ಜಾತಿ ಸಂವಾದ - ಅಭಿಪ್ರಾಯ 6

ಮಕ್ಕಳ ಅಂತರ್ಜಾತಿ ವಿವಾಹ
ಕೆ. ರಾಮಸ್ವಾಮಿ,ಬೆಂಗಳೂರು

ಸಾಹಿತಿ ಶಿವರಾಮ ಕಾರಂತರು ಸ್ವತಃ ಅಂತರ್ಜಾತಿ ವಿವಾಹ ಮಾಡಿಕೊಂಡು ಮಾದರಿಯಾಗಿದ್ದಾರೆಂಬುದು ಅವರ ಆತ್ಮ ಚರಿತ್ರೆಯಲ್ಲಿ ತಿಳಿಯುತ್ತದೆ. ಕಾಲವೇ ಸಮಾಜ ನ್ಯೂನತೆಗಳನ್ನು ಸರಿಪಡಿಸುತ್ತದೆ ಎಂಬಂತೆ ಅಂತರ್ಜಾತಿಯ ವಿವಾಹಗಳ ಸಂಖ್ಯೆ ಹೆಚ್ಚುತ್ತಾ ಜಾತಿ ಭೇದದ ಸೋಂಕೂ ನಿವಾರಣೆಯಾಗುತ್ತದೆ.
ನನ್ನ ಸ್ವಂತ ಅನುಭವದ ವಿಷಯಕ್ಕೆ ಬಂದರೆ ನಾನು ಪರಿಶಿಷ್ಟ ಜಾತಿಗೆ ಸೇರಿದವನು. ನನ್ನ ಮಗ ಒಬ್ಬ ಬ್ರಾಹ್ಮಣ ಜಾತಿಗೆ ಸೇರಿದ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಇನ್ನೊಬ್ಬ ಮಗ ಕೊಡವ ಜಾತಿಗೆ ಸೇರಿದಾಕೆಯನ್ನು ಮಡದಿಯನ್ನಾಗಿ ಒಪ್ಪಿ ಕೊಂಡಿದ್ದಾನೆ. ಅವರಿಬ್ಬರಿಗೂ ಮಕ್ಕಳಾಗಿವೆ. ಎಲ್ಲರೂ ಅನ್ಯೋನ್ಯವಾಗಿ ಪ್ರೀತಿಯಿಂದಲೇ ಇದ್ದೇವೆ.
ನಾನು ನನ್ನ ಜೀವನದ ಪೂರ್ವಾಶ್ರಮದಲ್ಲಿ ಮೇಲು ಕೀಳೆಂಬ ಜಾತಿ ಭೇದದಿಂದ ಬಹಳ ಅವಮಾನವನ್ನು ಎದುರಿಸುತ್ತಿದ್ದೇನೆ. ಆ ಈ ಅಂತರ್ಜಾತಿ ವಿವಾಹ ಗಳಿಂದ ನನಗೆ ಬಹಳ ಸಮಾಧಾನವಾಗಿದೆ. ಈ ಬಗೆಯ ವಿವಾಹಗಳಿಂದ ಜಾತಿ ಭೇದ ತೊಲಗಲಿ ಎಂದು ಆಶಿಸೋಣವೇ ?

comments powered by Disqus
Top