ಜಾತಿ ಸಂವಾದ-9

ಜಾತಿ ಸಂವಾದ-9
ಜನರಿಂದ ಆಯ್ದ ಕೆಲವು ಜಾತಿ ಮೇಲಿನ ಪ್ರತಿಕ್ರಿಯೆಗಳು .....

ನಾವು ಈ ಸಂವಾದವನ್ನು ಪ್ರಾರಂಭಿಸಿದಾಗ ಜಾತಿಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಭಾರತದಲ್ಲಿ ಜಾತಿಯು ಎಲ್ಲ ಕ್ಷೇತ್ರಗಳಲ್ಲೂ ತಳವೂರಿರವದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಖರವಾಗಿ ಕಂಡುಬರುತ್ತಿದೆ. ಹೆಚ್ಚು ಹೆಚ್ಚು ಜನರನ್ನು ಅದು ಬಾಧಿಸುತ್ತಿದೆ.

ಗೋಪಾಲ್ ಗುರು/ ಸುಂದರ್ ಸರುಕ್ಕೈ

ಪ್ರೇಕ್ಷಕರ ಪ್ರೀತಿಯಲ್ಲಿ, ಶ್ರಮದಲ್ಲಿ ಹಾಗೂ ಪ್ರತಿಭೆಯನ್ನು ಅರಸುವಲ್ಲಿ ಖಂಡಿತಾ ಜಾತಿಯ ಕೆಲಸ ನಡೆಯದು. ಉದಾಹರಣೆಗೆ ವರನಟ ರಾಜ್‌ಕುಮಾರ್‌ರನ್ನು ಆರಾಧಿಸುವ ಅದೆಷ್ಟೋ ಮೇಲ್ಜಾತಿಯ ಪ್ರೇಕ್ಷಕರಿದ್ದಾರೆ.

ಮಂಡ್ಯ ರಮೇಶ್ನಟ- ನಿರ್ದೇಶಕ/ನಿರೂಪಣೆ: ಡಿ.ಕೆ. ರಮೇಶ್

ಜಾತಿ ವಿಚಾರವು ಈಗ ರೂಢಿಗತ ಆಚರಣೆಯಾಗಿ ಉಳಿದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಾತಿ ಮೀಸಲಾತಿಯು ಈಗ ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ಅಂಕಗಳಲ್ಲಿ ತಪ್ಪಬಹುದಾದ ವಿದ್ಯಾಭ್ಯಾಸದ ಅವಕಾಶಗಳ ಸೀಟುಗಳ ಲೆಕ್ಕಾಚಾರ.

ಪಿ.ಆರ್. ಆನಂದ್

ಒಂದು ಉಪಸಂಸ್ಕೃತಿ ಕ್ಷೀಣಿಸುತ್ತಿರುವಾಗ, ಒಂದು ಉಪಭಾಷೆ ಕಣ್ಮರೆಯಾಗುತ್ತಿರುವಾಗ ಅದನ್ನು ಉಳಿಸಬೇಕೆಂಬ ಕಾಳಜಿಯ ಮಾತುಗಳನ್ನು ಚರ್ವಿತಚರ್ವಣವೆಂಬಂತೆ ನಾವು ಕೇಳುತ್ತಿರುತ್ತೇವೆ.

ಟಿ. ಕೃಷ್ಣಕುಮಾ,ರ್ಮೈಸೂರು

`ಜಾತಿ ಸಂವಾದ' ಅಂಕಣದಲ್ಲಿ ಫೆ.4ರಂದು ಪ್ರಕಟವಾದ ಪಾಲ್ತಾಡಿ ರಾಮಕೃಷ್ಣಾಚಾರ್ ಅವರ ಬರಹವು ಯಕ್ಷಗಾನದ ಇತಿಹಾಸವನ್ನು ಮೇಲಿಂದ ಮೇಲೆ ನೋಡಿದಂತೆ ಇದ್ದು ಯಾವುದೇ ನಿಲುವನ್ನು ಸ್ಪಷ್ಟವಾಗಿ ಬಿಂಬಿಸುತ್ತಿಲ್ಲ.

ರವೀಂದ್ರ ಬಂಟ್ವಾಳ,ಬೆಂಗಳೂರು
Top