ಜಾತಿ ಸಂವಾದ-4

ಜಾತಿ ಸಂವಾದ-4
- ಮದುವೆ, ಮುಂಜಿ, ತಿಥಿ ಅಥವಾ ಮನೆಯಲ್ಲಿ ಒಂದು ಸಮಾರಂಭದಂತೆ ನಡೆಯುವ ಪೂಜೆ ಇತ್ಯಾದಿಗಳಲ್ಲಿ ಜಾತಿ ಬದ್ಧವಾದ ಆಚರಣೆಗಳಿರುತ್ತವೆ. ಇಂಥವುಗಳಿಗೆ ನೀವು ನಿಮ್ಮದಲ್ಲದ ಜಾತಿಯವರನ್ನು ಆಹ್ವಾನಿಸುತ್ತೀರಾ? ಹಾಗೆಯೇ ನಿಮ್ಮದಲ್ಲದ ಜಾತಿಯವರ ಇಂಥ ಸಮಾರಂಭಗಳಲ್ಲಿ ಭಾಗವಹಿಸಿದ್ದೀರಾ? ಈ ಪ್ರಶ್ನೆಗೆ ಉತ್ತರಿಸುವಾಗ ಆಚರಣಾತ್ಮಕ ಕ್ರಿಯೆಗಳಿಲ್ಲದ ಎಲ್ಲರೂ ಭಾಗವಹಿಸುವ ಆರತಕ್ಷತೆಯಂಥ ಸಮಾರಂಭಗಳನ್ನು ಪರಿಗಣಿಸಬೇಡಿ. - ನೀವು ಎಲೆಕ್ಟ್ರಿಷಿಯನ್, ಪ್ಲಂಬರ್, ಬಡಗಿ ಅಥವಾ ಇದೇ ಬಗೆಯ ಯಾವುದಾದರೂ ವೃತ್ತಿಯವರಾಗಿದ್ದರೆ ನೀವು ಕೆಲಸ ಮಾಡಲು ಹೋಗುವ ಮನೆಯವರು ನಿಮ್ಮ ಜಾತಿ ಯಾವುದೆಂದು ಅರಿತು ನಿಮ್ಮನ್ನು ನಡೆಸಿಕೊಳ್ಳುವ ವಿಧಾನ ಬದಲಾಗುತ್ತದೆ ಎಂದು ಅನ್ನಿಸಿದೆಯೇ? ಈ ವೃತ್ತಿಯಲ್ಲಿ ಇಲ್ಲದವರಾಗಿದ್ದರೆ ಇಂಥ ವೃತ್ತಿಯವರು ನಿಮ್ಮ ಮನೆಯ ಕೆಲಸಕ್ಕೆ ಬಂದಾಗ ಅವರ ಜಾತಿ ಯಾವುದಾದರೂ ಕಾರಣಕ್ಕೆ ನಿಮಗೆ ಮುಖ್ಯವೆನಿಸಿದೆಯೇ?

ಮುಖ ಕ್ಷೌರ ಮಾಡಬೇಕಾದ ಸಂದರ್ಭದಲ್ಲಿ ಕೆಲವೊಮ್ಮೆ ತಲೆಯ ಮೇಲೆ ನಮ್ಮ ಕೈ ಇಡಬೇಕಾದ (ಮುಖ ಅಲುಗಾಡದ ಹಾಗೆ) ಸಂದರ್ಭದಲ್ಲಿ ಒಬ್ಬ ಭೂಪ `ನಿಮ್ಮ ಜಾತಿಯವರು ನಮ್ಮ ತಲೆಯ ಮೇಲೆ ಕೈಯಿಟ್ಟರೆ ಅಶುಭವಂತೆ' ಎಂದು ಹೇಳಿಯೇ ಬಿಟ್ಟ ಅವನು ಒಬ್ಬ ಪದವೀಧರ ಶಿಕ್ಷಕ ಬೇರೆ

