ಜಾತಿ ಸಂವಾದ-3

ಜಾತಿ ಸಂವಾದ-3
ಜಾತಿ ವಿನಾಶ ನಗರೀಕರಣದಿಂದ ಮಾತ್ರ ಸಾಧ್ಯ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಕರ್ನಾಟಕದ ನಗರಗಳಲ್ಲಿ ನೀವು ಜಾತಿಯ ಹೆಸರಿನಲ್ಲಿ ಶೋಷಣೆಗೆ, ತಾರತಮ್ಯಕ್ಕೆ ಒಳಗಾಗಿದ್ದೀರೇ? ಅಥವಾ ನಗರಗಳಲ್ಲಿ ಜಾತಿ ಸಮಸ್ಯೆಯು ಸಂಪೂರ್ಣವಾಗಿ ಇಲ್ಲವಾಗಿದೆಯೇ?

ಜಾತಿ ಪದ್ದತಿಯು ನಗರಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಕುತೂಹಲಕಾರಿಯಾದುದು. ಆಧುನಿಕೋತ್ತರ ಕಾಲಘಟ್ಟದಲ್ಲಿ ಭಾರತದ ಜಾತಿವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳದ ಹೊರತು ನಗರಗಳ ಜಾತಿಸ್ವರೂಪವನ್ನು ಗ್ರಹಿಸುವುದು ಕಷ್ಟ.

ಡಾ. ಸಿ.ಜಿ. ಲಕ್ಷ್ಮೀಪತಿ,ಸಮಾಜಶಾಸ್ತ್ರಜ್ಞ

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾನು, ಹಳ್ಳಿಗಾಡಿನಲ್ಲಿ ದಲಿತರನ್ನು ಕಾಣುತ್ತಿದ್ದ, ಶೋಷಿಸುತ್ತಿದ್ದ ಬಗೆಯನ್ನು ಬಾಲ್ಯದಿಂದಲೇ ತೀರ ಹತ್ತಿರದಿಂದ ಬಹುಸೂಕ್ಷ್ಮವಾಗಿ ಅರಿತಿದ್ದೆ. ಮುಂದೆ ನನಗೆ ಹೆಚ್ಚು ಆಕರ್ಷಿಸಿದ್ದು ಬುದ್ಧ, ಬಸವ, ಲೋಹಿಯಾ, ಮಾರ್ಕ್ಸ್, ಅಂಬೇಡ್ಕರ್ ಮೊದಲಾದವರ ವಿಚಾರಧಾರೆಗಳು.

(ಮೈಸೂರಿನ ಈ ಪತ್ರದ ಲೇಖಕಿಯ ಕೋರಿಕೆ ಮೇರೆಗೆ ಹೆಸರು ಗೌಪ್ಯವಾಗಿ ಇಡಲಾಗಿದೆ)

ಕರ್ನಾಟಕದ ನಗರಗಳಲ್ಲಿ ಜಾತಿಯ ಸಮ್ಮೇಳನಗಳು ನಿರಂತರವಾಗಿ ತಮ್ಮದೇ ಆದ ಮಠ ಮಾನ್ಯಗಳ ಕೃಪಾಕಟಾಕ್ಷದಿಂದ ವ್ಯವಸ್ಥಿತವಾಗಿ ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಅಧಿಕಾರ ದಾಹಕ್ಕಾಗಿ ರಾಜಕೀಯ ಪಕ್ಷಗಳು ಸಹ ಪರೋಕ್ಷವಾಗಿ ಪ್ರೊತ್ಸಾಹಿಸುತ್ತಿವೆ.

- ಡಿ.ಎಸ್.ವೆಂಕಟಾಚಲಪತಿ, ಯಲಹಂಕ

ಬೇರೆ ಬೇರೆ ಭಾಗಗಳಿಂದ ನಗರಗಳಿಗೆ ವಲಸೆ ಬಂದು ನೆಲೆಸುವ ಪ್ರತಿಯೊಬ್ಬರು ಒಂದು ರೀತಿ ಅಭದ್ರತೆಯ ಭಾವನೆಯಲ್ಲಿರುತ್ತಾರೆ. ಹೀಗಾಗಿ ಇಲ್ಲೊಂದು ``ಐಡೆಂಟಿಟಿ'' ಅನಿವಾರ‌್ಯವಾಗಿರುತ್ತದೆ. ಇಂತಹ ಐಡೆಂಟಿಟಿಯ ಭಾಗವಾಗಿಯೆ ಜಾತಿ ಸಂಘಟನೆಗಳು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ.

