ಜಾತಿ ಸಂವಾದ-7

ಜಾತಿ ಸಂವಾದ-7
ಆಹಾರ

ಬಾಡು ಅಥವಾ ಮಾಂಸ ದಲಿತರ ಆಹಾರ ಕ್ರಮದ ಬಹು ಮುಖ್ಯ ಭಾಗ. ಬಹುಶಃ ಬಾಡು ತಿನ್ನದ ದಲಿತ ಕುಟುಂಬವನ್ನು ದುರ್ಬೀನು ಹಾಕಿ ಹುಡುಕಬೇಕಷ್ಟೆ. ದಲಿತರಲ್ಲಿ ಅಷ್ಟೊಂದು ಹಾಸುಹೊಕ್ಕಾಗಿದೆ ಮಾಂಸಾಹಾರ ಪದ್ದತಿ. ದಲಿತರ ಮಾಂಸಾಹಾರ ವೈವಿಧ್ಯಮಯ.

ರಘೋತ್ತಮ ಹೊ.ಬ.

ನಮ್ಮೂರು ಗದಗ ಜಿಲ್ಲೆಯ ಲಕ್ಕುಂಡಿ. ಇಂದಿಗೂ ನಮ್ಮೂರಲ್ಲಿ ಪ್ರತ್ಯೇಕ ಜಾತಿವಾರು ಓಣಿಗಳಿವೆ. ನಮ್ಮ ಮನೆ ಇರುವುದು ನಮ್ಮದೇ ಅಂತ ಗುರುತಿಸಿಕೊಂಡಿರುವ ಗೊಲ್ಲರ (ಯಾದವರು) ಓಣಿಯಲ್ಲಿ. ಇವತ್ತಿಗೂ ಸುಮಾರು 200ಕ್ಕೂ ಹೆಚ್ಚು ಯಾದವ ಕುಟುಂಬಗಳು ಮೂಲ ಓಣಿಯಲ್ಲಿಯೇ ನೆಲೆಸಿವೆ.

ಸಾವಿತ್ರಿ ವಿ., ಹಟ್ಟಿ

ಅಡುಗೆ ಮತ್ತು ಊಟದ ವಿಧಿ ವಿಧಾನಗಳೇ ಭಾರತದಲ್ಲಿ  ಅಸ್ಪೃಶ್ಯತೆಯ ಅಸ್ತಿತ್ವಕ್ಕೆ ಕಾರಣವಾಗಿವೆಯಷ್ಟೇ ಅಲ್ಲದೆ ಅದರ ಇರುವಿಕೆಯನ್ನು ಊರ್ಜಿತಗೊಳಿಸುತ್ತಲೂ ಇವೆ. ಆಹಾರಕ್ಕೆ ಸಾಂಸ್ಕೃತಿಕ ಆವರಣವನ್ನು ಆರೋಪಿಸುವ ಈ ವಿಧಿ ವಿಧಾನಗಳು ಮತ್ತೊಂದು ಬಗೆಯಲ್ಲಿ ಮೇಲ್ಜಾತಿಗಳ ಸಾಮಾಜಿಕ ಪ್ರಾಧಾನ್ಯವನ್ನೂ ಉಳಿಸಿವೆ.

ಗೋಪಾಲ್ ಗುರು

ನಾವು ಆರೈವೈಶ್ಯ ಜನಾಂಗದವರು. ನಮ್ಮನ್ನು ಶೆಟ್ಟರು ಎಂದು ಗುರುತಿಸುವುದೇ ಹೆಚ್ಚು. ನಮ್ಮದು ಸಸ್ಯಾಹಾರಿ ಆಹಾರ ಪದ್ಧತಿ. ನಮ್ಮ ಸಮುದಾಯದ ಆಹಾರಗಳಲ್ಲಿ ಹೆಚ್ಚು ಪ್ರಸಿದ್ಧ ಕರಿದತಿಂಡಿಗಳು.

ಎಸ್. ಟಿ. ಶಾಂತಾ ಕುಮಾರಿ

ಬ್ರಾಹ್ಮಣರ ಊಟ, ಕ್ರಿಶ್ಚಿಯನ್ನರ ಪಾಠ  ಎಂಬ ಮಾತಿದೆ. ಈ ಮಾತು ಬ್ರಾಹ್ಮಣರ ಊಟದ ಹಿರಿಮೆಯನ್ನು ಹೇಳುತ್ತದೆ.

ಸಹನಾ ಕಾಂತ,ಬೈಲುಬಾಲಂಬಿ

ನಾನು ಬ್ರಾಹ್ಮಣ ಪಂಗಡಕ್ಕೆ ಸೇರಿದವನು. ನಮ್ಮಲ್ಲಿ ಸ್ಮಾರ್ಥ, ಮಾಧ್ವ, ಶ್ರೀ ವೈಷ್ಣವ ಹಾಗೂ ಹಲವಾರು ಉಪ ಪಂಗಡಗಳಿವೆ. ಸ್ಮಾರ್ಥ ಬ್ರಾಹ್ಮಣರಾದ ನಮಗೆ ಬೂದುಗುಂಬಳದ ಮಜ್ಜಿಗೆ ಹುಳಿ, ಸೊಗಡಿನ ಅವರೆಕಾಯಿ ಹಿದುಕು ಬೇಳೆ ಹುಳಿ, ಹಾಗಲ, ಬೇವಿನಹೂವಿನ ಗೊಜ್ಜು ಬಹಳ ಸ್ವಾದಿಷ್ಟ ಖಾದ್ಯಗಳು.

ಡಿ.ಎಸ್.ವೆಂಕಟಾಚಲಪತಿ,ಯಲಹಂಕ
Top