ಜಾತಿ ಸಂವಾದ-2

ಜಾತಿ ಸಂವಾದ-2
2

ನಾನು ಈಗ ಇರುವ ಜಾತಿಯಲ್ಲಿಯೇ ಮುಂದೆಯೂ ಇರಬಯಸುತ್ತೇನೆ. ಜಾತಿ ಬದಲಾಯಿಸಬೇಕಾದರೆ ನಮ್ಮ ಶರೀರದ ಬಣ್ಣ, ರೂಪ, ಗುಣ, ಆಚಾರ, ವಿಚಾರ ಎಲ್ಲವನ್ನೂ ಬದಲಾಯಿಸಬೇಕು. ಇಲ್ಲದಿದ್ದರೆ ಮನುಷ್ಯನ ಹೆಸರು ಬದಲಾಯಿಸಿದಂತೆ. ಜಾತಿಯ ಹೆಸರು ಬದಲಾಗುವುದರಿಂದ ಏನೂ ಪ್ರಯೋಜನವಿಲ್ಲ.

ಎನ್. ಬಿ. ಲೀಲಾವತಿ, ಬೆಂಗಳೂರು

ಭಾರತೀಯ ಸಮಾಜದಲ್ಲಿ ಜಾತಿ ಎಂಬುದು ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಮ್ಮ ಸಂಪರ್ಕಕ್ಕೆ ನಿಲುಕುವ ಯಾವುದೇ ಪುರುಷ/ಮಹಿಳೆ ಯಾವ ಜಾತಿಗೆ ಸೇರಿದವರು ಎಂಬುದು ತಿಳಿದಿರದಿದ್ದರೆ ಅಷ್ಟರಮಟ್ಟಿಗೆ ಅವರು ನಮಗೆ ಅಪರಿಚಿತರು.

-ವಿಶ್ವನಾಥ ಅಡಿಗಕೊಟ್ಟೂರು-ಬಳ್ಳಾರಿ ಜಿಲ್ಲೆ.

ಇಂದಿನ ಭಾರತೀಯ ಸಮಾಜದಲ್ಲಿ ಜಾತಿಯು ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಇಂದಿನ ರಾಜಕಾರಣಿಗಳು, ಮನುವಾದಿಗಳು ಮತ್ತು ಸಂಪ್ರದಾಯವಾದಿಗಳಿಗೆ ಜಾತಿ ಅನಿವಾರ್ಯವಾಗಿದೆ. ಆದರೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಾತಿ ಅನಿವಾರ್ಯವಲ್ಲ. ಈ ಜಾತಿ ಪದ್ಧತಿಯಿಂದ ಭಾರತದಲ್ಲಿ ಅಸ್ಪೃಶ್ಯತೆ ಇಂದಿಗೂ ತಾಂಡವವಾಡುತ್ತಿದೆ.

- ಪ್ರಕಾಶ ಎಸ್. ದೊಡಮನಿ,ಹುಬ್ಬಳ್ಳಿ

ಪ್ರಪ್ರಥಮವಾಗಿ ಈ ಜಾತಿ ಪದ್ಧತಿ ಹೋಗಲಾಡಿಸಬೇಕಾದರೆ ಶಾಲಾ, ಕೆಲಸ ಇತ್ಯಾದಿ ಅರ್ಜಿಗಳಲ್ಲಿ `ಜಾತಿ' ಎಂಬ ಕಲಮನ್ನು ತೆಗೆಯಬೇಕು. ಇಲ್ಲದೆ ಇದ್ದರೆ ಕಳೆದ ಸೋಮವಾರದ ನಿಮ್ಮ ಲೇಖನದ ಚಿತ್ರದಲ್ಲಿ ತೋರಿಸಿರುವಂತೆ ಅಲ್ಲಲ್ಲೇ ಸುತ್ತಾಡುತ್ತಾ ಕೊನೆ ಇಲ್ಲದ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ.

- ಎ. ಪಿ. ರಂಗನಾಥ್ಅಮರಜಾ ಹೆಗಡೆ, ಮೈಸೂರು

ಜಾತಿಯು ಅನಿವಾರ್ಯ, ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ನಾನು ಆ ಧರ್ಮದಲ್ಲಿಯೇ ಸಾಯುವ ತನಕ ಮುಂದುವರೆಯಲು ಇಷ್ಟ ಪಡುತ್ತೆನೆ. ನಾನಿರುವ ಜಾತಿಯು ಬೇರೆ ಜಾತಿಗಿಂತ ಕೀಳು ಅಥವಾ ಮೇಲೆಂದು ನಂಬುವುದಿಲ್ಲ.

