ಜಾತಿ ಸಂವಾದ - ಅಭಿಪ್ರಾಯ 3

ಜಾತಿ ಆಡಳಿತ
-ಲೂಯಿ ದುಮೋ,ಮೂಲ ಪಠ್ಯ: ಹೋಮೋ ಹೈರಾರ್ಕಿಕಸ್

ಹೆಚ್ಚಿನ ಜಾತಿಗಳು ಬಲವಾದ ಆಡಳಿತ ವ್ಯವಸ್ಥೆಯನ್ನು ಹೊಂದಿವೆ. ಕೆಲವು ಜಾತಿಗಳಲ್ಲಿ ಈ ವ್ಯವಸ್ಥೆಯು ಮೇಲ್ನೋಟಕ್ಕೆ ಕಾಣದಿದ್ದರೂ ಅವು ಜನರ ಮೇಲೆ ಸಡಿಲ ಮತ್ತು ಅನಿರ್ದಿಷ್ಟ ರೀತಿಗಳಲ್ಲಿ ತಮ್ಮ ಯಾಜಮಾನ್ಯವನ್ನು ಹೇರುತ್ತವೆ. ಉದಾಹರಣೆಗೆ ಜಾತಿಯೊಂದು ವ್ಯಕ್ತಿಯೊಬ್ಬನನ್ನು ಬಹಿಷ್ಕರಿಸಬಹುದು. ಯಾಜಮಾನ್ಯದ ಕತೆ ಇಲ್ಲಿಗೇ ಮುಗಿಯುವುದಿಲ್ಲ. ಎರಡು ಜಾತಿಗಳ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದಾಗ ಅವು ತಮ್ಮೆರಡಕ್ಕಿಂತಾ ಹೆಚ್ಚಿನ ಅಧಿಕಾರವುಳ್ಳ ಕೇಂದ್ರವನ್ನು ಹುಡುಕಿಕೊಂಡು ಹೋಗುತ್ತವೆ.
ಈ ರೀತಿಯ ಒಳಜಗಳವನ್ನು ಪರಿಹರಿಸುವ ಅಧಿಕಾರ  ಕೇಂದ್ರಗಳು ಉಚ್ಚ ಜಾತಿಗಳೇ ಆಗಿರುತ್ತವೆ. ಹಳ್ಳಿಗಳಲ್ಲಿ ತುಳಿತಕ್ಕೊಳಗಾದ ಮತ್ತು ಅವಲಂಬಿತ ಜಾತಿಗಳಿಗೆ ಸೇರಿದ ಜನರು ತಮ್ಮ ಯಾವುದೋ ಒಳಜಗಳವನ್ನು ಬಗೆಹರಿಸಿಕೊಳ್ಳಲು ಉಚ್ಚ ಜಾತಿಯ ಪ್ರಮುಖನೊಬ್ಬನನ್ನು ಕೇಳಿಕೊಂಡಾಗ ಅವರು ಅವನನ್ನು ಯಾವುದೇ ತೀರ್ಮಾನ ತೆಗೆದುಕೊಳ್ಳಬಹುದಾದ ಅಂತಿಮ ನಿರ್ಣಯಕಾರನನ್ನಾಗಿ ನೋಡುತ್ತಾರೆ. ಹೀಗೆ ಜಾತಿಗಳು ತಮ್ಮಲ್ಲಿ ಆಡಳಿತದ ಅಂಗಗಳನ್ನು ಹೊಂದಿದ್ದರೂ ಕೂಡಾ ಆ ಆಡಳಿತವು ನ್ಯಾಯಸಮ್ಮತವೆನಿಸಿಕೊಳ್ಳುವುದು ಬ್ರಾಹ್ಮಣರ ಮಾದರಿಗೆ ತಲೆಬಾಗಿದಾಗಲೇ. ಹಾಗಾದಾಗ ರೆಟ್ಟೆಬಲ ಕಸುವುಗಳು ಅಧಿಕಾರದ ಯಾಜಮಾನ್ಯಕ್ಕೆ ಒಳಗಾಗುತ್ತವೆ. ಹೀಗೆ ಹಲವು ಜಾತಿಗಳು ತಮ್ಮ ಬಗೆಗಿನ ನ್ಯಾಯತೀರ್ಮಾನದ ಅಧಿಕಾರವನ್ನು ಬೇರೊಂದು ಜಾತಿಗೆ ಕೊಡುತ್ತವೆ.
 

comments powered by Disqus
Top