ಜಾತಿ ಸಂವಾದ 16

ಜಾತಿ ಸಂವಾದ 16
ಜಾತಿ ತಿಳಿಯುವದು ಹೇಗೆ ? ಮುಂದುವರಿಕೆ ...

ವೇದ ಕಾಲದಲ್ಲಿನ ವರ್ಣ ವ್ಯವಸ್ಥೆಯನ್ನು ಗಮನಿಸಿದರೆ ಮಾಡುವ ಕೆಲಸದಿಂದ ವರ್ಣ ವ್ಯವಸ್ಥೆ ರೂಪಗೊಂಡಿದನ್ನು ಕಾಣಬಹುದು. ಹಾಗಾಗಿ ಜಾತಿ ಎನ್ನುವುದು ವೃತ್ತಿ ಸೂಚಕವಾಗಿತ್ತು.

-ವಿದ್ವಾನ್ ವೀರೇಂದ್ರ ಭಟ್ಟ ಉಂಚಳ್ಳಿ ಸಿದ್ದಾಪುರ

ವಚ್ಛತೆ, ಗುಣಗಳು, ಆಚಾರ ವಿಚಾರಗಳು, ಒಂದು ಜಾತಿಯ ಸ್ವತ್ತಲ್ಲ. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಶಿವ `ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯ ಉನ್ನತ ಯತಿವರನು' ಎಂದು ಹೇಳುತ್ತಾನೆ. ಅದರಿಂದ ಜಾತಿ ಹುಟ್ಟಿನಿಂದ ಬರುವಂಥದಲ್ಲ ಎಂದು ಸಾಧಿತವಾಗುತ್ತದೆ.

ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ ಬೆಂಗಳೂರು

ಜಾತಿ ಭೇದವೆಂಬುದು ಕೆಲವೊಂದು ವೈಶಿಷ್ಟ್ಯಗಳ ಆಧಾರದ ಮೇಲೆ ಹುಟ್ಟಿಕೊಂಡಿದೆ. ನಾವು ಹೊಸ ಮನೆ ಕಟ್ಟಿದಾಗ ಮೊದಲು ಹಸುವನ್ನು ಏಕೆ ಮನೆಯೊಳಗೆ ನುಗ್ಗಿಸಬೇಕು? ಎಮ್ಮೆಯನ್ನೇಕೆ ನುಗ್ಗಿಸಬಾರದು? ಎಮ್ಮೆಯೂ ಸಸ್ಯಹಾರಿಯಲ್ಲವೇ? ಎಮ್ಮೆಯ ಹಾಲನ್ನೂ ನಾವು ನಿತ್ಯ ಜೀವನದಲ್ಲಿ ಉಪಯೋಗಿಸುತ್ತೇವಲ್ಲವೇ?

-ಮಹಿಮಾ ಮಂಜುನಾಥ್ ನಾಡಿಗ್ ಬೆಳ್ಳೂರು

`ಕೊಳಕಿನಿಂದ ಶುದ್ಧತೆಯೆಡೆಗೆ' (ಜಾತಿ ಸಂವಾದದ, ಮಾ.4) ಎಂಬ ಬರಹದಲ್ಲಿ ಪ್ರೊ. ಎಂ. ಯು. ಕೃಷ್ಣಯ್ಯನವರು ವೀರಶೈವರ ಬಗ್ಗೆ ಬರೆದಿರುವ ಶೂದ್ರರು ಎಂಬ ಪದವು ಕೀಳು ಮನೋಭಾವ ಹಾಗೂ ಪೂರ್ವಗ್ರಹ ಪೀಡಿತವಾದುದು. ಇದು ವೀರಶೈವ ಧರ್ಮದ ಬಗೆಗೆ ಅವರಿಗಿರುವ ಅಧ್ಯಯನದ ಕೊರತೆಯನ್ನು ಎತ್ತಿ ಹಿಡಿದಂತಿದೆ.

ಡಾ. ಕೆ. ಎನ್. ಬಿ. ರಾಜ್ ದೊಡ್ಡಬಳ್ಳಾಪುರ

ನಮ್ಮದು ಹಳ್ಳಿಯ ಶಾಲೆ. ಕ್ಷೌರಿಕ ಜನಾಂಗಕ್ಕೆ ಸೇರಿದ ನನ್ನ ಸಹಪಾಠಿ ಇದ್ದ. ಆತನ ತಂದೆ ನಮ್ಮ ಊರಿನಲ್ಲೆ ಚಿಕ್ಕದಾದ ಕ್ಷೌರದಂಗಡಿ ಇಟ್ಟುಕೊಂಡಿದ್ದರು. ಅವರು ತಿಂಗಳಿಗೆ ಒಂದು ಬಾರಿ ಬಂದು ನಮ್ಮ ವಠಾರದಲ್ಲಿ ಗಂಡಸರಿಗೆಲ್ಲ ಕ್ಷೌರ ಮಾಡಿ ಅಕ್ಕಿ, ರಾಗಿ ಪಡೆದು ಹೋಗುತ್ತಿದ್ದರು.

