ಜಾತಿ ಸಂವಾದ-4

ಜಾತಿ ಸಂವಾದ-4
- ಮದುವೆ, ಮುಂಜಿ, ತಿಥಿ ಅಥವಾ ಮನೆಯಲ್ಲಿ ಒಂದು ಸಮಾರಂಭದಂತೆ ನಡೆಯುವ ಪೂಜೆ ಇತ್ಯಾದಿಗಳಲ್ಲಿ ಜಾತಿ ಬದ್ಧವಾದ ಆಚರಣೆಗಳಿರುತ್ತವೆ. ಇಂಥವುಗಳಿಗೆ ನೀವು ನಿಮ್ಮದಲ್ಲದ ಜಾತಿಯವರನ್ನು ಆಹ್ವಾನಿಸುತ್ತೀರಾ? ಹಾಗೆಯೇ ನಿಮ್ಮದಲ್ಲದ ಜಾತಿಯವರ ಇಂಥ ಸಮಾರಂಭಗಳಲ್ಲಿ ಭಾಗವಹಿಸಿದ್ದೀರಾ? ಈ ಪ್ರಶ್ನೆಗೆ ಉತ್ತರಿಸುವಾಗ ಆಚರಣಾತ್ಮಕ ಕ್ರಿಯೆಗಳಿಲ್ಲದ ಎಲ್ಲರೂ ಭಾಗವಹಿಸುವ ಆರತಕ್ಷತೆಯಂಥ ಸಮಾರಂಭಗಳನ್ನು ಪರಿಗಣಿಸಬೇಡಿ. - ನೀವು ಎಲೆಕ್ಟ್ರಿಷಿಯನ್, ಪ್ಲಂಬರ್, ಬಡಗಿ ಅಥವಾ ಇದೇ ಬಗೆಯ ಯಾವುದಾದರೂ ವೃತ್ತಿಯವರಾಗಿದ್ದರೆ ನೀವು ಕೆಲಸ ಮಾಡಲು ಹೋಗುವ ಮನೆಯವರು ನಿಮ್ಮ ಜಾತಿ ಯಾವುದೆಂದು ಅರಿತು ನಿಮ್ಮನ್ನು ನಡೆಸಿಕೊಳ್ಳುವ ವಿಧಾನ ಬದಲಾಗುತ್ತದೆ ಎಂದು ಅನ್ನಿಸಿದೆಯೇ? ಈ ವೃತ್ತಿಯಲ್ಲಿ ಇಲ್ಲದವರಾಗಿದ್ದರೆ ಇಂಥ ವೃತ್ತಿಯವರು ನಿಮ್ಮ ಮನೆಯ ಕೆಲಸಕ್ಕೆ ಬಂದಾಗ ಅವರ ಜಾತಿ ಯಾವುದಾದರೂ ಕಾರಣಕ್ಕೆ ನಿಮಗೆ ಮುಖ್ಯವೆನಿಸಿದೆಯೇ?

 
ಬಹುಪಾಲು ಪೌರಕಾರ್ಮಿಕರು ಕುಡಿಯುವ ನೀರು ಸಿಗದ ಕಾರಣಕ್ಕೆ ಎಲೆ ಅಡಿಕೆ, ಕಡ್ಡಿಪುಡಿ ಜಿಗಿದು ಬಾಯಲ್ಲಿಟ್ಟುಕೊಳ್ಳುತ್ತಾರೆ. ಮನೆಗಳಲ್ಲಿ ಅವರಿಗೆ ನೀರು ಕೊಡುವವರು ಅತಿ ವಿರಳ. ಕೊಟ್ಟರೂ ಬಚ್ಚಲು ಚೊಂಬುಗಳಲ್ಲಿ ಕೊಡುವುದು, ಬೊಗಸೆಗೆ ಸುರಿಯುವುದು ಸಾಮಾನ್ಯ.

Top