ಜಾತಿ ಸಂವಾದ-6

ಜಾತಿ ಸಂವಾದ-6
ಅಂತರ `ಜಾತಿ'-ಮುಂದುವರಿಕೆ ...

ನನ್ನ ತಂದೆ-ತಾಯಿ ಅಂತರ್ಜಾತಿ ವಿವಾಹವಾದವರು. ಎಷ್ಟೋ ಬಾರಿ ಈ ಮನೆಯಲ್ಲೇಕೆ ಹುಟ್ಟಿದೆ ಎಂಬ ಪ್ರಶ್ನೆ ನನಗೆ ಎದುರಾಗಿದೆ.  ನನ್ನ ತಂದೆ ಮೇಲ್ಜಾತಿ ಬ್ರಾಹ್ಮಣ, ನನ್ನ ತಾಯಿ ಕೆಳವರ್ಗದ ವಾಲ್ಮೀಕಿ ಜನಾಂಗಕ್ಕೆ ಸೇರಿದವರು. ಬಾಲ್ಯದಲ್ಲಿ ನನಗೆ ಇದ್ಯಾವುದೂ ತಿಳಿದಿರಲಿಲ್ಲ.

ಧನಂಜಯ,ಶಿವಮೊಗ್ಗ

ಸಂಸ್ಕೃತೀಕರಣ (Sanskritization)   ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸುವುದಾದರೆ `ಕೆಳ' ಜಾತಿ ಅಥವಾ ಬುಡಕಟ್ಟು ಅಥವಾ ಇತರ ಗುಂಪುಗಳು ಮೇಲ್ಜಾತಿಗಳೆಂದು ಸ್ಥೂಲವಾಗಿ ಗುರುತಿಸಲಾಗುವ ಅಥವಾ `ದ್ವಿಜ'ರ  ಸಂಪ್ರದಾಯ, ಆಚರಣೆ, ನಂಬಿಕೆಗಳು, ಸಿದ್ಧಾಂತ ಮತ್ತು ಜೀವನ ವಿಧಾನವನ್ನು ರೂಢಿಸಿಕೊಳ್ಳ

ಹೆಚ್ಚಿನ ಜಾತಿಗಳು ಬಲವಾದ ಆಡಳಿತ ವ್ಯವಸ್ಥೆಯನ್ನು ಹೊಂದಿವೆ. ಕೆಲವು ಜಾತಿಗಳಲ್ಲಿ ಈ ವ್ಯವಸ್ಥೆಯು ಮೇಲ್ನೋಟಕ್ಕೆ ಕಾಣದಿದ್ದರೂ ಅವು ಜನರ ಮೇಲೆ ಸಡಿಲ ಮತ್ತು ಅನಿರ್ದಿಷ್ಟ ರೀತಿಗಳಲ್ಲಿ ತಮ್ಮ ಯಾಜಮಾನ್ಯವನ್ನು ಹೇರುತ್ತವೆ. ಉದಾಹರಣೆಗೆ ಜಾತಿಯೊಂದು ವ್ಯಕ್ತಿಯೊಬ್ಬನನ್ನು ಬಹಿಷ್ಕರಿಸಬಹುದು.

-ಲೂಯಿ ದುಮೋ,ಮೂಲ ಪಠ್ಯ: ಹೋಮೋ ಹೈರಾರ್ಕಿಕಸ್

ಆರು ವರ್ಷಗಳ ಹಿಂದೆ (2006) ನನ್ನ ಮಗಳ ಮದುವೆ ಮಾಡಿದೆ. ನಾವು ಒಕ್ಕಲಿಗ ಜಾತಿಯವರು. ವರ ಕ್ಷತ್ರಿಯ ಜಾತಿಗೆ ಸೇರಿದವನು. ನಾನು ಯಾವತ್ತೂ ನನ್ನ ಮಕ್ಕಳ ಮೇಲೆ ಜಾತಿ ಮತ್ತು ಸಂಪ್ರದಾಯಗಳನ್ನು ಹೇರಿಲ್ಲ. ಓದು ಮತ್ತು ಬದುಕಿನ ಆಯ್ಕೆಯನ್ನು ಅವರಿಗೇ ಬಿಟ್ಟುಬಿಟ್ಟವನು.

ಎನ್.ಶಂಕರ್ಮೈಸೂರು

ನಾನೂ ಕೂಡ ಈ ಜಾತಿ ಕಟ್ಟು ಪಾಡು ಎಂಬುದನ್ನು ಮೌಢ್ಯ ಎಂದೇ ತಿಳಿದಿದ್ದೆ. ಆದರೆ ಅದೆಲ್ಲ ನಮ್ಮ ಹಿರಿಯರು ಮಾಡಿರುವುದು ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಂಬುದನ್ನು ಈಗ ಮನಗಂಡಿದ್ದೇನೆ. ಕಾರಣ ನನ್ನ ಗೆಳತಿಗಾದ ಅನುಭವ.

ಅನಿತಾ. ಕೆ.ಎಸ್,.ಭದ್ರಾವತಿ

ಸಾಹಿತಿ ಶಿವರಾಮ ಕಾರಂತರು ಸ್ವತಃ ಅಂತರ್ಜಾತಿ ವಿವಾಹ ಮಾಡಿಕೊಂಡು ಮಾದರಿಯಾಗಿದ್ದಾರೆಂಬುದು ಅವರ ಆತ್ಮ ಚರಿತ್ರೆಯಲ್ಲಿ ತಿಳಿಯುತ್ತದೆ. ಕಾಲವೇ ಸಮಾಜ ನ್ಯೂನತೆಗಳನ್ನು ಸರಿಪಡಿಸುತ್ತದೆ ಎಂಬಂತೆ ಅಂತರ್ಜಾತಿಯ ವಿವಾಹಗಳ ಸಂಖ್ಯೆ ಹೆಚ್ಚುತ್ತಾ ಜಾತಿ ಭೇದದ ಸೋಂಕೂ ನಿವಾರಣೆಯಾಗುತ್ತದೆ.

ಕೆ. ರಾಮಸ್ವಾಮಿ,ಬೆಂಗಳೂರು
Top