ಜಾತಿ ಸಂವಾದ-8

ಜಾತಿ ಸಂವಾದ-8
ರಂಗಭೂಮಿ ಮತ್ತು ಸಿನಿಮಾಗಳೆಂಬ ಎರಡು ಪ್ರಮುಖ ಮತ್ತು ಬಹುದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಕಲಾಪ್ರಕಾರಗಳಲ್ಲಿ ಜಾತಿಗೂ ಒಂದು ಪಾತ್ರವಿದೆಯೇ? ನೀವು ಕ್ಷೇತ್ರದಲ್ಲಿದ್ದರೆ ನಿಮ್ಮ ಜಾತಿಯ ಕಾರಣಕ್ಕಾಗಿ ಎಂದಾದರೂ ಅವಕಾಶಗಳನ್ನು ಕಳೆದುಕೊಂಡಿದ್ದೀರಾ?

ಮೈಸೂರಿನಲ್ಲಿ ಈಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ  ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆರೇಳು ವರ್ಷದ ವಿದ್ಯಾರ್ಥಿ ವೀರಗಾಸೆ ವೇಷ ಧರಿಸಿ ಬಂದಿದ್ದ. ಈತ ಕಣ್ಣುಗಳನ್ನು ಅರಳಿಸುತ್ತಾ `ಅಹಹ..ರುದ್ರ, ಅಹಹ..ದೇವ' ಎನ್ನುತ್ತಾ ಹೆಜ್ಜೆ ಹಾಕಿದ.

ಸುದೇಶ್, ದೊಡ್ಡಪಾಳ್ಯ

ಜಾತಿವಾದ ಕೆಟ್ಟದ್ದು, ಅದು ಬ್ರಾಹ್ಮಣ ಮತ್ತು ಶೂದ್ರರ ನಡುವಣ ಇರಬೇಕಾದ ಒಂದು `ಯುದ್ಧ', ಕೆಳವರ್ಗದವರು ತಮಗೆ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಲು ಇರುವ ಒಂದು ಅಸ್ತ್ರ ಎಂಬ ಮೂರು ಪೂರ್ವಗ್ರಹಗಳಿಂದಾಗಿ ದೃಶ್ಯ ಸಂಸ್ಕೃತಿಯಲ್ಲಿ ಜಾತಿವಾದದ ಕುರಿತ ಚರ್ಚೆಯನ್ನು ಈತನಕ ಮೌನಗೊಳಿಸಲಾಗಿದೆ.

ಎಚ್.ಎ. ಅನಿಲ್‌ಕುಮಾರ್

ಈಗ ನಿಮ್ಮ ಜಾತಿ ವಿರೋಧ ಪ್ರಜ್ಞೆಯು ಕಲಾಕ್ಷೇತ್ರಕ್ಕೆ ನುಗ್ಗಿದೆ. ಎಲ್ಲ ಮಾನವರೂ ಎಲ್ಲ ಕಲೆಗಳನ್ನೂ ಕಲಿತು ಒಂದೇ ರೀತಿಯಲ್ಲಿ ಅಭಿವ್ಯಕ್ತಿಸಬೇಕು  ಅನ್ನುವುದು ವೈವಿಧ್ಯತೆಯೇ ನಿಸರ್ಗ ಅನ್ನುವ ಸತ್ಯಕ್ಕೆ  ವಿರುದ್ಧ.

ಹರಿಹರ

ಜಾತಿ ಎಂದಾಗಲೆಲ್ಲ ನನಗೆ ಒಂದು ಘಟನೆ ನೆನಪಾಗುತ್ತದೆ. ಯಕ್ಷಗಾನ ತಂಡವೊಂದರಲ್ಲಿ ನಾನಿದ್ದೆ. ಆ ದಿನ ಮೇಳದ ಚೆಂಡೆಯವರಿಗೆ ಅನಾರೋಗ್ಯ ನಿಮಿತ್ತ ಭಾಗವಹಿಸಲಾಗಲಿಲ್ಲ. ಯಜಮಾನರು ನನ್ನನ್ನು ಚೆಂಡೆ ಬಾರಿಸುವಂತೆ ಸೂಚಿಸಿದರು.

ಗುರು ಬನ್ನಂಜೆ, ಸಂಜೀವ, ಸುವರ್ಣ

ಭಾರತದ ಕಲೆ ಪ್ರಕಾರಗಳಿಗೆ ಅಂಟಿಕೊಂಡು ಬಂದಿರುವ ಅಮಾನವೀಯವಾದ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಆಧುನಿಕ ಯೋಚನಕ್ರಮಕ್ಕೆ ತೆರೆದುಕೊಂಡ ಮಂದಿ ಅನೇಕ ಕಲೆಗಳನ್ನು ಸಮಕಾಲೀನವಾದ ಬದಲಾವಣೆಗೊಳಪಡಿಸಿದರು.

