ಅಂತರ್ಜಾಲ-2

ಅಂತರ್ಜಾಲ-2
ಇದು ಜನಾಭಿಪ್ರಾಯ...

ಇತ್ತೀಚೆಗೆ ವೇದಿಕೆಗಳಲ್ಲಿ ಭಾಷಣಕಾರರಿಗೆ;ಪತ್ರಿಕೆಗಳ ಅಂಕಣಗಾರರಿಗೆ ಹರಿತವಾದ ಟೀಕೆಗೆ ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಯಾವ ಜಾತಿಯೂ ಸಿಕ್ಕಿದಂತೆ ಕಾಣಿಸುವುದಿಲ್ಲ.

ಪ,ರಾಮಕೃಷ್ಣ ಶಾಸ್ತ್ರಿ, ಬೆಳ್ತಂಗಡಿ ತಾಲೂಕು ದ.ಕ.

 ವೃತ್ತಿಗಳನ್ನು  ಆಧರಿಸಿ ಜಾತಿಗಳು ಹುಟ್ಟಿದವೆ ಹೊರತು  ಜಾತಿಗಳನ್ನು ಯಾರೂ ಸೃಷ್ಟಿಸಿಲ್ಲ. ವೇದಗಳ ಕಾಲದಲ್ಲಿ ನಾಲ್ಕು ಜಾತಿಗಳದ್ದರೆ ಈಗ ಸಾವಿರಾರು ಜಾತಿಗಳು ಉಪಜಾತಿಗಳಾಗಿವೆ.

ರಶ್ಮಿ ಕುಲಕರ್ಣಿ/ಧಾರವಾಡ.

ಜಾತಿ, ಅಂದರೆ ಹುಟ್ಟು. ಅದು ಆಕಸ್ಮಿಕವೇ ಹೊರತು ಆಯ್ಕೆಯಲ್ಲ. ಜಾತಿ ಖಂಡಿತವಾಗಿಯೂ ಜೀನ್ಸ್ನಲ್ಲಿರುವುದಲ್ಲ. ವಾತಾವರಣ ಹೇಗೆ ಸಾಕುತ್ತದೋ, ಹಾಗೆ ಶರೀರ ಮತ್ತು ಮನಸ್ಸು ಬೆಳೆಯತ್ತದೆ. ಜಾತಿ ಪದ್ಧತಿ ಅಪ್ಪಟ ಸಾಮಾಜಿಕ. ನಾನು ಬ್ರಾಹ್ಮಣರ ಆರುವೇಲೋ, ಅರವತ್ತೊಕ್ಕಲೋ ನನಗಿನ್ನೂ ಖಚಿತವಾಗಿಲ್ಲ.

ಆರ್. ಕೆ. ದಿವಾಕರ, ಬೆಂಗಳೂರು

ಸಿನಿಮಾದಲ್ಲೂ ಜಾತಿ ಇದೆಯಾ? ಇಲ್ಲವೇ ಇಲ್ಲ ಎಂಬುದು ಸತ್ಯಕ್ಕೆ ದೂರವಾದುದು ಎನಿಸಿಬಿಡುವುದು ನನಗಾಗಿರುವ ಅನುಭವ.

ಜಿ.ಆರ್. ಸತ್ಯಲಿಂಗರಾಜು, ನಿರ್ದೇಶಕ ( ಗೌರ್ಮೆಂಟ್ ಬ್ರಾಹ್ಮಣ)

ಜಾತಿ ವ್ಯವಸ್ಥೆಯೊಂದಿಗೆ ಥಳಕು ಹಾಕಿಕೊಂಡಿರುವ ಹಲವಾರು ಸಂಗತಿಗಳನ್ನು ಇಲ್ಲಿಯವರೆಗೆ ಈ ಚರ್ಚಾ ಮಾಲಿಕೆಯಲ್ಲಿ ನೋಡಿದೆವು. ಜಾತಿ ಬೃಹತ್ ಮರ ಇದ್ದಂತೆ. ಉಚ್ಛರಿಸಲು ಎರಡೇ ಅಕ್ಷರದ್ದು.

