ಜಾತಿ ಸಂವಾದ 15

ಜಾತಿ ಸಂವಾದ 15
ಜಾತಿ ತಿಳಿಯುವದು ಹೇಗೆ ? ಮುಂದುವರಿಕೆ ...

ಪ. ರಾಮಕಷ್ಣ ಶಾಸ್ತ್ರಿ ಅವರು  ಕರ್ಮದಿಂದ ಜಾತಿ (ಜಾತಿ ಸಂವಾದ, ಮಾರ್ಚ್ 04) ಎಂಬ ಬರಹದಲ್ಲಿ ಬ್ರಾಹ್ಮಣತ್ವದ ಬಗ್ಗೆ ಕೂಲಂಕಷವಾಗಿ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಬ್ರಾಹ್ಮಣರು ಬೇರೆ ಜಾತಿಯ ಹುಡುಗಿಯರಿಗೆ ಬದುಕು ಕೊಡುತ್ತಿದ್ದಾರೆ.

ಸಹನಾ ಕಾಂತಬೈಲು ಬಾಲಂಬಿ

ವೇದ ಕಾಲದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಯಾರೂ ಸೃಷ್ಟಿಸಲಿಲ್ಲ. ಅದು ಸಮಾಜದ ಅನುಕೂಲಕ್ಕಾಗಿ ಹುಟ್ಟಿಕೊಂಡಿತು. ಯಾವುದೇ ಸಮಾಜ ವ್ಯವಸ್ಥಿತವಾಗಿ ನಡೆಯಬೇಕಿದ್ದರೆ ಎಲ್ಲಾ ವೃತ್ತಿಗಳನ್ನು ಮಾಡುವ ಜನರು ಇರಬೇಕಾಗುತ್ತದೆ. ಈ ವೃತ್ತಿಗಳ ಆಧಾರದಲ್ಲಿ ಜಾತಿಗಳು ಹುಟ್ಟಿದವು.

ಕೆ.ಆರ್.ಶ್ರೀನಿವಾಸಮೂರ್ತಿ ಹಟ್ಟಿಯಂಗಡಿ

ಜಾತಿ ಜಾತಿ ಎನ್ನುತ್ತಾ ಕೇವಲ ಬ್ರಾಹ್ಮಣ ಜಾತಿಯನ್ನು ಗುರಿಯಾಗಿಟ್ಟುಕೊಂಡು ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸುತ್ತಿರುವುದು ಎಷ್ಟು ಸಮಂಜಸ. ಇಂದು ಬ್ರಾಹ್ಮಣರೆನ್ನುವ ಮಂದಿ ಅಲ್ಪಸಂಖ್ಯಾತರು ಎಂಬುದು ಎಲ್ಲರ ಗಮನದಲ್ಲಿರಲಿ.

ಎಂ.ಟಿ. ಶಾಂತಿಮೂಲೆ ಪೈಲಾರು

ಜಾತಿಯ ಬಗೆಗೆ ನಿಖರ, ಸ್ಪಷ್ಟ ತಿಳುವಳಿಕೆಯೇ ಇಲ್ಲದೆ ಬೆಳೆದ ನನಗೆ (ಅಥವಾ ಅಪ್ರಜ್ಞಾಪೂವಾಕವಾಗಿ ಅದನ್ನು ನಿರಾಕರಿಸಿದ ಪರಿಣಾಮವೋ) ಜಾತಿಯ ಕರಾಳ ಹಿಡಿತದ ಅನುಭವವಾದದ್ದು ನಾನು ಪ್ರೀತಿಸಿದ ವ್ಯಕ್ತಿ ಬೇರೆ ಜಾತಿಯವರೆಂಬ ವಿಷಯ ಉಂಟುಮಾಡಿದ ಆತಂಕ, ತಲ್ಲಣಗಳಿಂದ.

ಸುಧಾ ಬಿ.ಎಸ್ ಶಿಕಾರಿಪುರ

ಗ್ರಾಮ ನಗರವೆನ್ನದೆ ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ರೀತಿಯಲ್ಲಿ ಜಾತಿಯ ಅನುಭವವಾಗುತ್ತಿದೆ.

ನರಸಿಂಹರಾಜು ಕೆ. ತುಮಕೂರು.

ಪ್ರೊ. ಎಂ. ಯು. ಕೃಷ್ಣಯ್ಯ  `ಅಸ್ಪೃಶ್ಯತೆ ಹುಟ್ಟಿದ್ದೇ ಕೊಳಕಿನಿಂದ' ಎಂಬ ವಾದವೊಂದನ್ನು ಮಂಡಿಸಿದ್ದಾರೆ (ಜಾತಿ ಸಂವಾದ, ಮಾರ್ಚ್ 4).  ಚಪ್ಪಲಿ ಹೊಲೆಯುವವರ, ಕಮ್ಮೋರಿಕೆ ಮಾಡುವವರ ವೃತ್ತಿ ಕೊಳಕಾದುದು. ಕೊಳಕು ಮೆತ್ತಿಕೊಂಡ ಜನ ಕೊಳಕರಾದರು. ಜನ ಅವರನ್ನು ಊರಿನಿಂದಾಚೆ ನಿಲ್ಲಿಸಿದರು.

ಶಿವಕುಮಾರ ಮೈಸೂರು

ತಮ್ಮ ಜಾತಿ ಯಾವುದು ಎಂದು ಗೊತ್ತಿರುವವರು ಮತ್ತು ತಮ್ಮ ಜಾತಿಯ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುವವರು ಒಂದು ಸರಳವಾದ ಪ್ರಶ್ನೆಯ ಬಗ್ಗೆ ಯೋಚಿಸಬೇಕು.

ಗೋಪಾಲ್ ಗುರು ಸುಂದರ್ ಸರುಕ್ಕೈ ಕನ್ನಡಕ್ಕೆ: ಮಾಧವ ಚಿಪ್ಪಳಿ
Top