ಅಂತರ್ಜಾಲ-3

ಅಂತರ್ಜಾಲ-3
ಇದು ಜನಾಭಿಪ್ರಾಯ

ಜಾತಿ ಮತ್ತು ಜಾತೀಯತೆಗಳ ಬಗ್ಗೆ ಕೂಲಂಕುಷವಾಗಿ ತಿಳಿಯುವ ಮೊದಲು ಮಾನವನ ವಿಕಸನ ಮತ್ತು ಸ್ವಭಾವತಃ ಮಾನವನ ಗುಣಾವಗುಣಗಳನ್ನು ವಿಶ್ಲೇಷಣೆ ಮಾಡುವುದು ಒಳಿತು.  ಇದರಿಂದ ಜಾತಿಗಳು ಹುಟ್ಟಿದ ಬಗೆ ಮತ್ತು ಇಂದು ಸಮಾಜದಲ್ಲಿ ಅದರ ಆಳ, ವಿಸ್ತಾರ ಹಾಗೂ ವ್ಯಾಪಕತೆಗಳನ್ನು ಅರಿಯುವುದು ಸುಲಭವಾಗುತ್ತದೆ. 

- ಶ್ರೀ ಶ್ರೀಧರ್.

ಮನುಷ್ಯರಾಗಿ ಬದುಕಲು ’ಜಾತಿ’ ಬೇಕಿಲ್ಲ. ಜಾತಿ ವಿನಾಶಕ್ಕಾಗಿ ಈ ನೆಲದಲ್ಲಿ ಕನಕದಾಸ, ಸರ್ವಜ್ಞ, ಬಸವಣ್ಣ, ಶರೀಫ್‌ರಂಥವರು ಸಾಕಷ್ಟು ಹಿರಿಯರು ಬೆಟ್ಟದಷ್ಟು ಪ್ರಯತ್ನ ನಡೆಸಿದರೂ ಆ ’ಜಾತಿ’ ದೂರವಾಗಿಲ್ಲ!

-ಸುಜಾತಾ ವಿಶ್ವನಾಥ್.

ಜಾತಿಯನ್ನು ರಕ್ಷಿಸಲು ವಿವಾಹ ಸಂಸ್ಥೆಯನ್ನು ಜಾರಿ ಮಾಡಿಕೊಂಡ ಸಮಾಜ, ಆಹಾರವನ್ನು ಒಂದು ಆಯುಧವಾಗಿ ಜಾತಿಶ್ರೇಷ್ಠತೆಯನ್ನು ಕಾಪಾಡಲು ಬಳಸಿದೆ. ಆಹಾರ ಜೀವನಪದ್ಧತಿಯಾಗಿದೆ. ಸಂಸ್ಕೃತಿಯ ಭಾಗವಾದ ಆಹಾರವನ್ನು ಶ್ರೇಷ್ಠ - ಅಧಮ ಎಂದು ಗುರುತಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. 

ಡಾ. ಆರ್. ಸುನಂದಮ್ಮ, ವಿಜಾಪುರ

ಭಾರತೀಯ ಸಮಾಜದಲ್ಲಿ ಜಾತಿ ನಿರ್ಧಾರವಾಗುವುದು ಆಹಾರ ಪದ್ಧತಿಯಿಂದಲೆ. ಹನ್ನೆರಡನೆಯ ಶತಮಾನದಲ್ಲಿ ಕಾಯಕತತ್ವವನ್ನು ಬಳಕೆಗೆ ತಂದ ಬಸವಣ್ಣನವರು  ಶಾಕಾಹಾರಕ್ಕೆ ಹೆಚ್ಚು ಮಾನ್ಯತೆ ನೀಡಿದರು.

ಶ್ವೇತರಾಣಿ.ಎಚ್. ಮೈಸೂರು
Top