ಜಾತಿ ಸಂವಾದ-13

ಜಾತಿ ಸಂವಾದ-13
ಕಲೆಗೂ ಅಂಟಿಕೊಂಡಿರುವ ಜಾತೀಯತೆಯ ಕಲೆ-ಮುಂದುವರಿಕೆ ...

ಆಕೆ ಕುಣಿಯಬಲ್ಲಳು. ಕುಣಿಯುತ್ತಾಳೆ. ಆಕೆ  ಹಾಡಬಲ್ಲಳು. ಹಾಡುತ್ತಾಳೆ. ಮೇಲ್ಜಾತಿ ಪುರುಷರು ಅದನ್ನು ನೋಡುತ್ತ ಆನಂದಿಸುತ್ತಾರೆ. ಅವಳದ್ದು ಅದಕ್ಕೆ ಮೌನಸಮ್ಮತಿ. ಆಕೆಗೆ ಬೇರೆ ದಾರಿಯೇ ಇಲ್ಲ. ಕೆಲವೊಮ್ಮೆ ಆಕೆ ಅದನ್ನು ನಿಲ್ಲಿಸಬಯಸುತ್ತಾಳೆ. ಮಗುವಿಗೆ ಹಾಲುಣಿಸಬೇಕು ಎಂಬುದು ಆಕೆಗೆ ನೆನಪಾಗಬಹುದು.

ತ್ರಿಪುರಾರಿ ಶರ್ಮ

ಜಾತಿಗೂ ನುಡಿಗೂ ಏನು ನಂಟು? ಇವುಗಳ ನಡುವೆ ಯಾವ ಬಗೆಯ ನಂಟಿರಲು ಸಾಧ್ಯ? ದಿಟ, ಜಾತಿಯಷ್ಟೇ ಅಲ್ಲ ಲೋಕದಲ್ಲಿರುವ ಜಾತಿ, ಲಿಂಗ, ಅಂತಸ್ತು, ಧರ್ಮ ಎಂಬೆಲ್ಲ ಒಡಕುಗಳು ಹಾಗೂ ಮಾನವ ಸಮುದಾಯಗಳ ಬಗೆಗಿನ ಎಲ್ಲ ರೀತಿಯ ಕ್ರಿಯೆಗಳೂ ಕೂಡ ನುಡಿಯಲ್ಲಿಯೇ ಅಂತರ್ಗತವಾಗಿರುತ್ತವೆ.

ಮೇಟಿ ಮಲ್ಲಿಕಾರ್ಜುನ

ಸರಕಾರಿ ಕೆಲಸದ ಸಲುವಾಗಿ ಬೆಂಗಳೂರಿನಲ್ಲಿದ್ದ ನಮ್ಮ ತಂದೆಗೆ ದೂರದ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ವರ್ಗಾವಣೆಯಾಗಿತ್ತು.

ಡಾ. ನಾಗರಾಜ ಬಿ. ಎಸ್. ಬೆಂಗಳೂರು

ಭಾರತೀಯ ಸಮಾಜದಲ್ಲಿ ಜಾತಿ ನಿರ್ಧಾರವಾಗುವುದು ಆಹಾರ ಪದ್ಧತಿಯಿಂದಲೆ. ಅಂತರ್ಜಾತಿ ವಿವಾಹಗಳೂ ಜರುಗಿದಾಗಲೂ ಆಹಾರ ಕ್ರಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಜಾತಿಯಲ್ಲಿ ಮಾಂಸಾಹಾರಿಗಳು ಮಾಂಸವನ್ನು ವರ್ಜಿಸುವುದು, ಶಾಕಾಹಾರಿಗಳು ಮಾಂಸಾಹಾರ ಬಳಸುವುದು ಇತ್ತೀಚಿನ ಪ್ರವೃತ್ತಿ.

ಶ್ವೇತಾರಾಣಿ ಎಚ್. ಮೈಸೂರು

ಭೂತಗಳು ವಿವಿಧ ಜಾತಿಗಳಲ್ಲಿ ಹುಟ್ಟಿದರೂ ಅವುಗಳ ಪಾತ್ರವನ್ನು ಮೂರ್ನಾಲ್ಕು ನಿರ್ದಿಷ್ಟ ಜಾತಿಯವರು ಮಾತ್ರ ಮಾಡುತ್ತಾರೆ. ಆದರೆ ಅವುಗಳ ಆರಾಧನೆಯನ್ನು ಎಲ್ಲಾ ಜಾತಿಯವರು ಮಾಡುತ್ತಿರುವುದು ವಿಶೇಷ.

-ಡಾ.ಸತೀಶ್ ಕುಮಾರ್ ಅಂಡಿಂಜೆ
Top