ಮುರುಳಿ ಎ. ಬೆಂಗಳೂರು

ನಾನು ಹುಟ್ಟಿದ್ದು ಲಿಂಗಾಯಿತ ಕುಟುಂಬದಲ್ಲಿಯಾದರೂ, ಯಾವುದೇ ಜಾತಿಯ ಜನರನ್ನು ಕೀಳಾಗಿ ಅಥವಾ ಮೇಲೆಂದು ಕಾಣುವ ಪ್ರವೃತ್ತಿ ಬಾಲ್ಯದಿಂದ ನನಗೆ ಬರಲಿಲ್ಲ. ಮುಸಲ್ಮಾನ, ಹರಿಜನ, ಚಮ್ಮಾರ .... ವಿವಿಧ ಜನಾಂಗದವರು, ಮದುವೆಗಳಿಗೆ ನನ್ನನ್ನು ಕರೆಯುತ್ತಾರೆ. ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೇನೆ.

ಕೆ. ಜಿ. ಭದ್ರಣ್ಣವರ, ಮುದ್ದೇಬಿಹಾಳ

ಎಪ್ಪತ್ತರ ದಶಕದಲ್ಲಿ ನಾನು ಹಳ್ಳಿಯಿಂದ ನಗರಕ್ಕೆ ಬಂದೆ. ನಮ್ಮ ತಂದೆ ವೈದ್ಯರಾಗಿದ್ದರು.  ನಾನು ನಗರದ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರೆಸಿದೆ. ನನಗೆ ಬಹಳಷ್ಟು ಹಿಂದೂ ಗೆಳೆಯರಿದ್ದರು. ಅಂತಹ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಮದುವೆಗೆ ಕರೆದಿದ್ದರು.

ಅಬ್ದುಲ್ ವಹ್ಹಾಬ್ ಮುಲ್ಲಾ,ಗಂಗಾವತಿ

ಕೆಲವು ಡೋಂಗಿಗಳು ಬರಿಮಾತಿಗೆ `ನಾವೆಲ್ಲಾ ಒಂದೇ' ಎಂದು ಹೇಳುತ್ತಾರೆ. ನನ್ನ ಗೆಳೆಯನೊಬ್ಬ ಕೆಟ್ಟುನಿಂತ ವಿದ್ಯುತ್ ಸರಿಪಡಿಸಲು ಬ್ರಾಹ್ಮಣರೊಬ್ಬರ ಮನೆಗೆ ಹೋದರೆ ಕೆಲಸ ಆಗೋವರೆಗೆ ಸುಮ್ಮನಿದ್ದು ನಂತರ ಗೋಮೂತ್ರ ಹಾಕಿ ಮನೆ ಶುಚಿಗೊಳಿಸಿದರಂತೆ.

ಡಿ.ಕೆ. ಮಂಜುದೇವಿ, ಹಾಸನ.

ಅದು ಎಪ್ಪತ್ತರ ದಶಕದ ದಿನಗಳು. ನಾನಾಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ನನ್ನ ಗೆಳೆಯರ ಗುಂಪಿನಲ್ಲಿ ನಾನೊಬ್ಬನೆ ಲಿಂಗಾಯಿತ. ಉಳಿದವರೆಲ್ಲರೂ ಬ್ರಾಹ್ಮಣರು. ಆಗಾಗ ಅವರ ದೇವರುಗಳ ಮೆರವಣಿಗೆ ಹೊರಡುತ್ತಿದ್ದವು.

ಜಗದೀಶ್ ಎಚ್.ಬಿ., ಹುಬ್ಬಳ್ಳಿ.

ನಗರೀಕರಣದಿಂದ ಮಹಲುಗಳು ನಿರ್ಮಾಣವಾಗುತ್ತಿದೆಯೆ ಹೊರತು, ಒಳ್ಳೆಯ ಮನಸ್ಸುಗಳು ನಿರ್ಮಾಣವಾಗುತ್ತಿಲ್ಲ. ಹಿಂದಿನ ನಗರಗಳ ಜಾತೀಯತೆಗಿಂತಲೂ ಇಂದಿನ ನಗರಗಳ ಜಾತೀಯತೆ ಪರಿಸ್ಥಿತಿ ಶೋಚನೀಯವಾಗಿದೆ. ವರ್ಣಭೇದ, ಜಾತಿಭೇದ ಮತ್ತು ಅಸ್ಪೃಶ್ಯತೆಗಳಲ್ಲಿ ವರ್ಣಭೇದ  ಮತ್ತು ಜಾತಿಭೇದ ನಗರಗಳಲ್ಲಿ ಹೆಚ್ಚು.

