ಅಂತರ್ಜಾಲ-1

ಅಂತರ್ಜಾಲ-1
ಇದು ಜನಾಭಿಪ್ರಾಯ

ಜಾತಿ ನಿರ್ಮೂಲನೆಗೆ ಅಂತರಜಾತಿ ವಿವಾಹಗಳು ಖಂಡಿತವಾಗಿಯೂ ಪರಿಹಾರವಾಗಬಲ್ಲದು. ಅಂತರಧರ್ಮಿಯ ವಿವಾಹಗಳಿಗಿಂತ ಅಂತರಜಾತಿ ವಿವಾಹಗಳು ಸಮಾಜದ ಮೇಲೆ ಹೆಚ್ಚು ದುಷ್ಟಪರಿಣಾಮ (ಮರ್ಯಾದೆ ಹತ್ಯೆ) ಬೀರುತ್ತಿರುವುದು ಶೋಚನೀಯ ಸಂಗತಿ.

ಅನಿಲ್‌ಕುಮಾರ್.ಎಂ.ಶಾಕ್ಯಪುತ್ರ/ ಮೈಸೂರು

ಜಾತಿ ಎಂಬ ಸಮಸ್ಯೆ ಕೇವಲ ಭಾರತವನ್ನಷ್ಟೇ ವ್ಯಾಪಿಸಿಲ್ಲ. ಇದು ವಿಶ್ವದ ಎಲ್ಲ ದೇಶಗಳಲ್ಲೂ ಜಾತಿ ಪದ್ಧತಿಯ ವಿವಿಧ ರೂಪಗಳನ್ನು ನೋಡಬಹುದು. ಈ ಜಾತಿ ವ್ಯವಸ್ಥೆಯನ್ನು ವಿಶ್ವದ ಯಾವ ದೇವರು ಸೃಷ್ಟಿಸಲಿಲ್ಲ. ಜಾತಿ ವ್ಯವಸ್ಥೆಯನ್ನು ನಮ್ಮ ಹಿರಿಯರು ತಮ್ಮ ಕಿರಿಯರ ಅನುಕೂಲಕ್ಕಾಗಿ ಮಾಡಿದ್ದು.

ಭಾಗ್ಯ ದೋಟಿಹಾಳ/ ಬೆಂಗಳೂರು

ಜಾತಿ ವ್ಯವಸ್ಥೆ ಕೇವಲ ಹಳ್ಳಿಗಳಲ್ಲಷ್ಟೇ ಎಂಬ ನಂಬಿಕೆ ಹಳೆಕಾಲದಲ್ಲಿತ್ತು ಅದಕ್ಕಾಗಿ ಡಾ|| ಬಿ.ಆರ್. ಅಂಬೇಡ್ಕರ್ ಗ್ರಾಮಗಳು ಜಾತಿಗಳ ಬಿಲಗಳೆಂದು ಕರೆದರು. ಆದರೆ ಈಗ ನಗರಗಳಲ್ಲಿ ಸಹಿತ ಜಾತಿಗೊಂದು ಸಂಘಟನೆ, ಪತ್ರಿಕೆ ಭವನ, ಜಯಂತಿ ಆಚರಣೆ ಹಾಗೂ ಒಂದು ಪಕ್ಷದೊಡನೆ ಗುರುತಿಸಿಕೊಳ್ಳುವುದು ಕಂಡುಬರುತ್ತದೆ.

ಯು. ಶ್ರಿನಿವಾಸ ಮೂರ್ತಿ/ ಸಿರುಗುಪ್ಪ

ನಾನು ಸರ್ಕಾರಿ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದ ಸಂದರ್ಭ. ಆಗ ನನ್ನ ನೆಚ್ಚಿನ ಗೆಳತಿ ಬೇರೆ ಧರ್ಮದವಳಾಗಿದ್ದಳು. ನನ್ನ ಅವಳ ಒಡನಾಟ ಹೆಚ್ಚಾಗಿತು. ಒಟ್ಟಿಗೆ ಕೂಡುವುದು ಆಡುವುದು ಓದುವುದು ಊಟ ಮಾಡುವುದು ಹೀಗೆ. ಆಗ ಆಕೆ ಬುರ್ಕಾ ತೊಟ್ಟೆ ನಮ್ಮೊಡನೆ ಕೂತು ಪಾಠ ಕೇಳುತ್ತಿದ್ದಳು.

ದೀಪಾ ಮತ್ತೂರು, ದಾವಣಗೆರೆ ವಿಶ್ವವಿದ್ಯಾನಿಲಯ.

ನಮ್ಮದು ಈ ಜಾತಿ ಎನ್ನುವುದಕ್ಕಿಂತ ನಾವು ಆ ಜಾತಿಯವರು ಎನ್ನುವ ಸಂಖ್ಯೆಯೇ ಅಧಿಕ. ಸ್ವಜಾತಿ ಉತ್ಕರ್ಷೆಗಳು ಪರಜಾತಿ ನಿಷ್ಕರ್ಶೆಗಳು ಹಳ್ಳಿ ನಗರಗಳೆನ್ನದೇ ಅಸ್ಥಿತ್ವದಲ್ಲಿದೆ. ಜನ್ಮ ಕುಂಡಲಿ ಬರೆಸುವಾಗ ಜಾತಿಯನ್ನು ದಾಖಲಿಸುವ ಜರೂರು ಜನರನ್ನು ಒಗ್ಗಿಸಿದಂತಿದೆ.

