ಜಾತಿ ಸಂವಾದ-5

ಜಾತಿ ಸಂವಾದ-5
-ಜಾತಿ ನಿರ್ಮೂಲನೆಗೆ ಅಂತರ್ಜಾತಿ ವಿವಾಹಗಳು ಪರಿಹಾರವಾಗಬಲ್ಲದೇ? ಅಂತರ್ಜಾತಿ ವಿವಾಹಗಳ ವಿಷಯದಲ್ಲಿ ನಿಮ್ಮ ಅನುಭವಗಳೇನು?

ಎಪ್ಪತ್ತರ ದಶಕದಲ್ಲಿ ಪ್ರಗತಿಪರ ಚಳವಳಿಗಳಲ್ಲಿ ತೊಡಗಿಕೊಂಡು, ವೈಜಾರಿಕತೆ ರೂಪಿಸಿಕೊಳ್ಳುತ್ತಾ ಜಾತಿ ವಿನಾಶಕ್ಕಾಗಿಯೇ ಅಂತರ್ಜಾತಿ ವಿವಾಹವಾಗುತ್ತಿದ್ದ `ರೆಬೆಲ್' ದಂಪತಿಗಳಲ್ಲಿ ಅರ್ಧದಷ್ಟು ಜನ ಗಂಡನ ಜಾತಿಗೆ ಶರಣಾಗಿ ತಮ್ಮ ಮಕ್ಕಳ ಮದುವೆಗಳನ್ನು ಅದೇ ಜಾತಿಯಲ್ಲಿ ಇಂದು ಮುಂದುವರಿಸಿದ್ದಾರೆ! 

ಕೆ. ಮುದ್ದುಕೃಷ್ಣಮೈಸೂರು

ಅಂತರ್ಜಾತಿ ವಿವಾಹವನ್ನು ಅಪರೂಪಕ್ಕೆ ಒಪ್ಪಿಕೊಳ್ಳುವ ನಗರವಾಸಿ ಮೇಲ್ಜಾತಿಯವರು ತಮ್ಮ ಗಂಡು ಮಕ್ಕಳಿಗೆ ತಮಗಿಂತ ಕೆಳಜಾತಿಯ ಹಣವಂತ ಹೆಣ್ಣು ಮಕ್ಕಳನ್ನು ತರಲು ಒಪ್ಪಿಕೊಳ್ಳಬಹುದು. ಆದರೆ ಮೇಲ್ಜಾತಿಯ ಬಡವರು ಮಾತ್ರ ತಮ್ಮ ಹೆಣ್ಣು ಮಕ್ಕಳನ್ನು ಕೆಳಜಾತಿಯ ಶ್ರೀಮಂತ ಗಂಡಿಗೆ ಕೊಡಲೂ ಸಿದ್ಧರಿರುವುದಿಲ್ಲ.

ವಿಕಾಸ ಆರ್. ಮೌರ್ಯಬೆಂಗಳೂರು

ನನ್ನದು ಅಂತರ್ಜಾತಿ ವಿವಾಹ. ನಾನು ಒಕ್ಕಲಿಗ ಜಾತಿಗೆ ಸೇರಿದವಳು. ನನ್ನವರು ಲಿಂಗಾಯಿತರು. ಮದುವೆಗೆ ಬಹಳ ಸುಲಭವಾಗಿ ಮನೆಯವರ ಒಪ್ಪಿಗೆ ಪಡೆದವು. ಗುರುಹಿರಿಯರ ಸಮ್ಮುಖದಲ್ಲಿಯೇ ಮದುವೆಯಾಯಿತು. ಮದುವೆಯಾಗಿ ಒಂಬತ್ತು ವರ್ಷ ಕಳೆಯಿತು.

ಪೂರ್ಣಿಮ ರೀತೇಶ್ಮೈಸೂರು

ಪ್ರೀತಿ ಎಂಬ ಎರಡಕ್ಷರ ಮದುವೆ ಎಂಬ ಮೂರಕ್ಷರದ ಮಟ್ಟಕ್ಕೆ ಬಂದಾಗ ಪ್ರೇಮಿಗಳ ಮನಸಲ್ಲಿ ಮೊದಲು ಸುಳಿದಾಡುವುದು ಜಾತಿಯ ಪ್ರಶ್ನೆ. ಹಲವು ಶತಮಾನಗಳಿಂದಲೇ ಪ್ರೇಮಿಗಳು ಜಾತಿಯ ಎಲ್ಲೆಗಳನ್ನು ಮೀರಿದ್ದನ್ನು ಕಾಣಬಹುದು. ಆದರೆ ಅಂತಿಮವಾಗಿ ಇದರಿಂದ ಏನಾಗಿದೆ?

ರವೀಂದ್ರ ಕೊಟಕಿ, ಬೆಂಗಳೂರು

ಜಾತಿ ಕುರಿತ ಈ ಸಾರ್ವಜನಿಕ ಚರ್ಚೆಯಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವ  ಓದುಗರಿಗೆ ನಾವು ಋಣಿಯಾಗಿದ್ದೇವೆ. ಈ ಸಂವಾದವನ್ನು  ಮುಂದಿನ ಹಲವು ತಿಂಗಳುಗಳ ಕಾಲ ಬೆಳೆಸಬಹುದೆಂಬುದು ನಮ್ಮ ಆಶಯ.

ಗೋಪಾಲ್ ಗುರುಸುಂದರ್, ಸರುಕ್ಕೈ

`ನಾನು ಆ ಧರ್ಮಕ್ಕೆ ಸೇರಿದವಳು ಎನ್ನುವುದು ನಿಮ್ಮ ಬರಹದ ಮೂಲಕ ತಿಳಿದಕೂಡಲೇ ನೆರೆಹೊರೆಯ ಕೆಲವರು ಮುಖ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ಅವರ ಇಂಥ ವರ್ತನೆ ನನಗೆ ತುಂಬಾ ನೋವನ್ನುಂಟು ಮಾಡಿದೆ' ಎಂದು ಡಾ.ಜಲಜಾ ಹೇಳಿದರು.

ಸುದೇಶ ದೊಡ್ಡಪಾಳ್ಯ

ನಾನು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಭಾಗವಾದ ತೀರ್ಥಹಳ್ಳಿ ತಾಲ್ಲೂಕಿನ ಹರಳಿಮಠ ಎಂಬ ಹಳ್ಳಿಯವನು. ಹತ್ತು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿ  ಜಾತಿ ವಿಚಾರದಲ್ಲಿ ಜನ ಹೇಗೆ ವರ್ತಿಸುತ್ತಾರೆ ಎಂಬುದನ್ನು ಹತ್ತಿರದಿಂದ ಗಮನಿಸಿದ್ದೇನೆ.

ಸರ್ಜಾಶಂಕರ ಹರಳಿಮಠ
Top