ಜಾತಿ ಸಂವಾದ - ಅಭಿಪ್ರಾಯ 5

ಜಾತಿಗಿಂತ ಹಣ ಮುಖ್ಯ!
ಅನಿತಾ. ಕೆ.ಎಸ್,.ಭದ್ರಾವತಿ

ನಾನೂ ಕೂಡ ಈ ಜಾತಿ ಕಟ್ಟು ಪಾಡು ಎಂಬುದನ್ನು ಮೌಢ್ಯ ಎಂದೇ ತಿಳಿದಿದ್ದೆ. ಆದರೆ ಅದೆಲ್ಲ ನಮ್ಮ ಹಿರಿಯರು ಮಾಡಿರುವುದು ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಂಬುದನ್ನು ಈಗ ಮನಗಂಡಿದ್ದೇನೆ. ಕಾರಣ ನನ್ನ ಗೆಳತಿಗಾದ ಅನುಭವ. ಸಹಜವಾಗಿ ನಾವೆಲ್ಲ ಶಿಕ್ಷಣ ಪಡೆದ ವಿಚಾರವಂತರಾಗಿದ್ದರಿಂದ ಜಾತಿ-ಮತಗಳು ಊರಿಂದ ಆಚೆಗೆ ಎಂದು ನಂಬಿದ್ದವರು.
ನನ್ನ ಒಬ್ಬ ಸುಂದರ ಗೆಳತಿ ಒಕ್ಕಲಿಗ ಜಾತಿಗೆ ಸೇರಿದವಳಾಗಿದ್ದರೂ ಮತ್ತೊಂದು ಊರಿನ ಜೈನ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು. ಎರಡು ವರ್ಷಕ್ಕೂಮ್ಮೆ ಭೇಟಿಯಾಗುತ್ತಿದ್ದರಿಂದ ಮನೆಯವರ ಭಯ ಕೂಡ ಇರಲಿಲ್ಲ. ಒಂದು ದಿನ ಇವರಿಬ್ಬರ ಪ್ರೀತಿ ಹುಡುಗಿಯ ಮನೆಯವರಿಗೆ ಗೊತ್ತಾಯಿತು. ವಿರೋಧದ ನಡುವೆಯೂ ಪ್ರೀತಿ ಏಳು ವರ್ಷ ಮುಂದುವರೆಯಿತು. ಆದರೆ ಇದ್ದಕ್ಕಿದ್ದ ಹಾಗೆ ಆತನಿಂದ ಯಾವುದೇ ಉತ್ತರವಿಲ್ಲ. ಕರೆ ಮಾಡಿದರೆ ಬೇರೆ ಹುಡುಗಿ ಉತ್ತರಿಸುತ್ತಾ ಹೇಳಿದಳಂತೆ ಅಂತರ್ಜಾತಿ ವಿವಾಹಕ್ಕೆ  ಆತನ ತಾಯಿಗೆ ಇಷ್ಟ ಇಲ್ಲ ಅಂತ, ಆದರೆ ವಿಷಯ ಬೇರೆಯೇ ಇತ್ತು. ಈಕೆಗೆ ಸರಿಯಾದ ಕೆಲಸವಿರಲಿಲ್ಲ. ಆತ ಲೆಕ್ಕಾಚಾರ ಹಾಕಿ ಕರೆಗೆ ಉತ್ತರಿಸಿದ್ದ ಲಿಂಗಾಯತ ಹುಡುಗಿಯನ್ನು ಮದುವೆಯಾಗಿದ್ದ. ಅದಾದ ಕೆಲ ದಿನಗಳ ನಂತರ ಈಕೆಗೂ ಸರ್ಕಾರಿ ಕೆಲಸ ಸಿಕ್ಕಿ ಸರ್ಕಾರಿ ನೌಕರಿಯಲ್ಲಿರುವ ತನ್ನ ಜಾತಿಯ ಸ್ಪುರದ್ರೂಪಿ ಹುಡುಗನನ್ನೇ ಮದುವೆಯಾಗಿ ಸುಖವಾಗಿದ್ದಾಳೆ.

comments powered by Disqus
Top