ಜಾತಿ ಸಂವಾದ-8

ಜಾತಿ ಸಂವಾದ-8
ರಂಗಭೂಮಿ ಮತ್ತು ಸಿನಿಮಾಗಳೆಂಬ ಎರಡು ಪ್ರಮುಖ ಮತ್ತು ಬಹುದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಕಲಾಪ್ರಕಾರಗಳಲ್ಲಿ ಜಾತಿಗೂ ಒಂದು ಪಾತ್ರವಿದೆಯೇ? ನೀವು ಕ್ಷೇತ್ರದಲ್ಲಿದ್ದರೆ ನಿಮ್ಮ ಜಾತಿಯ ಕಾರಣಕ್ಕಾಗಿ ಎಂದಾದರೂ ಅವಕಾಶಗಳನ್ನು ಕಳೆದುಕೊಂಡಿದ್ದೀರಾ?

ಯುವ ಚಲನಚಿತ್ರ ನಿರ್ದೇಶಕ ನಾಗಶೇಖರ್ ಸಿನಿಮಾ  ಜಾತಿ ಮೀರಿದ ಕಲೆ ಎಂದು ಒಮ್ಮುಖವಾಗಿ ಮಾತನಾಡಿದ್ದಾರೆ. ಅವರು ಹೇಳುವ ಕೆಲ ಸಂಗತಿಗಳನ್ನು ಉದಾಹರಣೆಯಾಗಿ ಒಪ್ಪಬಹುದಾದರೂ ಸಿನಿಮಾ ಕಲೆ ಜಾತಿ ಮೀರಿದೆ ಎಂದು ಹೇಳುವುದು ಅಪ್ರಾಮಾಣಿಕವೆಂದು ಕಾಣುತ್ತದೆ.

-ಪಂಪಾಪತಿ ಗಾಳೆಮ್ಮನಗುಡಿ,ಹಂಪಿ

ನಾಗಶೇಖರ್ ಅವರು `ಜಾತಿ ಮೀರಿದ ಕಲೆ ಸಿನಿಮಾ' ಎಂದು ಬರೆದಿರುವುದನ್ನು ಓದಿದೆ. ಚಿತ್ರರಂಗದಲ್ಲಿ ಜಾತೀಯತೆ ಇಲ್ಲವೇ ಇಲ್ಲ. ಇದೆ ಎಂದು ಹೇಳುತ್ತಿರುವವರು ಚಿತ್ರರಂಗಕ್ಕೆ ಕಪ್ಪು ಚುಕ್ಕೆ. ಹೊಸಬರಿಂದ ಈ ರೀತಿಯ ಹುಯಿಲೇಳುತ್ತಿದೆ ಎಂದು ಅವರು ಹೇಳಿದ್ದಾರೆ.

-ವಿ.ಎಂ. ಶ್ರೀನಿವಾಸ,ಬೆಂಗಳೂರು

`ವೀರಗಾಸೆ  ಕಲಾಪ್ರಕಾರ ಕುರಿತಂತೆ ಸುದೇಶ ದೊಡ್ಡಪಾಳ್ಯ (ಜ. 21) ಮತ್ತು ಯೋಗೀಶ್ ಬೆಂಗಳೂರು(ಜ. 28) ಇವರ ಲೇಖನಗಳಿಗೆ ಒಂದು ಪ್ರತಿಕ್ರಿಯೆ.

ಡಾ. ಲಿಂಗದಹಳ್ಳಿ ಹಾಲಪ್ಪ,ಕುಡಿತಿನಿ

ಕಲಾವಿದ ಸಂಜೀವ ಸುವರ್ಣರು ಯಕ್ಷಗಾನದ ನಾಂದಿ ಪೂಜೆಗೆ ಚೆಂಡೆ ಬಡಿಯುವ ಸಲುವಾಗಿ ದೇವಸ್ಥಾನದ ಒಳಹೋಗಲು ಹಿಂಜರಿದ ಬಗೆಯನ್ನು ಉಲ್ಲೇಖಿಸಿದ್ದಾರೆ. ಅವರು ಹಿಂದುಳಿದ ಬಿಲ್ಲವ ಸಮಾಜಕ್ಕೆ ಸೇರಿದವರಾದುದರಿಂದ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದ್ದಿರಬೇಕು.

ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್

ಪಂಚವಾದ್ಯವನ್ನು, ವಾಲಗವೆಂದೂ, ಮಂಗಲವಾದ್ಯವೆಂದೂ ಕರೆಯುತ್ತಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ಒಂದು ಜನಪದ ವಾದ್ಯ ಪ್ರಕಾರ. ಮೋವರಿ(ಮೌರಿ) ಶೃತೆ, ದೋಳು, ತಾಸ್ಮೋರು, ತಾಳ ಇವುಗಳು ಪಂಚವಾದ್ಯದ ಘಟಕಗಳಾಗಿವೆ.

ವಿಠ್ಠಲ ಭಂಡಾರಿ,ಕೆರೆಕೋಣ

ಮೊದಲೆಲ್ಲಾ ಚಿತ್ರರಂಗದಲ್ಲಿ ಜಾತಿ ಎಂಬುದು ಇರಲಿಲ್ಲ. ಆದರೆ ಯಾವಾಗ ರಾಜಕೀಯ ಕ್ಷೇತ್ರದಲ್ಲಿ ಜಾತಿ ನುಸುಳಲು ಆರಂಭಿಸಿತೋ ಆಗ ಆ ಕಾಯಿಲೆ ಸಿನಿಮಾದಂಥ ಪ್ರಭಾವಿ ಮಾಧ್ಯಮಗಳಲ್ಲೂ ಬೇರೂರಲು ತೊಡಗಿತು.

ಲೋಹಿತಾಶ್ವಹಿರಿಯ ನಟ,ನಿರೂಪಣೆ: ಡಿ.ಕೆ. ರಮೇಶ್
Top