ಎ.ಪಿ.ಸಿ. ಮಂಜು ನೆಲಮಂಗಲ

ಶಿವಕುಮಾರ ಅವರು ಹೇಳುವಂತೆ ಕೀಳು ಜಾತಿಗಳು ಸೃಷ್ಟಿಯಾದುದು ಬಹಿಷ್ಕೃತರಾದ ಬೌದ್ಧರಿಂದ. ಇದು ನಿಜವೇ ಆಗಿದ್ದರೆ ಬೌದ್ಧರೇಕೆ ಅಲ್ಲಿಯೇ ನೆಲಸುತ್ತಿದ್ದರು.

-ಶಂಕರ ಮಠಪತಿ ಮುಧೋಳ ಬಾಗಲಕೋಟೆ

ಸುಬ್ಬು ಹೊಲೆಯಾರ್, ವಿ.ಆರ್. ಕಾರ್ಪೆಂಟರ್, ವೀರಣ್ಣ ಮಡಿವಾಳರ್-ನನ್ನ ಸಮಕಾಲೀನ ಈ ಕವಿ, ಲೇಖಕರು ತಮ್ಮ ಹೆಸರಿನೊಂದಿಗೆ ಜಾತಿಯನ್ನು ಏಕೆ ಪರಿಚಯಿಸಿಕೊಳ್ಳುತ್ತಿದ್ದಾರೆ? ಕೆಳ ಜಾತಿಗೂ ಶ್ರೇಷ್ಠತೆಯ ಪಟ್ಟ ಕಲ್ಪಿಸಲೋ? ಅಥವಾ ವಚನ ಚಳವಳಿಯಂತೆ ಜಾತಿಯಿಂದಲೇ ಜಾತಿ ಖ್ಯಾತಿಯನ್ನು ಮರೆಸಲೊ?

ಸಂಪತ್ ಬೆಟ್ಟಗೆರೆ ಮೂಡಿಗೆರೆ

ಮನುಷ್ಯ ಬದುಕು ನಡೆಸುವುದಕ್ಕೆ ನಂಬಿಕೆ ಅಗತ್ಯ. ಜಾತಿ ವ್ಯವಸ್ಥೆ ನಿಂತಿರುವುದೂ ಈ ನಂಬಿಕೆಯ ನೆಲೆಗಟ್ಟಿನ ಮೇಲೆಯೇ. ಈ ವ್ಯವಸ್ಥೆಯಲ್ಲಿ ಸಮುದಾಯಗಳ ಮೂಲ ಕಸುಬು, ಆಚರಣೆ, ಆಹಾರ ಪದ್ಧತಿ ಮತ್ತು ಇತರ ಅಭ್ಯಾಸಗಳಿಗೆ ಅನುಸಾರವಾಗಿ ಜಾತಿ ವಿಂಗಡಣೆಯಾಗಿದೆ. ಇಂದಿಗೂ ಕೆಲ ಸಮುದಾಯಗಳ ಕಸುಬು, ಜಾತಿಗಳು ಒಂದೇ.

ಲಕ್ಷ್ಮೀಕಾಂತರಾಜು ಗುಬ್ಬಿ

ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಮನುಷ್ಯ ಕುಲವನ್ನು ಗುಣ, ಕರ್ಮಗಳನ್ನು ಆಧಾರವಾಗಿಟ್ಟುಕೊಂಡು ವಿಂಗಡಿಸ್ದ್ದಿದಾನೆಂದು ಹೇಳಿದ್ದಾನೆ. 12ನೇ ಶತಮಾನದಲ್ಲಿ ಶಿವಶರಣಕೂ ಮನುಷ್ಯರನ್ನು ಅವರ ಗುಣ ಅಂದರೆ ನಡೆ ಹಾಗೂ ನುಡಿಯ ಆಧಾರದ ಮೇಲೆ ವಿಂಗಡಿಸಿದ್ದಾರೆ.

-ಎಚ್.ಎಸ್. ಬಸವರಾಜು ತುಮಕೂರು

ಜಾತಿ, ಧರ್ಮ, ಲಿಂಗ ಇತ್ಯಾದಿ ಸಂಗೀತದ ಮೇಲೆ ಪರಿಣಾಮ ಬೀರುವುದೇ ಎಂದರೆ ಹೌದು ಎಂದೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವೂ ಮಗದೊಮ್ಮೆ ಪರೋಕ್ಷವೂ ಆದ ಸಂಬಂಧವನ್ನು ಈ ಅಂಶಗಳು ಸಂಗೀತ ಕ್ಷೇತ್ರದೊಂದಿಗೆ ಹೊಂದಿವೆ.

ಡಾ. ಶಶಿಕಾಂತ ಕೌಡೂರು ಮಂಗಳೂರು
Top