ಜಾತಿ ಸಂವಾದ-2

ಜಾತಿ ಸಂವಾದ-2
2

ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜಂಗಮ ಜಾತಿಯವನಾಗಿರುವ ನನಗೆ ಈ ಜಾತಿಯಲ್ಲಿ ಹುಟ್ಟಿದ್ದೇ ತಪ್ಪು ಎನಿಸುತ್ತಿದೆ. ನನ್ನ ಎರಡು ಮಕ್ಕಳೂ ಕೂಡ (9ನೇ ತರಗತಿ ಹಾಗೂ 12ನೇ ತರಗತಿ) ನಮ್ಮ ಜನಾಂಗವೇ ಇಲ್ಲವಲ್ಲಾ ನಾವು ಬೇರೆ ಜಾತಿ ಜಾತ್ಯಂತರ ಹೊಂದೋಣವೆಂದು ನೂರಾರು ಬಾರಿ ನನ್ನೊಡನೆ ಹೇಳುತ್ತಾರೆ.

- ವೀರಭದ್ರಯ್ಯ, ಚಿಕ್ಕಮಲ್ಲನಹೊಳೆ, ಕೆ.ಆರ್.ಪೇಟೆ

ಇತ್ತೀಚೆಗೆ ಮಡಿಕೇರಿಯ ನನ್ನ ಆತ್ಮೀಯರೊಬ್ಬರು ಏನೋ ಕೆಲಸದ ಬಗ್ಗೆ ಮಾತನಾಡಲು ಅವರ ಮನೆಗೆ ಕರೆದಿದ್ದಕ್ಕೆ ಹೋಗಿದ್ದೆ. ಅದು  ಮಧ್ಯಾಹ್ನದ ಹೊತ್ತು. ನನ್ನನ್ನು ಊಟ ಆಗಿದೆಯೇ ಎಂದು ವಿಚಾರಿಸಿದರು. `ಇಲ್ಲ' ಎಂದೆ. ಅದಕ್ಕವರು `ನಮ್ಮ ಮನೆಯಲ್ಲಿಯೇ ಊಟ ಮಾಡಬಹುದಿತ್ತು. ಇವತ್ತು ವೆಜ್ ಮಾಡಿದ್ದೇವೆ.

-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ

`ಜಾತಿ ಸಂವಾದ'ದಲ್ಲಿ ಮುಂದಿಟ್ಟಿರುವ ಪ್ರಶ್ನೆಗೆ ಉತ್ತರಿಸಬೇಕಾದರೆ, ಮೂಲಭೂತವಾಗಿ ಯಾವ ಜಾತಿಯವರಿಗೆ ಜಾತಿ ಅನಿವಾರ್ಯ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

- ಮೂರ್ತಿ ಬಿ.ಎಲ್.ಕೆ., ನಂಜನಗೂಡು.

ಜಾತಿ ಖಂಡಿತಾ ಅನಿವಾರ್ಯ ಅಲ್ಲ. ಅದು ನಾವು ನಿರ್ಮಿಸಿಕೊಂಡ ವ್ಯವಸ್ಥೆ ಅಷ್ಟೆ. ರಾಜಕೀಯ ಪಕ್ಷಗಳು ತಮ್ಮ ತಮ್ಮ ಓಟ್ ಬ್ಯಾಂಕ್ ಸೃಷ್ಟಿಗೋಸ್ಕರ ಜಾತಿ - ಜಾತಿಗಳನ್ನು ಎತ್ತಿ ಕಟ್ಟಿ ಅವರವರ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.

- ಬಿ. ಕೃಷ್ಣಯ್ಯ, ಅರಬಿಳವೆ, ಭದ್ರಾವತಿ

ಹಿಂದೆ, ಜಾತಿ ಎಂದರೆ ವೃತ್ತಿ ಸೂಚಕವಾಗಿತ್ತು. ದೇಶದಲ್ಲಿನ ಬೇರೆ ಬೇರೆ ಕಸುಬುದಾರರು ನೈಪುಣ್ಯ ಸಾಧಿಸಿದ್ದು ಜಾತಿ ಸಮುದಾಯದ ಒಳಗೇ ಅಲ್ಲವೆ?

- ಜೋಗನಹಳ್ಳಿ ಗುರುಮೂರ್ತಿ, ಪಿರಿಯಾಪಟ್ಟಣ
Top