ಒಂದು ಉಪಸಂಸ್ಕೃತಿ ಕ್ಷೀಣಿಸುತ್ತಿರುವಾಗ, ಒಂದು ಉಪಭಾಷೆ ಕಣ್ಮರೆಯಾಗುತ್ತಿರುವಾಗ ಅದನ್ನು ಉಳಿಸಬೇಕೆಂಬ ಕಾಳಜಿಯ ಮಾತುಗಳನ್ನು ಚರ್ವಿತಚರ್ವಣವೆಂಬಂತೆ ನಾವು ಕೇಳುತ್ತಿರುತ್ತೇವೆ.

ಟಿ. ಕೃಷ್ಣಕುಮಾರ್, ಮೈಸೂರು .

ಯಜುರ್ವೇದದ ೩೪ನೇ ಶ್ಲೊಕಿನಲ್ಲಿ ಹೇಳಿರುವಂತೆ ವಿಶ್ವನಿಯಮದ ನಿಯಂತ್ರಣ ನಡೆಯುತ್ತಿರುವದನ್ನೇ ಋತು ಎಂದು ಕರೆಯುತ್ತಾರೆ.

ಮೋನಪ್ಪ ಪೋದ್ಧಾರ, ಸೇಡಂ

ಭಾರತೀಯ ಸಮಾಜದ ಆಧಾರಸ್ಥಂಭವಾಗಿರುವ ಜಾತಿಯು ಶತಮಾನಗಳಿಂದ ಅಸ್ಪೃಶ್ಯರ, ಶೂದ್ರರ, ಹಿಂದಳಿದವರ ಶೋಷಣೆಯ ವಿಷದ ಬೇರು ಎನ್ನಬಹುದು. ಗ್ರಾಮನಗರವೆನ್ನದೆ ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ರೀತಿಯಲ್ಲಿ ಜಾತಿಯ ಅನುಭವವಾಗುತ್ತಿದೆ.

ನರಸಿಂಹರಾಜು ಕೆ. ತುಮಕೂರು

ಜಾತಿ ವ್ಯವಸ್ಥೆ ಕೇವಲ ಹಳ್ಳಿಗಳಲ್ಲಷ್ಟೇ ಎಂಬ ನಂಬಿಕೆ ಹಳೆಕಾಲದಲ್ಲಿತ್ತು ಅದಕ್ಕಾಗಿ ಡಾ|| ಬಿ.ಆರ್. ಅಂಬೇಡ್ಕರ್ ಗ್ರಾಮಗಳು ಜಾತಿಗಳ ಬಿಲಗಳೆಂದು ಕರೆದರು. ಆದರೆ ಈಗ ನಗರಗಳಲ್ಲಿ ಸಹಿತ ಜಾತಿಗೊಂದು ಸಂಘಟನೆ, ಪತ್ರಿಕೆ ಭವನ, ಜಯಂತಿ ಆಚರಣೆ ಹಾಗೂ ಒಂದು ಪಕ್ಷದೊಡನೆ ಗುರುತಿಸಿಕೊಳ್ಳುವುದು ಕಂಡುಬರುತ್ತದೆ.

ಯು. ಶ್ರಿನಿವಾಸ ಮೂರ್ತಿ/ ಸಿರುಗುಪ್ಪ

ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯ, ಜಾತಿಪದ್ಧತಿಯ ಏಣಿ ಶ್ರೇಣಿಯಲ್ಲಿ ಕೆಳಜಾತಿಯ ಜನರು, ಇತರ ಕೀಳು ಪಂಗಡಗಳು, ಆದಿವಾಸಿ ಪಂಗಡಗಳಿಗೆ ಸೇರಿದ ಜನರು ತಮ್ಮ ಸಂಪ್ರದಾಯಗಳು, ಸಂಸ್ಕಾರಗಳು, ರೀತಿ ನೀತಿಗಳು, ವಿಧಿ ವಿಧಾನಗಳು ಮೊದಲಾದವುಗಳನ್ನು ಮೇಲ್ಜಾತಿಯವರು ರೂಪಿಸಿರುವ ಆಚರಣೆಗಳನ್ನು ಅನುಸರಿಸುತ್ತಿರುವುದು

ಹಾರೋಹಳ್ಳಿ ರವೀಂದ್ರ, ಮೈಸೂರು
Top