ಎ. ನಾರಾಯಣ

ಮೈಸೂರು ಅರಮನೆ ಮುಂದೆ ಭವ್ಯ ವೇದಿಕೆ. ಅಲ್ಲಿ ನಾಡಿನ, ದೇಶದ ಹೆಸರಾಂತ ಪಂಡಿತರು, ವಿದ್ವನ್‌ಮಣಿಗಳ ಕಾರ್ಯಕ್ರಮ. ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸುವ ಕಲಾವಿದರಿಗೆ ರಾಜ ಮರ್ಯಾದೆ.

ಸುದೇಶ, ದೊಡ್ಡಪಾಳ್ಯ

ಗುರುಗಳಾದ ಸಂಜೀವ ಸುವರ್ಣರ ದೇವರಿನ್ನೂ ಕೋಪಿಸಿಕೊಂಡಿಲ್ಲ. ಆದರೆ ನಮ್ಮ ದೇವರ ಮುನಿಸು ಇನ್ನೂ ಇಳಿದಿಲ್ಲ. ನಿಮಗೇ ದೇವಾಲಯದ ಒಳಗೆ ಬಿಡದಿದ್ದವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಜಾತಿಗಳಾದ ಕೂಸಾಳು ಮತ್ತು ಕೊರಗರಿಗೆ ಬಿಟ್ಟಾರೆಯೇ?

ಸಂತೋಷ ಗುಡ್ಡಿಯಂಗಡಿ,ಹೆಗ್ಗಡಹಳ್ಳಿ

ವೀರಗಾಸೆ ಕುಣಿತ ಲಿಂಗಾಯಿತರ ಜಾನಪದ ಕಲಾ ಪ್ರಕಾರವಲ್ಲ ಅದು ಕುರುಬರ  ಜಾನಪದ ಸಂಪ್ರದಾಯ ಹಾಗೂ ಕಲಾ ಪ್ರಕಾರ.  ಹಿಂದೆ ಈ ವೀರಗಾಸೆ ಕುಣಿತ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿತ್ತು ಇಂದಿಗೂ ಹಳೇ ಮೈಸೂರು ಪ್ರಾಂತದ ಮದ್ದೂರು  ಮಳವಳ್ಳಿ ಮೈಸೂರು ಕೆಲವು ತಾಲ್ಲೂಕು  ಕೆಲವು ಹಳ್ಳಿಗಳಲ್ಲಿ ಈ ವೀರಗಾ

ಯೋಗೀಶ್,ಬೆಂಗಳೂರು

ನಾನೊಮ್ಮೆ ಮೊಹರಂ ಹಬ್ಬದ ಅಧ್ಯಯನಕ್ಕಾಗಿ ಸುರಪುರ ಸಮೀಪದ ಕೆಲವು ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೆ. ಆಗ ಕೆಲವು ಕಡೆ ಮೊಹರಂ ಆಚರಣೆ ನಿಂತಿರುವುದು ಗಮನಕ್ಕೆ ಬಂತು. ಇದರ ಕಾರಣ ಹುಡುಕಿದೆ. ಮೊಹರಂ ಹಬ್ಬಕ್ಕೆ ಹಲಗೆ ಬಡಿಯುವುದನ್ನು ದಲಿತರು ವಿರೋಧಿಸಿದ್ದರು. ನಾವೇ ಯಾಕೆ ಬಡಿಯಬೇಕು?

-ಅರುಣ್, ಜೋಳದಕೂಡ್ಲಿಗಿ

ನಾನೀಗ `ಮೈನಾ' ಚಿತ್ರ ನಿರ್ದೇಶಿಸುತ್ತಿದ್ದೇನೆ. ನನ್ನ ಛಾಯಾಗ್ರಾಹಕ ಬ್ರಾಹ್ಮಣ ಜಾತಿಗೆ ಸೇರಿದವರು. ನಾಯಕ ಲಿಂಗಾಯತ ಸಮುದಾಯದಿಂದ ಬಂದವರು. ಕಾರ್ಯಕಾರಿ ನಿರ್ಮಾಪಕರು ಗೌಡ ಸಮುದಾಯದವರು. ನಾನೊಬ್ಬ ದಲಿತರ ಹುಡುಗ. ಅವರವರ ಜಾತಿ ನೋಡಿ ನಾನು ಅವಕಾಶ ನೀಡಿಲ್ಲ. ನನಗೆ ಅವಕಾಶ ನೀಡಿದವರು ಕೂಡ ಹಾಗೆ ಮಾಡಿಲ್ಲ.

ನಾಗಶೇಖರ್ಚಲನಚಿತ್ರ ನಿರ್ದೇಶಕ / ನಿರೂಪಣೆ: ಡಿ.ಕೆ. ರಮೇಶ್
Top