ಜಾತಿ ಸಂವಾದ 14

ಜಾತಿ ಸಂವಾದ 14
ನಮಗೆ ನಮ್ಮ ಜಾತಿ ಯಾವುದೆಂದು ತಿಳಿಯುವುದು ಹೇಗೆ? ನಾವು ನಿರ್ದಿಷ್ಟ ಜಾತಿಯೊಂದಕ್ಕೆ ಸೇರಿದ್ದೇವೆಂಬುದಕ್ಕೆ ಖಾತರಿ ಏನು? `ಸಂಸ್ಕೃತೀಕರಣ' ಪ್ರಕ್ರಿಯೆಯ ಉದಾಹರಣೆಯನ್ನೇ ಪರಿಗಣಿಸುವುದಾದರೆ ಕೆಳ ಜಾತಿಗಳು ಮೇಲ್ಜಾತಿಗಳ ಮಟ್ಟಕ್ಕೆ ಏರುವ ಒಂದು ಪ್ರಯತ್ನ ಸದಾ ಚಾಲ್ತಿಯಲ್ಲಿರುತ್ತದೆ. ಹಾಗಿರುವಾಗ ನಮ್ಮ ಪೂರ್ವಜರು ಬೇರೆ ಯಾವುದೋ ಒಂದು ಜಾತಿಯವರಾಗಿರುವ ಸಾಧ್ಯತೆ ಇಲ್ಲವೇ? ಸತ್ಯಾಸತ್ಯತೆಗಳ ಪರೀಕ್ಷೆಗೆ ಒಳಪಡದ ಅನೇಕ ನಂಬಿಕೆಗಳು ಜಾತಿ ಆಚರಣೆಗಳ ಹೃದಯದಲ್ಲಿವೆ. ತಂದೆ-ತಾಯಿಗಳಿಂದ ಮಕ್ಕಳಿಗೆ ಜಾತಿ ಹರಿದುಬರುವುದು ಹೇಗೆ ಎಂಬುದನ್ನು ನಾವು ಅರಿತಿದ್ದೇವೆಯೇ? ನಾವು ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ್ದೇವೆ ಎಂದು ಏಕೆ ಹೇಳಿಕೊಳ್ಳುತ್ತೇವೆ? ಜಾತಿ ತಲೆಮಾರಿನಿಂದ ತಲೆಮಾರಿಗೆ ಹರಿಯುವಾಗ ಕೇವಲ ಗಂಡಿನ ಮೂಲಕವೇ ಸಾಗುವುದೇಕೆ? ಈ ನಂಬಿಕೆಗಳು ಯಾವುದನ್ನು ಆಧಾರವಾಗಿಟ್ಟುಕೊಂಡಿವೆ? ವಂಶವಾಹಿಗಳಿಂದ ತಂದೆ-ತಾಯಿಗಳ ಕಣ್ಣಿನ ಬಣ್ಣ ಮಕ್ಕಳಿಗೆ ದೊರೆಯುವಂತೆ ಅವರ ಜಾತಿಯೂ ಮಕ್ಕಳಿಗೆ ದೊರೆಯುತ್ತದೆಯೇ? ಈ ವರ್ಗಾವಣೆ ಕೇವಲ ಜೈವಿಕವೇ ಅಥವಾ ಸಾಮಾಜಿಕವೇ? ಜಾತಿ ನೈಸರ್ಗಿಕ ಹಾಗೂ ಸಾಮಾನ್ಯ ಎನ್ನಬಹುದೇ? ಈ ಎಲ್ಲಾ ಪ್ರಶ್ನೆಗಳನ್ನು ಸಂಕ್ಷಿಪ್ತಗೊಳಿಸುವುದಾದರೆ ಏಕೆ ಮಾಡುತ್ತಿದ್ದೇವೆ ಎಂದು ಅರಿಯದೆಯೇ ಅಥವಾ ಆ ಕುರಿತಂತೆ ಆಲೋಚಿಸಿದೆಯೇ ಜಾತಿಯನ್ನು ಆಚರಿಸುವುದು ಜಾತಿಯಲ್ಲಿ ಗುರುತಿಸಿಕೊಳ್ಳುವುದನ್ನು ಮಾಡುತ್ತಿದ್ದೇವೆಯೇ?

