ಯ ನಡವಳಿಕೆ, ಹಿಂದೂ ಧರ್ಮ ಇದನ್ನು ವಿಜ್ಞಾನದ ಮಟ್ಟಕ್ಕೆ ಇಳಿಸಿದೆ. ಹುಟ್ಟಿಗೆ ಇದರ ಜತೆ ಸಂಬಂಧ ಇಲ್ಲ. ಸ್ವಂತ ಆಯ್ಕೆಯಿಂದ ಮನುಷ್ಯ ತನ್ನ ವರ್ಣವನ್ನು ಬದಲಾಯಿಸಿಕೊಳ್ಳಲು ಸಾಧ್ಯ ಇಲ್ಲ. ವರ್ಣ ವ್ಯವಸ್ಥೆಯ ನಿರಾಕರಣೆಯೆಂದರೆ ವಂಶಪರಂಪರೆಯನ್ನು ನಿರಾಕರಿಸಿದಂತೆ.

comments powered by Disqus
Top