ಸವಿತಾ

ಭಾರತೀಯ ಸಮಾಜದ ಜಾತಿ ವ್ಯವಸ್ಥೆಯ ಕುರಿತಾದ ಕಳೆದ ಸಂಚಿಕೆಯಲ್ಲಿನ ಪ್ರತಿಕ್ರಿಯೆಗಳು ನಿಜವಾಗಿಯೂ ವಾಸ್ತವಿಕ ಮತ್ತು ಅರ್ಥಪೂರ್ಣವಾದವುಗಳು.  ಕಳೆದ ೬೬ ವರುಷಗಳ ನಮ್ಮ ಸ್ವತಂತ್ರ ಭಾರತದಲ್ಲಿ ನೂರಾರು ರೀತಿಯ ಮನಸ್ಸುಗಳು ಬೆಳೆಯುತ್ತಾ ಬಂದಿವೆ ಅದನ್ನೇ ನಾವು ವೈಚಾರಿಕತೆ  ಎನ್ನುತ್ತೇವೆ.

ಶಂಕರಾನಂದ ಹಿರೇಮಠ್, ಶಿವಮೊಗ್ಗ

ಒಂದು ಸಮಾಜ ರಚನೆಯಾಗಲು ಎಲ್ಲಾ ಜಾತಿಯವರೂ ಬೇಕಾಗುತ್ತಾರೆ. ಅವರವರ ಕೆಲಸ ಕಾರ್ಯಗಳಿಗನುಸಾರವಾಗಿ ಹಿಂದೆ ಜಾತಿಯನ್ನು ಮಾಡಿದ್ದರು. " ಜನ್ಮನಾ ಜಾಯತೇ ಶೂದ್ರ " ಹುಟ್ಟುವಾಗ ಎಲ್ಲರೂ ಶೂದ್ರರೇ ಆಗಿರುತ್ತಾರೆ. ನಂತರವೇ ಆ ಮಗುವಿನ ತಂದೆ ಯಾವ ಜಾತಿಯ ವರಾಗಿರುತ್ತಾರೋ ಅದೇ ಜಾತಿ ಮಗುವಿಗೂ ಬರುತ್ತದೆ.

ಎಸ್.ಟಿ.ಶಾಂತಕುಮಾರಿ, ಬೆಂಗಳೂರು

ಜಾತಿ-ಧರ್ಮ-ಲಿಂಗ ಇತ್ಯಾದಿ ಸಂಗೀತದ ಮೇಲೆ ಪರಿಣಾಮ ಬೀರುವುದೇ ಎಂದರೆ ಹೌದು ಎಂದೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವೂ ಮಗದೊಮ್ಮೆ ಪರೋಕ್ಷವೂ ಆದ ಸಂಬಂಧವನ್ನು ಈ ಅಂಶಗಳು ಸಂಗೀತಕ್ಷೇತ್ರದೊಂದಿಗೆ ಹೊಂದಿದೆ.

ಡಾ. ಶಶಿಕಾಂತ ಕೌಡೂರು

ಜಾತಿ ಸಂವಾದ ಅಂಕಣದ ಜಾತಿ ಮೀಮಾಂಸೆಯ ಸೈದ್ಧಾಂತಿಕ ನೆಲೆಗಳು (ಫೆ.೧೧) ಲೇಖನವು ಸಾಮಾಜಿಕ ವಾಸ್ತವತೆಯಾದ ಜಾತಿ ಮೂಲದ ಹಿಂದಿರುವ ಸೈದ್ಧಾಂತಿಕ ವಾದಗಳ ಚರ್ಚೆಯ ಅಗತ್ಯವನ್ನು ಸೂಕ್ಷ್ಮವಾಗಿ ಮಂಡಿಸಿದೆ. 

-ಸುಭಾಷ ರಾಜಮಾನೆ, ಕುಂದಾಪುರ
Top