ಗಾಣಿಗರ್ ಎನ್ ಎಸ್- ಗುಲಬರ್ಗಾ

ಹಿಂದಿನ ಕಾಲದಿಂದಲೂ ದಲಿತರು ಹಲಗೆ ಬಡಿಯುತ್ತಿದ್ದರುವುದನ್ನು ನಿಲ್ಲಿಸಿ ಇದನ್ನು ಮೇಲು ಜಾತಿಯವರೇ ಬಡಿಯಲಿ ಎಂದು ಹಲಗೆಯನ್ನು ಮನೆಯಿಂದ ಎಸೆದು ತಮ್ಮ ಪ್ರತಿಭಟನೆಯನ್ನು ತೋರಿಸುವವರು  ಇದರಲ್ಲಿ ಜಾತ್ಯಾತೀತ ಮನೋಬಾವನೆಯೇನೋ ಸರಿ ಕಲಾಪ್ರಕಾರಗಳು ನಶಿಸಿ ಹೋಗಲು ಜಾತಿಯೊಂದು ಪೆಡರಿಭೂತವಾಗಬಾರದು, ದಲಿತರು ಹಾಗ

ಕೆ. ಗಾಯಿತ್ರಿ ಮಂಜುನಾಥ್

ಆಧುನಿಕ ಸಂದರ್ಭದ ಜನಪದ ಕಲೆಗಳು ಒಂದೆಡೆ ಜಾತಿಯನ್ನು ಮೀರುತ್ತಾ,ಮತ್ತೊಂದು ಕಡೆ ಪ್ರಭಾವೀಜಾತಿ/ವರ್ಗದ ತೆಕ್ಕೆಗೆ ಬೀಳುತ್ತಿರುವುದು ವಿಪರ್ಯಾಸದ ಬೆಳವಣಿಗೆ ಎನಿಸಿದೆ. ಜನಪದ ಕಲಾಪ್ರದರ್ಶನಗಳಿಗೆ ಸಿಗುತ್ತಿರುವಭಾರೀ ಅವಕಾಶಗಳಿಂದಾಗಿ ನಗರದವರೂ,ಮಡಿವಂತರೂ, ಉನ್ನತಾಧಿಕಾರ

_ಡಾ|ಟಿ.ಗೋವಿಂದರಾಜು

ಇಂದು ಬಹಳ ಚರ್ಚಿತವಾಗುತ್ತಿರುವ ದಲಿತ-ಬ್ರಾಹ್ಮಣ ಎಂಬ ಜಾತಿ ವಿಷಯದಲ್ಲಿ, ನಾನು ಬ್ರಾಹ್ಮಣ ಸಮುದಾಯದವನಾಗಿರುವುದರಿಂದ ಬ್ರಾಹ್ಮಣರ ಮೇಲೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ನಿವಾರಿಸಲಿಚ್ಚಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರೆಲ್ಲೆರು ದಲಿತವಿರೋದಿಗಳೆಂಬಂತೆ ಬಿಂಬಿಸಲಾಗುತ್ತಿದೆ.

ಜಿ.ಎಸ್.ಐಯ್ಯರ್, ಮೈಸೂರು.

ಜಾತಿ ಎಂಬುವ ಶಬ್ಧ ಹುಟ್ಟಿದ್ದೆ ಆರ್ಯರು ಭಾರತಕ್ಕೆ ಬಂದಾಗಿನಿಂದವೆಂದು ಹೇಳಬಹುದು.

-ಹೆಚ್.ಎಂ.ಗುರುಶಿದ್ದಯ್ಯ, ಕಡ್ಲಬಾಳು. ಬಳ್ಳಾರಿ

ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯ, ಜಾತಿಪದ್ಧತಿಯ ಏಣಿ ಶ್ರೇಣಿಯಲ್ಲಿ ಕೆಳಜಾತಿಯ ಜನರು, ಇತರ ಕೀಳು ಪಂಗಡಗಳು, ಆದಿವಾಸಿ ಪಂಗಡಗಳಿಗೆ ಸೇರಿದ ಜನರು ತಮ್ಮ ಸಂಪ್ರದಾಯಗಳು, ಸಂಸ್ಕಾರಗಳು, ರೀತಿ ನೀತಿಗಳು, ವಿಧಿ ವಿಧಾನಗಳು ಮೊದಲಾದವುಗಳನ್ನು ಮೇಲ್ಜಾತಿಯವರು ರೂಪಿಸಿರುವ ಆಚರಣೆಗಳನ್ನು ಅನುಸರಿಸುತ್ತಿರುವುದು

ಹಾರೋಹಳ್ಳಿ ರವೀಂದ್ರ, ಮೈಸೂರು
Top