ನನಗೆ ನನ್ನ ಜಾತಿ ತಿಳಿದಿದ್ದು ಮನೆಯರು ಆಡಿಕೊಳ್ಳುತ್ತಿದ್ದ ಮಾತಿನಿಂದ ಮತ್ತು ಬೆಳೆಯುತ್ತ ಬೆಳೆಯುತ್ತಾ ವಿಧಿಸಿದ ಕಟ್ಟುಪಾಡಿನಿಂದ. ನನ್ನ ಜಾತಿಯೇ ಶ್ರೇಷ್ಠವೆಂದು ಅಚ್ಚಳಿಯದಂತೆ ಬೇರೂರಿತ್ತಾಗಿ  ಇತರರು ನನ್ನನ್ನು ಕೀಳಾಗಿ ಕಂಡಾಗ ಕೋಪವೂ ದುಃಖವು ಉಂಟಾಗುತ್ತಿತ್ತು.

ಆರ್. ಕೆ. ದಿವಾಕರ ಮೈಸೂರು

ಈ ಜಗತ್ತೇ ಒಂದು ಬಹುರೂಪಿ ಶಿಕ್ಷಣ ಕೇಂದ್ರ. ಇದೊಂದು ಅದ್ಭುತ ಕಲಾ ಶಾಲೆ ಕೂಡಾ ಹೌದು. ಹಾಗಾಗಿ ಇಲ್ಲಿ ನೋಡುವುದಕ್ಕೆ, ಕೇಳುವುದಕ್ಕೆ ಮತ್ತು ಕಲಿಯುವುದಕ್ಕೆಲ್ಲಾ ಸಾಕಷ್ಟು ಆಕರಗಳಿವೆ. ಅದರಲ್ಲಿ ವೈವಿಧ್ಯತೆಗಳೂ ಇವೆ.

ರವಿ ರಾ. ಅಂಚನ್ ಮುಂಬೈ

ಬ್ರಾಹ್ಮಣ ಎನಿಸಿಕೊಂಡವ ತನ್ನ ಮಗನಿಗೆ ಉಪನಯನ ಮಾಡುವ ಸಂದರ್ಭದಲ್ಲಿ ಒಂದು ಕಿವಿಮಾತು ಹೇಳುತ್ತಾನೆ. `ಜನ್ಮನಾ ಜಾಯತೇ ಜಂತುಃ ಕರ್ಮಣಾ ಜಾಯತೇ ದ್ವಿಜಃ' ನೀನು ಹುಟ್ಟಿನಿಂದ ಕೇವಲ ಜಂತುವಾಗಿದ್ದೀ.

ಪ. ರಾಮಕೃಷ್ಣ ಶಾಸ್ತ್ರಿ. ಬೆಳ್ತಂಗಡಿ

ನಾನು ಹುಟ್ಟಿ ಬೆಳೆದದ್ದು ರಾಯಚೂರಿನ ಅಸ್ಕಿಹಾಳ, ಎರಡನೆಯ ತರಗತಿಯಿಂದ ಸಂಶೋಧನೆಯ ತನಕವೂ ಇದ್ದದ್ದು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ.

ರಮೇಶ ಅರೋಲಿ ಅಸ್ಕಿಹಾಳ

ನಮ್ಮ ಸುತ್ತಮುತ್ತ ಗಾಳಿ ಇದೆಯೋ ಇಲ್ಲವೋ ಎಂಬುದನ್ನ ಹಿಡಿದು ತೋರಿಸಲು ಆಗುವುದಿಲ್ಲ ಆದರೆ ಉಸಿರಾಡುತ್ತಾ ಅನುಭವಿಸುತ್ತೇವೆ. ಈ ಉಸಿರಾಟವು ಒಮ್ಮಮ್ಮೆ ಶುದ್ಧ ಗಾಳಿಯ ಕೊರತೆಯಿಂದ ನಮಗೆ ತೊಂದರೆ ತರಬಹುದು, ರೋಗ ಬರಬಹುದು, ಗಾಳಿ ಸಿಗದೇ ನಾವು ಸತ್ತೆ ಹೋಗಬಹುದು.

ಪ್ರೊ. ಎಂ. ಯು. ಕೃಷ್ಣಯ್ಯ

ನೂರೆಂಟು ಜಾತಿಗಳಿಂದ ಕೂಡಿರುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ, ಜಾತಿಯ ಬಗೆಗಿನ ಭ್ರಮೆಗಳು ಬಹು ವಿಲಕ್ಷಣವಾಗಿವೆ.

ಸಿ ಪಿ ನಾಗರಾಜ ಬೆಂಗಳೂರು
Top