ಯಾಕೂಬ್ ಹುಸೇನ್,ಇಳಂತಿಲ ಗ್ರಾಮ ಪ. ರಾಮಕೃಷ್ಣ ಶಾಸ್ತ್ರಿ, ತೆಂಕಕಾರಂದೂರು, ಬೆಳ್ತಂಗಡಿ

ಹೌದು ಜಾತಿ ಬೇಕು, ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಆಗುವ ಅನ್ಯಾಯವನ್ನು ತಡೆದು ಕಾನೂನಿನ ಪ್ರಕಾರ ನ್ಯಾಯ ಒದಗಿಸಲು ಮತ್ತು ಅವರಿಗೆ ಸೌಕರ್ಯಗಳನ್ನು ಒದಗಿಸಲು ಜಾತಿ ಬೇಕು.

- ಎಂ. ತಿಮ್ಮಯ್ಯ,ಬೆಂಗಳೂರು ಗ್ರಾಮಾಂತರ

ಜಾತಿ ಅನಿವಾರ್ಯವಲ್ಲ. ಬದುಕು ಅನಿವಾರ್ಯ.  ಒಂದು ಬಲಿಷ್ಠವಾದ ಜಾತಿಗೆ, ಧರ್ಮಕ್ಕೆ, ಜಾತಿ ಅನಿವಾರ್ಯವಾಗಿರಬಹುದು. ರಾಜಕೀಯದ ಹಿತಾಸಕ್ತಿ ಮತ್ತು ಸಾಮಾಜಿಕ ವೈಭವೀಕರಣಗಳಿಗಾಗಿ ಜಾತಿಯ ಹೆಸರಿನಲ್ಲಿ ಜೀವನ ಮಾಡುವ ಮತ್ತು ಗೌರವ ಸಂಪಾದಿಸುವ ಜನರಿದ್ದಾರೆ. ಅವರಿಗೆ ಇದು ಅನಿವಾರ್ಯವಿರಬಹುದು.

- ಕೆ.ಸಿ. ರಾಜಣ್ಣ,ಕುಣಿಗಲ್.

ಹುಟ್ಟಿನಿಂದಲೇ ಬಂದಿರುವ ಜಾತಿ ನಮಗೆ ಅನಿವಾರ್ಯವಾಗಿದೆ.  ಏಕೆಂದರೆ ಜಾತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಾವು ಅದನ್ನು ಬಿಡುತ್ತೇವೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವಾಗಲೇ ಅರ್ಜಿಯಲ್ಲಿರುವ ಜಾತಿ ಕಾಲಂನಲ್ಲಿ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

-ಸೌಭಾಗ್ಯ ಪಿ.ಎಸ್.,ಶಿವಮೊಗ್ಗ

ಮನುಷ್ಯನಿಗೆ ಯಾವ ಜಾತಿಯೂ ಅನಿವಾರ್ಯವಲ್ಲ. ನನ್ನ ಜಾತಿಯಲ್ಲಿಯೇ ನಾನು ಇರಲು ಬಯಸುತ್ತೇನೆ. ಆದರೆ ಜಾತಿಯ ದೃಷ್ಟಿಕೋನ ಇನ್ನೂ ವಿಶಾಲವಾಗಬೇಕು. ಉದಾ: ಲಿಂಗಾಯತ ಎಂದರೆ ಪಂಚಮಸಾಲಿ, ಬಣಜಿಗ, ರೆಡ್ಡಿ, ಗಾಣಿಗ, ಹೂಗಾರ, ನಾವಲಿಗ ಇತ್ಯಾದಿಯನ್ನೊಳಗೊಂಡ ಲಿಂಗಾಯತ.

ಬಿ. ಎಂ. ಚನ್ನಪ್ಪಗೋಳ,ಬಾಗಲಕೋಟೆ

ಜಾತಿ ಎನ್ನುವುದು ಅನಿವಾರ್ಯವಾಗಿ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಯಾರು ಯಾರನ್ನು ಭೇಟಿಯಾಗಲಿ ಪರಿಚಯವಾದೊಡನೆ ಕೇಳುವುದು ಯಾವ ಜಾತಿ ಎಂದು. ಉದ್ಯೋಗದಲ್ಲಿನ ಅರ್ಜಿಗಳಲ್ಲಿಯೂ ಜಾತಿ ಕೇಳುತ್ತಾರೆ

ಬಿ. ಎಸ್. ಚಂದ್ರಶೇಖ,ರ್ಬೆಂಗಳೂರು.
Top