ಕೆ.ಸಿ. ರಾಜಣ್ಣ, ಕುಣಿಗಲ್.

ನಗರಗಳ ತಥಾಕಥಿತ ಶಿಕ್ಷಿತ, ಜಾಗೃತ ಯುವಜನರ `ಜಾತ್ಯತೀತತೆ'ಯ ಬಣ್ಣ ಅರಿಯಬೇಕಾದರೆ ಭಾನುವಾರದ ಇಂಗ್ಲೀಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ `ಮೆಟ್ರೊಮೊನಿಯಲ್' ಅಂಕಣಗಳನ್ನು ಓದಬೇಕು.

ಸತ್ಯನಾರಾಯಣ ಎಂ.ಎಚ್.ಬೆಂಗಳೂರು

ನಗರ-ಪಟ್ಟಣಗಳಲ್ಲಿಯೂ ಜಾತೀಯತೆ ಇದೆ, ಆದರ ರೂಪ-ಬಣ್ಣಗಳು ಮಾತ್ರ ಬದಲಾಗಿದೆ. ನಾನೊಬ್ಬ ಹಿಂದುಳಿದ ಜಾತಿಯ  ಪದವೀಧರ ಯುವಕ. ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಇಂಟರ್‌ವ್ಯೆಗೆ ಕರೆಬಂದಿತ್ತು. ನಮ್ಮ ತಂದೆಯ ಸ್ನೇಹಿತರೊಬ್ಬರು ಆ ಸಂಸ್ಥೆಯ ಮುಖ್ಯಸ್ಥರಿಗೆ ದೂರದ ಸಂಬಂಧಿ.

ಎಸ್.ಜಿ.ಯಶವಂತ್, ಮೈಸೂರು

ನಾನು ವೈದ್ಯ, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಂಟು ತಿಂಗಳಾಗಿತ್ತು. ನಮ್ಮದು ಅಂತರ್ಜಾತಿ ವಿವಾಹ, ಪತ್ನಿ ಬ್ರಾಹ್ಮಣಳು. 10 ಕಿ.ಮೀ. ದೂರದಲ್ಲಿನ ಹೇಮಾವತಿ ತಟದ ಊರು. ಊರ ಹೊರಗೆ  ಗ್ರಾಮ ಸೇವಕರ ವಸತಿ ಗೃಹದಲ್ಲಿ ವಾಸ. ಸಾಕು ನಾಯಿಯೊಂದೆ ನಮ್ಮ ಸಂಬಂಧಿ.

ಡಾ. ಎಸ್. ಕೃಷ್ಣಮೂರ್ತಿ, ಕೆ. ಆರ್. ಪೇಟೆ

ಅರ್ಹತೆ, ಪ್ರತಿಭೆಗೆ ಪರ್ಯಾಯವೆಂದೇ ಆಗಿಬಿಟ್ಟಿರುವ ಸಾಫ್ಟ್‌ವೇರ್ ಬುದ್ಧಿವಂತರು, ಈ ನಾಡಿನ ಸಂವಿಧಾನದ ಮೂಲಭೂತ ತತ್ವವೇ ಆಗಿರುವ ಸಾಮಾಜಿಕ ನ್ಯಾಯವನ್ನೇ ಬಹಿರಂಗವಾಗಿ ನಿರಾಕರಿಸುವ ಸಾಫ್ಟ್‌ವೇರ್ ದೊರೆಗಳು ವಾಸಿಸುವ ಬೆಂಗಳೂರೆಂಬುದು ಒಂದು ಮಹಾನಗರ.

ದು.ಸರಸ್ವತಿ
Top