ಜಾತಿ ಸಂವಾದ - ಅಭಿಪ್ರಾಯ 1

`ಕ್ಷೌರಿಕನಾಗಿ ಹುಟ್ಟಬಾರದಿತ್ತು'
ಮುರುಳಿ ಎ. ಬೆಂಗಳೂರು

ಮುಖ ಕ್ಷೌರ ಮಾಡಬೇಕಾದ ಸಂದರ್ಭದಲ್ಲಿ ಕೆಲವೊಮ್ಮೆ ತಲೆಯ ಮೇಲೆ ನಮ್ಮ ಕೈ ಇಡಬೇಕಾದ (ಮುಖ ಅಲುಗಾಡದ ಹಾಗೆ) ಸಂದರ್ಭದಲ್ಲಿ ಒಬ್ಬ ಭೂಪ `ನಿಮ್ಮ ಜಾತಿಯವರು ನಮ್ಮ ತಲೆಯ ಮೇಲೆ ಕೈಯಿಟ್ಟರೆ ಅಶುಭವಂತೆ' ಎಂದು ಹೇಳಿಯೇ ಬಿಟ್ಟ ಅವನು ಒಬ್ಬ ಪದವೀಧರ ಶಿಕ್ಷಕ ಬೇರೆ
- ಕೆಲವೊಮ್ಮೆ ಮಕ್ಕಳನ್ನು ಕರೆತರುವ ತಾಯಂದಿರು ಕಟಿಂಗ್ ಆದ ನಂತರ ಮಕ್ಕಳನ್ನೆ ಮುಟ್ಟಿಸಿ ಕೊಳ್ಳುವುದಿಲ್ಲ. (ಕತ್ತರಿಸಿ ಬಿದ್ದ ಕೂದಲು ತೆಗೆಯಲು ಬಿಡುವುದಿಲ್ಲ, ನಾವು ಅವರ ಮಕ್ಕಳನ್ನು ಮುಟ್ಟುತ್ತೇವೆ ಎಂಬ ಭಯ ಅವರಿಗೆ
- ಕೆಲವೊಮ್ಮೆ ಮನೆಗಳಿಗೆ ಭೇಟಿ ಕೊಡಬೇಕಾದ ಅನಿವಾರ್ಯ ಸಂದರ್ಭದಲ್ಲಿ (ಅಂಗವಿಕಲರಿಗೆ, ವೃದ್ದರಿಗೆ, ಬುದ್ದಿಮಾಂಧ್ಯರಿಗೆ ಅಪಘಾತದಲ್ಲಿ ಕೈಕಾಲು ಕಳೆದು ಕೊಂಡವರಿಗೆ ನಮ್ಮ ಸೇವೆ ಅಗತ್ಯವಾಗಿ ಬೇಕು). ಅಂತಹ ಸಂದರ್ಭಗಳಲ್ಲಿ ಹಿಂಬಾಗಿಲಿನ ಮುಖಾಂತರವೇ ಪ್ರವೇಶ. ಆ ಜಾಗ ಆ ದೇವರಿಗೆ ಪ್ರೀತಿ ಗಬ್ಬೆದ್ದು ನಾರುವ ಜಾರುವ 2/3 ಅಡಿಯ ಬಾತ್ ರೂಮಿನಲ್ಲಿ ಗುಪ್ತಾಂಗಗಳಲ್ಲಿನ ಸಹ ಕೂದಲು ತೆಗೆದು ಹಾಕಿ ಎಂಬ ಧಮಕಿ ಬೇರೆ.
- ಬೆಳಿಗ್ಗೆ ಕ್ಷೌರಿಕರ ಮುಖ ನೋಡಬಾರದೆಂಬ ಬ್ರಹ್ಮಾಂಡ ಖ್ಯಾತಿಯ ಜ್ಯೋತಿಷಿಯೊಬ್ಬರು ಕೆಲ ದಿನಗಳ ಹಿಂದೆ ಹೇಳಿದ್ದರು. ಆ ಮೇಲೆ ಒತ್ತಡದಿಂದ ಕ್ಷಮಾಪಣೆ ಕೇಳಿದರು. ಆ ಪ್ರಶ್ನೆ ಬೇರೆ. ನೋಡಿದರೂ ಏನಾದರೂ ಸಂಭವಿಸಬಹುದೆಂಬ ಸಾಮಾನ್ಯ ಜನರ ಭಯ ಬೇರೆ.
- ಆಗಾಗ ಜನರೂ ತಮಾಷೆಗಾಗಿಯೇ ಬೈಯುವುದಕ್ಕಾಗಿ `ಹಜಾಮ' ಎಂಬ ಪದವನ್ನು ಉಪಯೋಗಿಸುವುದನ್ನು ಕೇಳಿದರೆ ಯಾಕಾದರೂ ಈ ಜಾತಿಯಲ್ಲಿ ಹುಟ್ಟಿದೆನೊ ಎಂದು ಅನಿಸುತ್ತದೆ.

comments powered by Disqus
Top