- ರವೀಂದ್ರ ಕೊಟಕಿ, ಬೆಂಗಳೂರು

ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಯಡಿಯೂರು ಕೆರೆಯ ಹತ್ತಿರ ಒಂದು ಮೆಡಿಕಲ್ ಕಂಪೆನಿಗೆ ನಾನು ಮತ್ತು ನನ್ನ ಸ್ನೇಹಿತ ಹೋಗಿದ್ದೆವು. ಅಲ್ಲಿನ ನೋಟಿಸ್ ಬೋರ್ಡ್ ನೋಡಿ ಬೇಸರವಾಯಿತು, ಕೋಪವೂ ಬಂತು. ಅಲ್ಲಿ “ಮುಸಲ್ಮಾನರಿಗೆ ಕೆಲಸವಿಲ್ಲ.“ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು.

- ಜಬೀವುಲ್ಲಾ ಖಾನ್, ಬೆಂಗಳೂರು

ನಗರದಲ್ಲಿ ನಡೆಯುವ ಜಾತಿ ಸಮಾವೇಶಗಳು, ಜಾತಿ ಸಂಘಟನೆಗಳು, ಜಾತಿಯನ್ನು ಮತ್ತಷ್ಟು ಪೋಷಿಸುತ್ತಿವೆ. ಅಂತರ್ಜಾತಿ ವಿವಾಹ ಸಮಾವೇಶಗಳು ದೊಡ್ಡ ಮಟ್ಟದಲ್ಲಿ ನಡೆದರೆ ಜಾತಿ ವಿನಾಶ ಕಡಿಮೆಯಾಗಬಹುದು.

ಡಾ. ಬ್ಯಾಡರಹಳ್ಳಿ ಶಿವರಾಜ, ಹುಲಿಯೂರು ದುರ್ಗ, ಕುಣಿಗಲ್.

ನಗರಗಳಲ್ಲಿಯೂ ಸಹ ಜಾತಿ ಸಂಪೂರ್ಣವಾಗಿ ನಾಶ ವಾಗಿಲ್ಲವೆಂಬುದಕ್ಕೆ ಸ್ವಂತ ಅನುಭವಿಸಿದ ಘಟನೆ ಯೊಂದನ್ನು ಉಲ್ಲೇಖಿಸುತ್ತೇನೆ. ನಾನು ತುಮಕೂರು ನಗರದಲ್ಲಿ ವಿದ್ಯಾ ಭ್ಯಾಸಕ್ಕಾಗಿ ಬಂದು ಮೇಲ್ವರ್ಗದವರೇ ಹೆಚ್ಚಾಗಿರುವ ಪ್ರದೇಶ ದಲ್ಲಿ ಬಾಡಿಗೆ ಕೋಣೆಯೊಂದರಲ್ಲಿದ್ದಾಗ ಘಟಿಸಿದ ಸಂದರ್ಭ.

- ಮಿಡಿಗೇಶಿ ಶಿವರಾಮ, ಬೆಂಗಳೂರು

ಹುಟ್ಟಿನಿಂದಲೇ ಬೇತಾಳನಾಗಿ ಬೆನ್ನತ್ತಿರುವ ಜಾತಿ, ನಗರಗಳಿಗೆ ಬಂದ ತಕ್ಷಣ ನಾಶವಾಗುತ್ತದೆನ್ನುವುದು ಬರೀ ಭ್ರಮೆಯಷ್ಟೇ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಗರಗಳಿಗೆ ಬರುವವರನ್ನು ಬೇರೆಬೇರೆ ರೂಪಗಳಲ್ಲಿ ಜಾತಿ ಕಾಡುತ್ತಿರುತ್ತವೆ. ಅಧಿಕಾರದ ಹುದ್ದೆಗಳಲ್ಲಿ ಬೇರೆ ಬಲಿಷ್ಠ ಜಾತಿಗಳ ಜನ ಇರುತ್ತಾರೆ.

ದೇವರಾಜ್ ಎನ್., ಬೆಂಗಳೂರು.

ಇತ್ತೀಚಿನ ವರ್ಷಗಳಲ್ಲಿ ಜಾತಿ ಪದ್ಧತಿಯು ನಿಧಾನವಾಗಿ ದೂರ ಸರಿಯಲಾರಂಭಿಸಿದೆ.

ಬಿ.ಎನ್. ಭರತ, ಹುಬ್ಬಳ್ಳಿ.

ನಾವು ಜಾತಿಯಲ್ಲಿ ಪರಿಶಿಷ್ಟರಾಗಿದ್ದು, ತುಮಕೂರಿನಲ್ಲಿ ನಮ್ಮ ತಂದೆ ತಾಯಿ ವಾಸವಾಗಿದ್ದಾರೆ.

- ವಿಜಯ ಕುಮಾರ್, ಕೆ.ಟಿ, ಬೆಂಗಳೂರು
Top