ಜಾತಿ ಸಂವಾದ - ಅಭಿಪ್ರಾಯ 3

ಗುಣ ವೈವಿಧ್ಯ ವಿರೋಧಿ ತರ್ಕ
ಹರಿಹರ

ಈಗ ನಿಮ್ಮ ಜಾತಿ ವಿರೋಧ ಪ್ರಜ್ಞೆಯು ಕಲಾಕ್ಷೇತ್ರಕ್ಕೆ ನುಗ್ಗಿದೆ. ಎಲ್ಲ ಮಾನವರೂ ಎಲ್ಲ ಕಲೆಗಳನ್ನೂ ಕಲಿತು ಒಂದೇ ರೀತಿಯಲ್ಲಿ ಅಭಿವ್ಯಕ್ತಿಸಬೇಕು  ಅನ್ನುವುದು ವೈವಿಧ್ಯತೆಯೇ ನಿಸರ್ಗ ಅನ್ನುವ ಸತ್ಯಕ್ಕೆ  ವಿರುದ್ಧ. ಕಲೆಗಳು ಗುಣ ವಿಶೇಷಗಳನ್ನೂ ಅವುಗಳ ವೈವಿಧ್ಯತೆಯನ್ನು ಚಿತ್ರಿಸುವ ಆತ್ಮಸಾಕ್ಷಾತ್ಕಾರವಲ್ಲವೇ?ಇದಕ್ಕೆ ಜಾತಿಯಿಂದ ಯಾವ ಅಡಚಣೆಯೂ ಬಂದಿಲ್ಲ. ಯಕ್ಷಗಾನದ ತಂಡಗಳಲ್ಲಿ, ಸಿನಿಮಾ ರಂಗದಲ್ಲಿ ಎಲ್ಲ ಜಾತಿ ಏಕೆ ಎಲ್ಲ ಮತಗಳ ಕಲಾವಿದರು ಪಾಲ್ಗೊಳ್ಳುತ್ತಾರಲ್ಲವೇ?
ಕೆಲವು ಕಲೆಗಳಲ್ಲಿ  ಕೆಲವರು ಆಸಕ್ತಿ ವಹಿಸದಿರುವುದು ಹಳ್ಳಿ ಜನತೆಗೂ ಅಧುನೀಕರಿಸಿರುವ ನಗರದ ಜನತೆಗೂ ಇರುವ ವಾಸನಾ ವೈವಿಧ್ಯತೆ ಅಥವಾ    ಆರ್ಥಿಕ  ಅಂತರವೇ ಕಾರಣವೇ ಹೊರತು ಜಾತಿಯಲ್ಲ. ಈಗ ಭರತನಾಟ್ಯ ಅಥವಾ ಶಾಸ್ತ್ರಿಯ ಸಂಗೀತ ಕಲಿಯಲು ಸಾಧ್ಯವಾಗದೇ ಇರುವುದು ಅಕ್ಷರಜ್ಞಾನದ ಕೊರತೆಯಿಂದ ಅಥವಾ ಬಡತನದಿಂದಲೇ ಹೊರತು `ಜಾತಿ ಭೇದ'ದಿಂದಲ್ಲ. ಕುಶಲ ಕಲೆಗಳಿಗೂ ಜಾತಿಗೂ  ಯಾವ ಸಂಬಂಧವೂ ಇಲ್ಲ. ಆದರೆ ಗುಣ ವಿಶೇಷಗಳಿಗೂ ಕಲಾತ್ಮಕತೆಗೂ ನಿಕಟ ಸಂಬಂಧವಿದೆ. ಉದಾಹರಣೆಗೆ ಬಡೇ ಗುಲಾಮ್‌ಆಲೀ  ಖಾನರ ಭಜನೆಗೂ ಜಸ್‌ರಾಜ್ ಅವರ ಭಜನೆಗೂ ಇರುವ ವ್ಯತ್ಯಾಸವದು.
ಈ ವ್ಯರ್ಥ ಜಿಜ್ಞಾಸೆಯ ದುರಂತವೇನೆಂದರೆ ಕೆಲವು ಗುಣ ವೈವಿಧ್ಯತಾ ವಿರೋಧೀ  ಪ್ರಜ್ಞೆಯೆಂಬ ಮೂಢ ಪ್ರಜ್ಞಾಧಾರೀ ಬಂಡಾಯ. ಸಾಹಿತಿಗಳು ಜಾತಿಯೊಂದರ ತತ್ವಗಳನ್ನು ಹೀಯಾಳಿಸುವ ಕುತರ್ಕದಿಂದ ಚಾರಿತ್ರ್ಯ ಹನನ ಮಾಡುವ ಹಲವು ಲೇವಡಿ ಚಿತ್ರಣಗಳನ್ನು ಪ್ರಸ್ತುತ ಪಡಿಸಿಲ್ಲವೇ? ಹೀಗೆ ಜಾತಿಗೂ ಕಲೆಗೂ ಅನೈತಿಕ ಸಂಬಂಧ  ಕಲ್ಪಿಸುವ ಪುರೊಗಾಮೀ ಪ್ರವೃತ್ತಿಯನ್ನು ಬಿಟ್ಟುಬಿಡಿ. ವೈವಿಧ್ಯವೆಂಬುದು ನೈಸರ್ಗಿಕ. ನಮ್ಮ ಜೀವನ ಶೈಲಿಯಲ್ಲಿ ಸಾಮಾಜಿಕ ಅನ್ಯಾಯಗಳೇನಿದ್ದರೂ ತೂಗಿಸುವ ಚೈತನ್ಯವಿದೆ ಮೊಂಡುತನವಿಲ್ಲ.  ಮುಂದಿನ ಪೀಳಿಗೆಗಳು ಪಾಶ್ಚಾತ್ಯೀಕರಣಗೊಂಡಾಗ ಎಲ್ಲವೂ ಜಾತಿಪ್ರಜ್ಞಾ ವಿರೋಧೀ ಅಜ್ಞಾನವಿಲ್ಲದೆಯೇ  ನವೀಕೃತವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ

comments powered by Disqus
Top